ಗೌರಿ ಲಂಕೇಶ್ ಹತ್ಯೆ ಪ್ರಕರಣ : ಬಂಧನಕ್ಕೆ ಒಳಗಾಗಿದ್ದ ಆರೋಪಿ 15 ದಿನಗಳ ಕಾಲ ಎಸ್​ಐಟಿ ವಶಕ್ಕೆ

Monday, January 13th, 2020
gowri

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಎಸ್ಐಟಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿ ರಿಷಿಕೇಶ್ನನ್ನು 15 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂವರೆ ವರ್ಷದ ಬಳಿಕ ಮತ್ತೊಬ್ಬ ಆರೋಪಿ ರಿಷಿಕೇಶ್ ದೇವಾಡಿಕರ್ ಅಲಿಯಾಸ್ ಮುರಳಿ ಎಂಬಾತನನ್ನು ಎಸ್ಐಟಿ ಪೊಲೀಸರು ಮೂರು ದಿನಗಳ ಹಿಂದೆ ಜಾರ್ಖಂಡ್ನಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ಗಳನ್ನು ನಾಶ ಮಾಡಿದ್ದ ಎನ್ನಲಾಗಿದೆ. ಹೀಗಾಗಿ […]

‘ರತ್ನೋತ್ಸವ 2019 ‘ ಗ್ರೀನ್ ಗ್ರೌಂಡ್ ದೇರಳಕಟ್ಟೆ – ವಿಡಿಯೋ

Monday, January 13th, 2020
rathnotsava

ಮಂಗಳೂರು  : ವಿದ್ವಾನ್ ರಾಮಚಂದ್ರ ಉಚ್ಚಿಲ ವೇದಿಕೆಯಲ್ಲಿ ನಡೆದ ರತ್ನೋತ್ಸವ-2019-2020 ಸಾಂಸ್ಕೃತಿಕ ದಿಬ್ಬಣ ಮೆರವಣಿಗೆ ಉದ್ಘಾಟನೆ  ಹಾಗೂ ಸಭಾಕಾರ್ಯಕ್ರಮ ವಿಡಿಯೋ

ಉಸ್ತುವಾರಿ ಸಚಿವರಿಂದ ಕರಾವಳಿ ಉತ್ಸವದ ಮೆರವಣಿಗೆ ಉದ್ಘಾಟನೆ

Friday, January 10th, 2020
KaravaliUthsava

ಮಂಗಳೂರು : ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ ಹತ್ತರಿಂದ ಇಪ್ಪತ್ತರವರೆಗೆ ನಡೆಯುವ ಕರಾವಳಿ ಉತ್ಸವದ ಸಾಂಸ್ಕತಿಕ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೆಹರೂ ಮೈದಾನದಲ್ಲಿ ಗುರುವಾರ ಉದ್ಘಾಟಿಸಿದರು. ಮಂಗಳೂರಿನಲ್ಲಿ ನಡೆಯುವ ಕರಾವಳಿ ಉತ್ಸವ ರಾಜ್ಯ ಹೆಮ್ಮೆ ಪಡುವಂತಹ ಕಾರ್ಯಕ್ರಮ ಎಂದು ಅವರು ಹೇಳಿದರು. ಪಣಂಬೂರು ಬೀಚ್‍ ಉತ್ಸವ, ಸಾಂಸ್ಕತಿಕ ಉತ್ಸವಗಳು ಕರಾವಳಿಯ ಸಾಂಸ್ಕತಿಯನ್ನು ಬಿಂಬಿಸುವ ಉತ್ಸವ ಎಂದು ಅವರು ಬಣ್ಣಿಸಿದರು. ಸಾಂಸ್ಕತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳ ವೈವಿಧ್ಯಮಯ ಕಲಾ […]

