ಧರ್ಮಸ್ಥಳದಲ್ಲಿ “ಸಿರಿ ಧಾನ್ಯ ಸಿರಿ-ಸರಿ” ಕೃತಿ ಬಿಡುಗಡೆ

6:36 PM, Tuesday, July 9th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿಯನ್ನು ಧರ್ಮಸ್ಥಳದಲ್ಲಿ ಹೇಮಾವತಿ ವೀ. ಹೆಗ್ಗಡೆಯವರು ಬಡುಗಡೆಗೊಳಿಸಿ ಶುಭ ಹಾರೈಸಿದರು.

ಹಿರಿಯ ಪತ್ರಕರ್ತ ಅನಂತ ಹುದಂಗಜೆ ರಚಿಸಿದ ಪುಸ್ತಕದಲ್ಲಿ ಸಿರಿಧಾನ್ಯಗಳ ಬಳಕೆಯೊಂದಿಗೆ ಆರೋಗ್ಯಭಾಗ್ಯ ರಕ್ಷಣೆ ಬಗ್ಯೆ ಸಮಗ್ರ ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ.

ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್, ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಹಿರಿಯ ನಿರ್ದೇಶಕ ದಿನೇಶ್ ಎಂ. , ಅಭಿನಂದನ್ ಜೈನ್ ಮತ್ತು ಕೃತಿಯ ಲೇಖಕ ಅನಂತ ಹುದಂಗಜೆ ಉಪಸ್ಥಿತರಿದ್ದರು.

ಧರ್ಮಸ್ಥಳದಲ್ಲಿ 53 ನೇ ವರ್ಷದ ಪುರಾಣವಾಚನ ಪ್ರವಚನ

ಉಜಿರೆ: ಧರ್ಮಸ್ಥಳದಲ್ಲಿ53ನೆ ವರ್ಷದ ಪುರಾಣ ವಾಚನ -ಪ್ರವಚನ ಕಾರ್ಯಕ್ರಮವು ಇದೇ ೧೬ ರಿಂದ ಸೆಪ್ಟೆಂಬರ್ ೧೭ರ ವರೆಗೆ ನಡೆಯಲಿದೆ ಎಂದು ಪುರಾಣ ವಾಚನ-ಪ್ರವಚನ ಸಮಿತಿಯ ಸಂಚಾಲಕ ಎ.ವಿ. ಶೆಟ್ಟಿ ತಿಳಿಸಿದ್ದಾರೆ.

ಪ್ರತಿ ದಿನ ಸಂಜೆ ಗಂಟೆ 6.30 ರಿಂದ ರಾತ್ರಿ 8 ಗಂಟೆ ವರೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಪುರಾಣ ವಾಚನ – ಪ್ರವಚನ ನಡೆಯಲಿದೆ.

ಈ ಬಾರಿ “ಜೈಮಿನಿ ಭಾರತ” ಮತ್ತು “ತುರಂಗ ಭಾರತ” ಕೃತಿಗಳ ವಾಚನ-ಪ್ರವಚನ ನಡೆಯಲಿದ್ದು, ಶನಿವಾರ ಮತ್ತು ಭಾನುವಾರಗಳಲ್ಲಿ ವಿವಿಧ ಕಾವ್ಯಗಳ ಆಯ್ದ ಭಾಗದ ವಾಚನ – ಪ್ರವಚನ ನಡೆಯಲಿದೆ.

ಉದ್ಘಾಟನಾ ಸಮಾರಂಭ: ಜುಲೈ 16 ರಂದು ಮಂಗಳವಾರ ಸಂಜೆ ಗಂಟೆ 5.30 ಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಪುರಾಣ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಬಳಿಕ ಜೈಮಿನಿ ಭಾರತದ ಪೀಠಿಕಾಸಂಧಿ ಮತ್ತು ಎರಡನೆ ಸಂಧಿಯನ್ನು ಕಾವ್ಯಶ್ರೀ ಅಜೇರು ವಾಚನ ಮಾಡಿದರೆ, ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರವಚನ ನಿಡುವರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English