ಉಡುಪಿ: ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವು, ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

Tuesday, October 31st, 2017
vinitha bhat

ಉಡುಪಿ: ಟೀಸ್ಟಾಲ್ ನಡೆಸುವ ತಂದೆಗೆ ಅವಳೇ ಭವಿಷ್ಯದ ಆಶಾಕಿರಣ. ಆ ದಂಪತಿಗೆ ಒಬ್ಬಳೇ ಮುದ್ದಾದ ಮಗಳು. ಯುವತಿ ಹೆಸರು ವಿನಿತಾ ಭಟ್. ಕ್ರೀಡೆಯಲ್ಲಿ ಚೂಟಿ, ಕಲಿಕೆಯಲ್ಲೂ ನಂಬರ್ ಒನ್. ಬೆಂಗಳೂರಿನಲ್ಲಿ ನೆಲೆಸಿರುವ ವಾಸುದೇವ ಭಟ್ ಮತ್ತು ಮಾಲಿನಿ ದಂಪತಿಗೆ ಇವಳೊಬ್ಬಳೇ ಮಗಳು. ಎಂ. ಕಾಂ ಓದಿಕೊಂಡಿದ್ದ ವಿನಿತಾ ಬದುಕಿದ್ದರೆ ಸದ್ಯ ಪ್ರತಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿ ಪೋಷಕರಿಗೆ ಆಧಾರವಾಗುತ್ತಿದ್ದಳು.  ಆದರೆ ಅವರ ಬದುಕಿನ ಆಶಾಕಿರಣವಾಗಿದ್ದ ಮಗಳು ಬಾರದ ಲೋಕಕ್ಕೆ ತೆರಳಿದ್ದಾಳೆ. ಹಾಗಾದ್ರೆ ಈ ಮನಕಲಕುವ ಕಥೆ ಯಾರದ್ದು, ನಡೆದಿದ್ದಾದರೂ ಹೇಗೆ […]

ಉಡುಪಿ ಜಿಲ್ಲೆಯ 100 ದಲಿತ ಕುಟುಂಬಗಳಿಗೆ ಬೌದ್ಧ ಧಮ್ಮ ದೀಕ್ಷೆ ನೀಡುವ ಸಂಕಲ್ಪ

Saturday, October 14th, 2017
Narayana manoor

ಉಡುಪಿ: ಮುಂದಿನ ಅ.14ರೊಳಗೆ ಉಡುಪಿ ಜಿಲ್ಲೆಯ 100 ದಲಿತ ಕುಟುಂಬಗಳಿಗೆ ಬೌದ್ಧ ಧಮ್ಮ ದೀಕ್ಷೆ ನೀಡುವ ಸಂಕಲ್ಪ ಹೊಂದಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ, ದಲಿತ ಚಿಂತಕ ನಾರಾಯಣ ಮಣೂರು ತಿಳಿಸಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಐತಿಹಾಸಿಕ ಧಮ್ಮ ದೀಕ್ಷಾ ದಿನದ ಅಂಗವಾಗಿ ಶನಿವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ‘ಬೌದ್ಧ ದಮ್ಮದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ […]

ಉಡುಪಿ: ರೈ ಅವರಿಗೆ ಕಾರಂತ ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆ

Tuesday, October 10th, 2017
udupi

ಉಡುಪಿ: ಉಡುಪಿಯಲ್ಲಿ ಭಜರಂಗದಳ, ಬಿಜೆಪಿ, ವಿಹಿಂಪ ಸೇರಿದಂತೆ ಹಲವು ಸಂಘಟನೆಗಳು ನಟ ಪ್ರಕಾಶ್‌ ರೈ ಅವರಿಗೆ ಕಾರಂತ ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ. ಇಂದು ನಟ ಪ್ರಕಾಶ್‌ ರೈ ಅವರಿಗೆ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿದ್ದು, ಕಪ್ಪು ಬಾವುಟ ತೋರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಾರ್ಯಕರ್ತರ ಬಂಧನಕ್ಕೆ ಪೊಲೀಸರು ಮುಂದಾಗಿದ್ದು, ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು […]

ರಸ್ತೆ ಅವಘಡದಲ್ಲಿ ಮಗುವನ್ನು ಕಳೆದುಕೊಂಡವರ ವಿರುದ್ಧವೇ ಪ್ರಕರಣ ದಾಖಲು

Monday, October 9th, 2017
Udupi

ಉಡುಪಿ: ಪರ್ಕಳ ರಾಷ್ಟ್ರೀಯ ಹೆದ್ದಾರಿ  ನಡೆದ ರಸ್ತೆ ಅವಘಡದಲ್ಲಿ ಮಗುವನ್ನು ಕಳೆದುಕೊಂಡವರ ವಿರುದ್ಧವೇ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 279ನೇ ಕಲಂ (ನಿರ್ಲಕ್ಷ್ಯದ ಚಾಲನೆ), 337ನೇ ಕಲಂ (ಇನ್ನೊಬ್ಬ ರಿಗೆ ಗಾಯ ವಾದದ್ದು), 304ಎ ಕಲಂ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದದ್ದು) ಹೀಗೆ ಮೂರು ಪ್ರಕರಣಗಳು ದಾಖಲಾಗಿವೆ. ಉದ್ಯಾವರ ಕುತ್ಪಾಡಿ ನಿವಾಸಿಗಳಾದ ಉಮೇಶ ಮತ್ತು ಪ್ರಮೋದಾ ಅವರು ಒಂದೂವರೆ ವರ್ಷದ ಮಗು ಚಿರಾಗ್‌ನೊಂದಿಗೆ ಅ. 2ರಂದು ಪರ್ಕಳದಿಂದ ಆತ್ರಾಡಿಗೆ ತೆರಳುವಾಗ ಪರ್ಕಳ ಬಿ.ಎಂ. ಶಾಲೆ ಬಳಿ ಹೊಂಡಗುಂಡಿಗಳನ್ನು ತಪ್ಪಿಸುವಾಗ ಬೈಕ್‌ […]

