ವಿಟ್ಲಅರಮನೆಯ ಜನಾರ್ದನ ವರ್ಮ ಅರಸು ನಿಧನ
Sunday, August 2nd, 2020ವಿಟ್ಲ: ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು (84) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ. ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದ ಆನುವಂಶಿಕ ಮೊಕ್ತೇಸರಾಗಿ ದೇವಸ್ಥಾನದ ಬ್ರಹ್ಮಕಲಶ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ, ವಿಟ್ಲ ಶ್ರೀ ಜಠಾಧಾರಿ ದೈವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶಗಳು ಇವರ ಕಾಲದಲ್ಲಿ ನಡೆದಿತ್ತು. ರವಿವಾರ ಮಧ್ಯಾಹ್ನ ಗಂಟೆ 12ಕ್ಕೆ ಅರಸುಮನೆತನದ ವಿಧಿ ವಿಧಾನಗಳ ಮೂಲಕ ಬಾಕಿಮಾರು ಗದ್ದೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಂತಾಪ: ಅರಸು ಮನೆತನದ ಜನಾರ್ದನ […]