ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯಿಂದ ವಾರ್ಷಿಕ ಪೂಜೆ, ಸನ್ಮಾನ

7:33 PM, Tuesday, August 23rd, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮುಂಬಯಿ: ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಕಳೆದ 13 ವರ್ಷಗಳಿಂದ ಧಾರ್ಮಿಕ ಸೇವೆಯೊಂದಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು ಸದಸ್ಯರ ಹಾಗೂ ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಸಮಿತಿಯು ಯಶಸ್ವಿಯಾಗಿದ್ದೇವೆ. ಪ್ರತಿವರ್ಷ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಸಮಿತಿಯ ಸದಸ್ಯರಿಂದಲೇ ನಡೆಸುತ್ತಾ ಬಂದಿದ್ದು ಸದಸ್ಯರ ಹಾಗೂ ಮಕ್ಕಳ ಪ್ರತಿಭಾ ವಿಕಸನಕ್ಕೆ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಒಂದು ಉತ್ತಮ ವೇದಿಕೆಯಾಗಿದೆ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಶೆಟ್ಟಿ ಯವರು ತಿಳಿಸಿದರು.

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ 13ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ಆ. 21ರಂದು ಸಂಜೆ ಉತ್ಕರ್ಷ ವಿದ್ಯಾಮಂದಿರದ ಸಭಾಗೃಹ, ದಪ್ತರಿ ರೋಡ್ ಮಲಾಡ್ ಪೂರ್ವ ಮುಂಬಯಿ ಇಲ್ಲಿ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪ್ರತಿ ವರ್ಷ ನಾವು ಹೊಸ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದು ಇದು ದಾನಿಗಳೂ ಸೇರಿ ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯ. ದಶಮಾನೋತ್ಸವ ಸಂದರ್ಭದಲ್ಲಿ ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಅವರಿಂದ ಯಕ್ಷಗಾನ ಪ್ರದರ್ಶನವನ್ನು ನೀಡಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದೇವೆ. ಇಂದು ನಮ್ಮ ಸಮಿತಿಯ ಮಹಿಳೆಯರಿಂದ, ಮಕ್ಕಳಿಂದ ಹಾಗೂ ಇತರ ಸದಸ್ಯರಿಂದ ಕುಣಿತ ಭಜನೆಯನ್ನು ಇಲ್ಲಿ ನಡೆಸಿರುವೆವು. ಮುಂದೆ ಮಕ್ಕಳ ಉತ್ಸವನ್ನು ನಡೆಸಲಿದ್ದು ನಮ್ಮ ಸದಸ್ಯರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹಕರಿಸಬೇಕು ಎನ್ನುತ್ತಾ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಅಭ್ಯುದಯ ಬ್ಯಾಂಕಿನ ಎಂ. ಡಿ.,ಪ್ರೇಮನಾಥ ಸಾಲ್ಯಾನ್, ಬೋಂಬೆ ಬಂಟ್ಸ್ ಅಶೋಷಿಯೇಶನ್ ನ ಉಪಾಧ್ಯಕ್ಷರಾದ ಸಿ. ಎ. ಸುರೇಂದ್ರ ಶೆಟ್ಟಿ, ಬಿಲ್ಲವರ ಅಸೋಷಿಯೇಶನ್ ಮುಂಬಯಿ ಮಲಾಡ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾದ ಸಂತೋಷ್ ಕೆ ಪೂಜಾರಿ, ಸ್ಥಳೀಯ ಹೋಟೇಲು ಉದ್ಯಮಿ, ಸುರೇಂದ್ರ ಶೆಟ್ಟಿ ಹೊಸ್ಮಾರು, ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ್. ವಾಗ್ಲೆ, ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಎಸ್ ಪೂಜಾರಿ, ಉಪಸ್ಥಿತರಿದ್ದರು.
ಬೋಂಬೆ ಬಂಟ್ಸ್ ಅಶೋಷಿಯೇಶನ್ ನ ಉಪಾಧ್ಯಕ್ಷರಾದ ಸಿ. ಎ. ಸುರೇಂದ್ರ ಶೆಟ್ಟಿಯವರು ಮಾತನಾಡುತ್ತಾ ವರಮಹಾಲಕ್ಷಿ ಪೂಜೆಯಲ್ಲಿ ಬಾಗವಹಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಸುಮಂಗಲೆಯರ ಭಕ್ತಿಯ ಭಜನೆಗೆ ದೇವಿ ಖಂಡಿತವಾಗಿ ಒಲಿಯುತ್ತಾರೆ. ಭಜನೆ ಮುಖಾಂತರ ನಾವು ದೇವಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇವೆ. ಈ ಸಮಿತಿಯ ಸದಸ್ಯರ ಜನಬಲ, ಪ್ರೀತಿ-ವಾತ್ಸಲ್ಯ, ಅನ್ಯೋನ್ಯತೆ ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಿದೆ. ವರಮಹಾಲಕ್ಷ್ಮಿ ಎಲ್ಲಾ ಭಕ್ತರಿಗೆ ಆಯುರಾರೋಗ್ಯ ಕರುಣಿಸಲಿ. ಎಲ್ಲರ ಮನೆಯಲ್ಲಿ ಸುಖ ಶಾಂತಿ ನೆಲೆಸಲಿ ಎಂದರು.