ಯಕ್ಷಗಾನ ಲೋಕದ ದಿಗ್ಗಜ ಚಿಟ್ಟಾಣಿ ಅವರ ಅಂತಿಮ ಯಾತ್ರೆ, ಅಂತಿಮ ದರ್ಶನ

Wednesday, October 4th, 2017
chittani RH

ಉಡುಪಿ : ಮಣಿಪಾಲ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಯಕ್ಷಗಾನ ಲೋಕದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತಿಮ ಯಾತ್ರೆ  ನಡೆಸಲಾಗುತ್ತಿದ್ದು, ಇಂದು ಸಂಜೆ ಸ್ವಗೃಹ ಹೊನ್ನಾವರದ ಗುಡ್ಡೆಕೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರಗಳು ನಡೆಯಲಿವೆ. ಬೆಳಗ್ಗೆ 8.30 ರ ವರಗೆ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ರಘುಪತಿ ಭಟ್‌, ಯಕ್ಷಗಾನ ಮೇಳಗಳ ಯಜಮಾನ ಕಿಶನ್‌ ಹೆಗ್ಡೆ ಸೇರಿದಂತೆ ನೂರಾರು ಗಣ್ಯರು ,ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ವಿಶೇಷ […]

ಕೇಂದ್ರ ಸರ್ಕಾರದ ‘ಸ್ವಚ್ಛತಾ ದರ್ಪಣ್’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಆಯ್ಕೆ

Monday, October 2nd, 2017
Dr-ravi

ಮಂಗಳೂರು: ಕೇಂದ್ರ ಸರ್ಕಾರದಿಂದ ಸ್ವಚ್ಛತೆಗಾಗಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ‘ಸ್ವಚ್ಛತಾ ದರ್ಪಣ್’ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆ ಆಯ್ಕೆಯಾಗಿದೆ. ಪ್ರಶಸ್ತಿಗಾಗಿ ರ್ಯಂಕಿಂಗ್ನಲ್ಲಿರುವ ದೇಶದ ನಾನಾ ರಾಜ್ಯಗಳ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಹಾಗೂ ನೆರೆಯ ಉಡುಪಿ ಜಿಲ್ಲೆ ಕೂಡ ಸೇರಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ ಎಂ.ಆರ್. ರವಿ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ  ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ದಕ್ಷಿಣ ಕನ್ನಡ – ಉಡುಪಿ ಲೋಕಸಭೆ ಬಿಜೆಪಿಗೆ ಭರ್ಜರಿ ಗೆಲುವು

Friday, May 16th, 2014
Nalin Kumar

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳೀನ್‌ ಕುಮಾರ್‌ ಕಟೀಲ್‌ ಅವರು 1,43,000 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜನಾರ್ದನ ಪೂಚಾರಿ ಅವರನ್ನು ಸೋಲಿಸಿದ್ದಾರೆ. ನಳೀನ್‌ ಕುಮಾರ್‌ ಕಟೀಲ್‌ ಅವರು 6,42,739 ಮತಗಳನ್ನು ಪಡೆದರೆ. ಜನಾರ್ದನ ಪೂಚಾರಿ ಅವರು 4,99,030 ಮತಗಳನ್ನು ಪಡೆದರು. ದಕ್ಷಿಣಕನ್ನಡ, ಉಡುಪಿ-ಚಿಕ್ಕಮಗಳೂರಿನಲ್ಲಿ ನರೇಂದ್ರ ಮೋದಿ ಅಲೆಗೆ ಭರ್ಜರಿ ಮತಗಳು ಬಿಜೆಪಿ ತೆಕ್ಕೆಗೆ ಬಿದ್ದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲು ಅವರು ಸತತ ಎರಡನೇ ಬಾರಿಗೆ […]

ಉಡುಪಿ:27 ಕೇಂದ್ರಗಳಲ್ಲಿ -15,680 ವಿದ್ಯಾರ್ಥಿಗಳು ಪಿ.ಯು.ಸಿ. ಪರೀಕ್ಷೆ

Wednesday, March 12th, 2014
II-PUC

ಮಂಗಳೂರು/ಉಡುಪಿ : ದ್ವಿತೀಯ ಪಿ.ಯು.ಸಿ. ಪರೀಕ್ಷೆ ಮಾ.12ರಿಂದ 27ರ ವರೆಗೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.25ರವರೆಗೆ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ 34,185 ಮತ್ತು ಉಡುಪಿ ಜಿಲ್ಲೆಯಲ್ಲಿ 15,680 ವಿದ್ಯಾರ್ಥಿಗಳು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ದ.ಕ. ಜಿಲ್ಲೆಯಲ್ಲಿ ಒಟ್ಟು 49 ಪರೀûಾ ಕೇಂದ್ರಗಳಿದ್ದು, 183 ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಲ್ಲಿ 30617 ಫ್ರೆಶ್‌, 1200 ರಿಪೀಟರ್, 2468 ಖಾಸಗಿ ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿನಿಯರ ಸಂಖ್ಯೆ 17502 ಆಗಿದ್ದು, ವಿದ್ಯಾರ್ಥಿಗಳ ಸಂಖ್ಯೆ […]