ಮಂಗಳೂರು : ಮನುಷ್ಯ ಬದುಕಿದ್ದಾಗ ಯಾವರೀತಿ ಗೌರವಾದರಗಳಿಂದ ಬದುಕು ಸಾಗಿಸುವನೋ ಅದೇ ರೀತಿ ಅವರು ಸತ್ತಾಗಲು ಅವರ ಪಾರ್ಥಿವ ಶರೀರವನ್ನು ಗೌರವಾದರಗಳಿಂದ ಮುಕ್ತಿ ಕಾಣಿಸಬೇಕು. ಇದಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ರುದ್ರಭೂಮಿ ಇರಲೇಬೇಕು. ಅದ್ದರಿಂದ ದ.ಕ.ಜಿಲ್ಲೆಯ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ರುದ್ರಭೂಮಿ ಕೊರತೆ ಬಗ್ಗೆ ವಿವರವಾದ ವರದಿಯೊಂದನ್ನು ಸಿದ್ದಪಡಿಸಲು ರುದ್ರಭೂಮಿ ಕೊರತೆ ಇರುವ ಗ್ರಾಮಸ್ಥರು ಕೂಡಲೇ ಮನವಿಗಳನ್ನು ಆಯಾ ತಹಶೀಲ್ದಾರರಿಗೆ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಜಿಲ್ಲೆಯ ಕಂದಾಯಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಮಾನವನ ಹೆಣವನ್ನು ಆತ/ಅವಳು ಬದುಕಿದ್ದಾಗ ಅವರ ಅನುಮತಿ ಇಲ್ಲದೇ ವೈದ್ಯಕೀಯ ಕಾಲೇಜುಗಳಿಗೆ ಪ್ರಯೋಗಾರ್ಥ ದಾನ ಮಾಡುವಂತಿಲ್ಲ. ಪಾರ್ಥಿವ ಶರೀರಕ್ಕೆ ಗೌರವಯುತ ಸಂಸ್ಕಾರ ಮಾಡಬೇಕು. ಇದು ಎಲ್ಲರ ಹಕ್ಕು ಹೌದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ 42 ಗ್ರಾಮಗಳಲ್ಲಿ 338 ಗ್ರಾಮಗಳಲ್ಲಿ ರುದ್ರಭೂಮಿ ಇದ್ದು ಇನ್ನು 84 ಗ್ರಾಮಗಳಲ್ಲಿ ರುದ್ರಭೂಮಿ ಅವಶ್ಯಕತೆ ಇದೆ. ಸಾಮಾನ್ಯ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟರು, ಇತರೆ ಧರ್ಮೀಯರಿಗೆ ಪ್ರತ್ಯೇಕವಾದ ರುದ್ರಭೂಮಿಗಳನ್ನು ಒದಗಿಸಲು ತಹಶೀಲ್ದಾರರು ಮುಂದಾಗಬೇಕು ಎಂದರು. ಜುಲೈ.15 ರೊಳಗೆ ಈ ಬಗ್ಗೆ ವರದಿಯೊಂದನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸೂಚಿಸಿದರು. ಯಾವುದೇ ಗ್ರಾಮದಲ್ಲಿ ರುದ್ರಭೂಮಿಗೆ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಿ ರುದ್ರಭೂಮಿ ಸೌಲಭ್ಯ ಕಲ್ಪಿಸಲು ಅವರು ತಹಶೀಲ್ದಾರರಿಗೆ ಸೂಚಿಸಿದರು.
Click this button or press Ctrl+G to toggle between Kannada and English