ಅಭ್ಯುದಯ ಬ್ಯಾಂಕಿನ ಎಂ. ಡಿ. ಪ್ರೇಮನಾಥ ಸಾಲ್ಯಾನ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸಮಿತಿಯ ಸದಸ್ಯರಿಂದಲೇ ನಡೆಯುತ್ತಿರುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾನು ಹತ್ತಿರದಿಂದ ನೋಡಿದ್ದು ಅವರೆಲ್ಲರ ಸಾಧನೆ ಮೆಚ್ಚುವಂತದ್ದು. ಸದಸ್ಯರ ಪ್ರತಿಭೆಯನ್ನು ಗುರುತಿಸಿ ವೇದಿಕೆಯಲ್ಲಿ ಪ್ರದರ್ಶಿಸುವುದು ಸುಲಭವಲ್ಲ. ಮೊದಲು ಕೇವಲ ಮಲಾಡ್ ಪರಿಸರದವರು ಈ ಪೂಜೆಗೆ ಬರುತ್ತಿದ್ದು ಈಗ ಮುಂಬಯಿಯ ಇತರ ಕಡೆಯಿಂದಲೂ ಭಕ್ತಾಭಿಮಾನಿಗಳು ಆಗಮಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಸಮಿತಿಯ ಯುವ ಜನಾಂಗವು ಇಂತಹ ಕಾರ್ಯಕ್ರಮಗಳಲ್ಲಿ ಬಾಗವಹಿಸಿ ಮುಂದೆ ಅಂತರಾಷ್ತ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಮೆರಿಸುವಂತಾಗಲಿ ಎಂದರು.

ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಎಸ್ ಪೂಜಾರಿ ಮಾತನಾಡಿ ನಮ್ಮೆಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಪ್ರೋತ್ಸಾಹ ನೀಡುತ್ತಿರುವ ಕಾರ್ಯಕಾರಿ ಸಮಿತಿಗೆ ಅಭಾರಿಯಾಗಿರುವೆನು. ಅಕ್ಟೋಬರ ತಿಂಗಳಲ್ಲಿ ನಡೆಯಲಿರುವ ಮಕ್ಕಳ ಉತ್ಸವಕ್ಕೆ ನಿಮ್ಮೆಲ್ಲರ ಸಹಕಾರ ವನ್ನು ಬಯಸುತ್ತಿರುವೆನು ಎಂದರು.