ಭೌತಿಕ ಮಾಲೀನ್ಯದಿಂದಾಗಿ ಭಾರತೀಯ ನದಿಗಳಿಂದ ಸಿಗುವ ಆಧ್ಯಾತ್ಮಿಕ ಲಾಭವು ಕಡಿಮೆಯಾಗುತ್ತಿದೆ

Friday, January 10th, 2020
kolkatta

ಕೋಲ್ಕತ್ತಾ : ವಿದೇಶಿ ನದಿಗಳ ತುಲನೆಯಲ್ಲಿ ಭಾರತೀಯ ನದಿಗಳಲ್ಲಿನ ಉನ್ನತ ಮಟ್ಟದ ಸಾತ್ತ್ವಿಕತೆ ಇರುತ್ತದೆ, ಇದು ಋಷಿಗಳ ಮತ್ತು ಭಕ್ತರ ಸಾಧನೆಯಿಂದಾಗಿ ಇರುವ ಭಾರತದ ಉನ್ನತ ಸಾತ್ತ್ವಿಕತೆಯ ಸಂಕೇತವಾಗಿದೆ. ಭಾರತೀಯ ನದಿಗಳು ಇಷ್ಟು ಮಾಲಿನ್ಯಕ್ಕೊಳಗಾಗದೇ ಇರುತ್ತಿದ್ದರೆ, ಆ ನದಿಗಳ ಆಧ್ಯಾತ್ಮಿಕ ಲಾಭ ತುಂಬಾ ಹೆಚ್ಚಾಗುತ್ತಿತ್ತು. ಏಕೆಂದರೆ ಭೌತಿಕ ಮಾಲಿನ್ಯವು ಇಂತಹ ಸಾತ್ತ್ವಿಕ ನದಿಗಳ ಮೇಲೆ ಒಂದು ಸೂಕ್ಷ್ಮ ನಕಾರಾತ್ಮಕ ಆವರಣವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಈ ನದಿಗಳಿಂದ ಸಮಾಜಕ್ಕಾಗುವ ಲಾಭವು ತುಂಬಾ ಕಡಿಮೆಯಾಗುತ್ತದೆ. ವಿದೇಶದಲ್ಲಿನ ವಿಕಸಿತ ದೇಶಗಳಿಂದ […]

‘ರಡ್ಡ್ ಎಕ್ರೆ’ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

Friday, January 10th, 2020
radd-yekare

ಮಂಗಳೂರು : ಒನ್‌ಲೈನ್ ಸಿನಿಮಾ ಲಾಂಛನದಲ್ಲಿ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ್ ನಿರ್ದೇಶನದಲ್ಲಿ ತಯಾರಾದ ‘ರಡ್ಡ್ ಎಕ್ರೆ’ ತುಳು ಸಿನಿಮಾ ಭಾರತ್ ಮಾಲ್‌ನ್ ಬಿಗ್ ಸಿನಿಮಾಸ್‌ನಲ್ಲಿ ಬಿಡುಗಡೆ ಗೊಂಡಿತು. ಸಮಾರಂಭವನ್ನು ಶ್ರೀನಿವಾಸ ಯುನಿರ್ವಸಿಟಿಯ ಚಾನ್ಸಿಲರ್ ರಾಘವೇಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ‘ರಡ್ಡ್ ಎಕ್ರೆ’ ಸಿನಿಮಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಲಿ. ಪ್ರಾದೇಶಿಕ ಭಾಷೆಯಲ್ಲಿ ಬರುತ್ತಿರುವ ಸಿನಿಮಾಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ […]

ಮಂಗಳೂರು : ನಿವೃತ್ತ ಜಿಲ್ಲಾ ರೋಟರಿ ಗವರ್ನರ್​​ ಸೂರ್ಯಪ್ರಕಾಶ್ ಭಟ್ ನಿಧನ

Thursday, January 9th, 2020
surya-prakash

ಮಂಗಳೂರು : ನಿವೃತ್ತ ಜಿಲ್ಲಾ ರೋಟರಿ ಗವರ್ನರ್ ಸೂರ್ಯಪ್ರಕಾಶ್ ಭಟ್ (62) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಮಧುಮೇಹ ರೋಗದಿಂದ ಬಳಲುತ್ತಿದ್ದ ಸೂರ್ಯಪ್ರಕಾಶ್ ಭಟ್ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೋಮಾ ತಲುಪಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ಸೂರ್ಯಪ್ರಕಾಶ್ ಭಟ್ 1989ರಲ್ಲಿ ಮಂಗಳೂರು ರೋಟರಿ ಕ್ಲಬ್ ಸೇರ್ಪಡೆಗೊಂಡಿದ್ದು, ಸಕ್ರಿಯ ರೋಟರಿಯನ್ ಆಗಿ ಸೇವೆ ಸಲ್ಲಿಸಿದ್ದರು. 1995-96ರ […]

ಇಂದು ಸಂಜೆ 4 ರಿಂದ ಮಂಗಳೂರು ಟೌನ್‌ಹಾಲ್‌ನಲ್ಲಿ11ನೇ ಸೌಹಾರ್ದ ಸಂಗಮ- ನೇರ ಪ್ರಸಾರ –

Tuesday, January 7th, 2020
MPMLA-front

ಮಂಗಳೂರು: ಎಂಪಿಎಂಎಲ್‌ಎ ನ್ಯೂಸ್ 11ನೇ ಸೌಹಾರ್ದ ಸಂಗಮವು ಮಂಗಳೂರು ಟೌನ್‌ಹಾಲ್‌ನಲ್ಲಿ ಜನವರಿ 7,2020 ರ ಮಂಗಳವಾರ ಸಂಜೆ 4ರಿಂದ 9ರ ತನಕ ನಡೆಯಲಿದೆ. ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಸೌಹಾರ್ದ ಸಂಗಮವನ್ನು ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯು.ಟಿ. ಖಾದರ್, ಡಿ. ವೇದವ್ಯಾಸ ಕಾಮತ್, […]

ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕ ನಾಥ ಚತುರ್ವೇದಿ ನಿಧನ

Monday, January 6th, 2020
TN-Chaturvedhi

ಬೆಂಗಳೂರು : ಕರ್ನಾಟಕದ ಮಾಜಿ ರಾಜ್ಯಪಾಲ ತ್ರಿಲೋಕ ನಾಥ ಚತುರ್ವೇದಿ(90) ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಟಿ. ಎನ್ ಚತುರ್ವೇದಿ ಭಾನುವಾರ ರಾತ್ರಿ ಉತ್ತರಪ್ರದೇಶದ ನೋಯ್ಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎನ್ನುತ್ತಿವೆ ವೈದ್ಯಕೀಯ ಮೂಲಗಳು. ನಿವೃತ್ತ ಐಎಎಸ್ ಆಧಿಕಾರಿಯಾಗಿದ್ದ ತ್ರಿಲೋಕ ನಾಥ ಚತುರ್ವೇದಿ 1991ರಲ್ಲಿ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು. ಅಲ್ಲದೇ ಆಗಸ್ಟ್ 2002-2007ವರೆಗೂ ರಾಜ್ಯಪಾಲರಾಗಿದ್ದರು. ಜನವರಿ 18, 1929ರಂದು ಜನಿಸಿದ ಟಿ.ಎನ್ ಚತುರ್ವೇದಿ […]

‘ಕುದ್ಕನ ಮದ್ಮೆ’ ಕರಾವಳಿಯಾದ್ಯಂತ ತೆರೆಗೆ

Friday, January 3rd, 2020
kudkana-madme

ಮಂಗಳೂರು : ಜಿ.ಆರ್.ಕೆ ಲಾಂಛನದಲ್ಲಿ ತಯಾರಾದ ಎ.ವಿ ಜಯರಾಜ್ ನಿರ್ದೇಶನದ ಗೌರಿ ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ ‘ಕುದ್ಕನ ಮದ್ಮೆ’ ತುಳು ಸಿನಿಮಾ ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು. ಚಲನಚಿತ್ರ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ಅವರು ದೀಪ ಬೆಳಗಿಸಿ ಸಿನಿಮಾವನ್ನು ಬಿಡುಗಡೆಗೊಳಿಸಿದರು.2020ರ ಸಾಲಿನಲ್ಲಿ ತೆರೆಕಾಣುವ ಮೊದಲ ತುಳು ಸಿನಿಮಾ ‘ಕುದ್ಕನ ಮದ್ಮೆ’ ಯಶಸ್ಸನ್ನು ದಾಖಲಿಸಲಿ ಎಂದು ಶುಭ ಹಾರೈಸಿದರು. ಟೈಂಸ್ ಆಫ್ ಇಂಡಿಯಾ ಪತ್ರಿಕೆಯ ಪ್ರಸರಣಾಧಿಕಾರಿ ಕದ್ರಿ ನವನೀತ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ […]

ಹೊಸ ವರ್ಷದ ಶುಭಾರಂಭ : ಧರ್ಮಸ್ಥಳದಲ್ಲಿ ಭಕ್ತರ ಗಡಣ

Wednesday, January 1st, 2020
ujire

ಉಜಿರೆ : ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವ ಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಹೊಸ ವರ್ಷ ಶುಭಾರಂಭದ ದಿನವಾದ ಬುಧವಾರ ನಾಡಿನೆಲ್ಲೆಡೆಯಿಂದ ಸುಮಾರು ಐವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ದೇವರದರ್ಶನ ಪಡೆದು ಸೇವೆ ಸಲ್ಲಿಸಿದರು. ಹಲವು ಮಂದಿ ಪಾದಯಾತ್ರೆಯಲ್ಲಿ ಬಂದರೆ, ಕೆಲವರು ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬಂದು ತಮ್ಮಸೇವೆ ಸಲ್ಲಿಸಿದ್ದಾರೆ. ಅನೇಕ ಮಂದಿ ಮುಡಿ ಅರ್ಪಿಸಿ (ತಲೆಕೂದಲು ತೆಗೆಸಿ) ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ದೇವರ ದರ್ಶನದ ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ […]