ಉಡುಪಿ:27 ಕೇಂದ್ರಗಳಲ್ಲಿ -15,680 ವಿದ್ಯಾರ್ಥಿಗಳು ಪಿ.ಯು.ಸಿ. ಪರೀಕ್ಷೆ

3:50 PM, Wednesday, March 12th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

II-PUCಮಂಗಳೂರು/ಉಡುಪಿ : ದ್ವಿತೀಯ ಪಿ.ಯು.ಸಿ. ಪರೀಕ್ಷೆ ಮಾ.12ರಿಂದ 27ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.25ರವರೆಗೆ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ 34,185 ಮತ್ತು ಉಡುಪಿ ಜಿಲ್ಲೆಯಲ್ಲಿ 15,680 ವಿದ್ಯಾರ್ಥಿಗಳು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 49 ಪರೀûಾ ಕೇಂದ್ರಗಳಿದ್ದು, 183 ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಲ್ಲಿ 30617 ಫ್ರೆಶ್‌, 1200 ರಿಪೀಟರ್, 2468 ಖಾಸಗಿ ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿನಿಯರ ಸಂಖ್ಯೆ 17502 ಆಗಿದ್ದು, ವಿದ್ಯಾರ್ಥಿಗಳ ಸಂಖ್ಯೆ 16,683 ಆಗಿದೆ. ಕಲಾ ವಿಭಾಗದಲ್ಲಿ 7008, ವಿಜ್ಞಾನ ವಿಭಾಗದಲ್ಲಿ 11,964 ಹಾಗೂ ವಾಣಿಜ್ಯ ವಿಭಾಗದಲ್ಲಿ 15,213 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಡಿಡಿಪಿಯು ಕೆ.ಆರ್‌.ತಿಮ್ಮಯ್ಯ ‘ಉದಯವಾಣಿ’ಗೆ ತಿಳಿಸಿದರು.

ಮಂಗಳೂರು ತಾಲೂಕಿನ ಕೆಲವೆಡೆ ಪ್ರಮುಖವಾಗಿ ಮಂಗಳೂರು-ತಲಪಾಡಿ ಮಾರ್ಗದಲ್ಲಿ ಬೆಳಗ್ಗಿನ ವೇಳೆ ಟ್ರಾಫಿಕ್‌ ಜಾಂ ದಿನನಿತ್ಯದ ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.

ಉಡುಪಿ ಜಿಲ್ಲೆಯಲ್ಲಿ 97 ಕಾಲೇಜುಗಳ 8,210 ಬಾಲಕಿಯರು, 7,470 ಬಾಲಕರು 27 ಕೇಂದ್ರಗಳಲ್ಲಿ ಹಾಜರಾಗಲಿದ್ದಾರೆ. ಅವರಲ್ಲಿ ಪ್ರಥಮ ಬಾರಿಗೆ 13,826 ವಿದ್ಯಾರ್ಥಿಗಳು, ಪುನರಾವರ್ತಿತ 524, ಖಾಸಗಿ 1,330 ವಿದ್ಯಾರ್ಥಿಗಳಿದ್ದಾರೆ. ಕಲಾ ವಿಭಾಗದಲ್ಲಿ 2,938, ವಾಣಿಜ್ಯ 8,383, ವಿಜಾnನ 4,359 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಎಂದು ಡಿಡಿಪಿಯು ಶಿಂಧಾ ಎಸ್‌.ಎಸ್‌. ‘ಉದಯವಾಣಿ’ಗೆ ತಿಳಿಸಿದರು.

ರಾಜ್ಯಶಾಸ್ತ್ರ ಹಾಗೂ ಲೆಕ್ಕಶಾಸ್ತ್ರ ವಿಷಯದ ಪರಿಕ್ಷೆ ಮೊದಲ ದಿನ ನಡೆಯಲಿದೆ. ಪರೀûಾ ಕೇಂದ್ರಗಳ 400 ಮೀಟರ್‌ ಸುತ್ತಳತೆಯಲ್ಲಿ ಪರೀûಾ ದಿನಗಳಂದು ಯಾವುದೇ ಜೆರಾಕ್ಸ್‌ ಅಂಗಡಿಗಳನ್ನು ತೆರೆಯದಂತೆ ಹಾಗೂ ಸಾರ್ವಜನಿಕರು ಪರೀûಾ ಕೇಂದ್ರಗಳಿಗೆ ಪ್ರವೇಶಿಸುವುದು ಮತ್ತು ಪರೀûಾ ಕೇಂದ್ರ ಸುತ್ತುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆ ವೇಳೆ ಯಾವುದೇ ತೊಂದರೆಗಳಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲಾ ಪಿ.ಯು. ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪಿ.ಯು.ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರೀಕ್ಷೆಯ ಪೂರ್ವಭಾವಿ ಸಿದ್ದತೆ ಕುರಿತು ಇತ್ತೀಚೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಕಾಲೇಜುಗಳ ಪ್ರಾಂಶುಪಾಲರುಗಳ ಸಭೆಯನ್ನು ನಡೆಸಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English