ಕಾಣೆಯಾದ ಮಕ್ಕಳ ಬ್ಯೂರೋಃ ಜಿಲ್ಲಾ ಘಟಕಕ್ಕೆ ಚಾಲನೆ

4:50 PM, Tuesday, February 18th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

A.B.-Ibrahimಮಂಗಳೂರು : ಹಿರಿಯ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಪಾಟೀಲ್‌ ನಾಗಲಿಂಗನ ಗೌಡ, ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಿ ಮರಳಿ ಮನೆಗೆ ಸೇರಿಸುವ ಮಕ್ಕಳ ಬ್ಯೂರೋ, ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟಕವನ್ನು ಸೋಮವಾರ  ಉದ್ಘಾಟಿಸಿದರು.

ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಿ ಅವರನ್ನು ಮನೆಗೆ ಸೇರಿಸುವ ಈ ಘಟಕವು ಪರಿಣಾಮಕಾರಿಯಾಗಿ ಕಾರ್ಯವೆಸಗಬೇಕು ಎಂದವರು ಸಲಹೆ ನೀಡಿದರು. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.

ಮಕ್ಕಳ ಬ್ಯೂರೋದ ಮಾಹಿತಿ ಮತ್ತು ಶೈಕ್ಷಣಿಕ ಪರಿಕರಗಳನ್ನು ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ| ಫಾ| ಡಾ ಗೀವರ್ಗೀಸ್‌ ಮಾರ್‌ ದಿವನ್ನಾಸಿಯೋಸ್‌ ಬಿಡುಗಡೆಗೊಳಿಸಿದರು. ಬ್ಯೂರೋದ ಫಲಕವನ್ನು ಆ್ಯಮ್‌ವೇಯ ಕಾರ್ಪೊರೇಟ್‌ ಅಫೇರ್ಸ್‌ನ ಅಸೋಸಿಯೇಟ್‌ ಮ್ಯಾನೇಜರ್‌ ಶುಭಜಿತ್‌ ಪೋಡಾರ್‌ ಅನಾವರಣಗೊಳಿಸಿದರು.

ದ.ಕ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಆಶಾ ನಾಯಕ್‌, ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗಟ್ರೂಡ್‌ ವೇಗಸ್‌ ಉಪಸ್ಥಿತರಿದ್ದರು.

ಘಟಕದ ಕಾರ್ಯ ನಿರ್ವಾಹಕ ನಿರ್ದೇಶಕ ಫಾ| ಜಾನ್‌ ಕುನ್ನತ್ತೇತ್‌ ಸ್ವಾಗತಿಸಿದರು. ಬ್ಯೂರೋದ ಸಂಯೋಜನಾಧಿಕಾರಿ ಬಿನು ವರ್ಗೀಸ್‌ ಪ್ರಸ್ತಾವನೆಗೈದರು. ಸಂಯೋಜಕ ರವಿಚಂದ್ರ ವಂದಿಸಿದರು.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕಾಣೆಯಾದ ಮಕ್ಕಳ ಬ್ಯೂರೋ ಕರ್ನಾಟಕಕ್ಕೆ ರಾಜ್ಯ ಮಟ್ಟದಲ್ಲಿ ಓಣಿಯವರ ಸೇವಾ ಕೂಟ (ಬೋಸ್ಕೋ) ಬೆಂಗಳೂರು ನೋಡಲ್‌ ಸಂಸ್ಥೆಯಾಗಿದೆ. ದ.ಕ. ಘಟಕವನ್ನು ನಡೆಸಲು ಪುತ್ತೂರಿನ ಕರ್ನಾಟಕ ಇಂಟಗ್ರೇಟೆಡ್‌ ಡೆವಲಪ್‌ಮೆಂಟ್‌ ಸೊಸೈಟಿಯನ್ನು ಕಿಡ್ಸ್‌) ಆಯ್ಕೆ ಮಾಡಿದೆ. ಬ್ಯೂರೋ ಉಡುಪಿ ಸೇರಿದಂತೆ ರಾಜ್ಯದ 29 ಜಿಲ್ಲೆಗಳಲ್ಲಿ ಘಟಕಗಳನ್ನು ಹೊಂದಿದ್ದು, ಇದೀಗ 30ನೇ ಘಟಕ ದ‌ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English