ಸಮಿತಿಯ ಸಂಚಾಲಕರಾದ ಪತ್ರಕರ್ತ ಬಿ. ದಿನೇಶ್ ಕುಲಾಲ್ ಎಲ್ಲರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸಮಿತಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಛಾಯಾ ಚಿತ್ರಕಾರ ಸೋಮನಾಥ ವಾಗ್ಲೆ ಹಾಗೂ ಅವರ ಪರಿವಾರದವರನ್ನು ಸನ್ಮಾನಿಸಿದರು. ಸನ್ಮಾನಿತರನ್ನು ಸ್ವೇತಾ ಪೂಜಾರಿ ಪರಿಚಯಿಸಿದ್ದು ಲಾಸ್ಯಾ ಡಿ. ಕುಲಾಲ್ ಸನ್ಮಾನ ಪತ್ರ ವಾಚಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ದಾನಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳ ಹೆಸರನ್ನು ಪವನ್ ರಾವ್ ವಾಚಿಸಿದ್ದು ದಾನಿಗಳ ಹೆಸರನ್ನು ಕೋಶಾಧಿಕಾರಿ ಜಗನ್ನಾಥ ಮೆಂಡನ್ ವಾಚಿಸಿದರು, ಸುಂದರ ಪೂಜಾರಿ ವಾಲ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಸಮಿತಿಯ ಸದಸ್ಯರಿಂದ ಭಜನೆ, ನಂತರ ವೇದಮೂರ್ತಿ ಶ್ರೀ ರಮೇಶ್ ವಾಗ್ಲೆ ಡೊಂಬಿವಲಿ ರವರ ಪೌರೋಹಿತ್ವದಲ್ಲಿ, ಜೋಗೇಶ್ವರಿ ಮೇಘವಾಡಿಯ ಶನಿಮಹಾತ್ಮಾ ಪೂಜಾ ಸಮಿತಿಯ ಪ್ರಧಾನ ಅರ್ಚಕರಾದ ವೈಕುಂಠ ಭಟ್ ಇವರಿಂದ ಶೋಭಾ ಲಕ್ಷಣ ರಾವ್, ದಿವ್ಯಾ ನವೀನ್ ಪೂಜಾರಿ ಮತ್ತು ಸುಮತಿ ಈಶ್ವರ್ ಕುಲಾಲ್ ದಂಪತಿಗಳ ಯಜಮಾನಿಕೆಯಲ್ಲಿ ಪೂಜಾವಿಧಿಯು ನೆರವೇರಿತು. ಸಂಜೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆದಿದ್ದು ಸುಮಂಗಲೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು. ನಂತರ ಮಹಾಮಂಗಳಾರತಿ, ಬಳಿಕ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮಗಳ ಯಶಸ್ಸಿಗೆ ಶ್ರೀನಿವಾಸ ಸಾಫಲ್ಯ, ರವಿ ಸ್ವಾಮೀಜಿ, ಪರಮಾನಂದ ಭಟ್, ಸಮಿತಿಯ ಸದಸ್ಯರಾದ ಸತೀಶ್ ಭಟ್, ಸಂತೋಷ್ ಕೆ ಪೂಜಾರಿ, ಕುಮರೇಶ್ ಆಚಾರ್ಯ, ಚಂದ್ರಶೇಖರ್ ಶೆಟ್ಟಿ, ಉದಯ ಪೂಜಾರಿ ಕುಂದಾಪುರ, ಶ್ರೀಪತಿ ಪಾಟ್ಕರ್, ಮಹಾಬಲ ಪೂಜಾರಿ, ದಿನೇಶ್ ಪೂಜಾರಿ , ಸನತ್ ಪೂಜಾರಿ, ಸಿದ್ದರಾಮ ಗೌಡ, ಸುರೇಂದ್ರ ಆಚಾರ್ಯ , ನಿತ್ಯಾನಂದ ಕೋಟ್ಯಾನ್, ಶೈಲೇಶ್ ಪೂಜಾರಿ, ದಿನೇಶ್ ಕುಂಬ್ಳೆ, ಗೋಪಾಲ್ ಎಂ ಪೂಜಾರಿ, ಹರೀಶ್ ಶೆಟ್ಟಿ ಪೆರಾರ , ಸುರೇಂದ್ರ ಶೆಟ್ಟಿ, ರಾಮ ಪೂಜಾರಿ, ಜಯ ಪೂಜಾರಿ, ಸೋಮನಾಥ್ ವಾಗ್ಲೆ, ಸುಂದರ ಪೂಜಾರಿ ವಾಲ್ಪಾಡಿ , ಹರೀಶ್ ಪೂಜಾರಿ ಕಾರ್ನಾಡ್, ಸದಾನಂದ ಕೋಟ್ಯಾನ್, ಕೃಷ್ಣ ಪ್ರಭು,ದಿನೇಶ್ ಕಾಮತ್ , ಸದಾನಂದ ರಾವ್, ಸೂರಪ್ಪ ಕುಂದರ್, ಉದಯ ಸಾಲ್ಯಾನ್, ಮಂಜು ಗೌಡ, ಉಮೇಶ್ ಸಿ ಪೂಜಾರಿ, ಶಶಿಧರ್ ಹೆಗ್ಡೆ , ನಿತ್ಯಾನಂದ ಪೂಜಾರಿ, ಮೃತ್ಯುಂಜಯ ಪಲ್ಲಿ, ರವಿ ಮೂಲ್ಯ, ಲಕ್ಷಣ ರಾವ್, ಈಶ್ವರ ಕುಲಾಲ್, ಪ್ರತೀಕ್ ಜೆ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಚಾಲಕಿ ಮೋಹಿನಿ ಜೆ ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ಶೀಲಾ ಎಂ ಪೂಜಾರಿ, ರತ್ನ ಡಿ. ಕುಲಾಲ್, ಲಲಿತ ಎಸ್ ಗೌಡ, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಜೊತೆ ಕಾರ್ಯದರ್ಶಿಗಳಾದ ಗೀತಾ ಜೆ ಮೆಂಡನ್, ಕೃಪಾ ಜೆ ಮೂಲ್ಯ, ಹಾಗೂ ಮಹಿಳಾ ಸದಸ್ಯರು, ಯುವ ವಿಭಾಗದ ಸಂಚಾಲಕಿ ಪ್ರಣಿತ ವಿ ಶೆಟ್ಟಿ ಉಪ ಕಾರ್ಯಧ್ಯಕ್ಷರು ಗಳಾದ ದಿವ್ಯ ಪೂಜಾರಿ, ಸುದೀಪ್ ಡಿ ಪೂಜಾರಿ, ನವೀನ್ ಸಾಲ್ಯಾನ್ ಕಾರ್ಯದರ್ಶಿ ಸೌಮ್ಯ ಜೆ ಮೆಂಡನ್ , ಜೊತೆ ಕಾರ್ಯದರ್ಶಿಗಳಾದ ದಿಶಾ ಕರ್ಕೇರ, ಯೋಗೇಶ್ವರಿ ಗೌಡ ಯುವ ಸದಸ್ಯರು ಮೊದಲಾದವರು ಸಹಕರಿಸಿದರು,

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English