‘ದಬಕ್ ದಬಾ ಐಸಾ’ ತುಳು ಚಿತ್ರಕ್ಕೆ ಮುಹೂರ್ತ

12:41 AM, Wednesday, September 16th, 2015
Share
1 Star2 Stars3 Stars4 Stars5 Stars
(5 rating, 4 votes)
Loading...

dabak daba isa

ಮಂಗಳೂರು: ಜಯಕಿರಣ ಫಿಲಂಸ್ ನಿರ್ಮಾಣದ ರೋಹನ್ ಫಿಲಂಸ್ ಅರ್ಪಿಸಿ ಪ್ರಕಾಶ್ ಪಾಂಡೇಶ್ವರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ದಬಕ್ ದಬಾ ಐಸಾ’ ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಬಿಜೈ ಬಟ್ಟಗುಡ್ಡದಲ್ಲಿರುವ ಜಯಕಿರಣ ಕಚೇರಿಯಲ್ಲಿ ಸೋಮವಾರ ಜರಗಿತು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಾರಂಭಗೈದರು. ತುಳುವಿನಲ್ಲೀಗ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿದೆ. ಚಿತ್ರ ನಿರ್ಮಿಸುವವರು ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡಿದರೆ ಮಾತ್ರ ಪ್ರೇಕ್ಷಕರು ಸ್ವೀಕರಿಸುತ್ತಾರೆ. ಹೀಗಾಗಿ ನಿರ್ದೇಶಕರು ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಜತೆಗೆ ಉತ್ತಮ ಗುಣಮಟ್ಟದ ಸಿನಿಮಾಗಳನ್ನು ನೀಡುವ ಅಗತ್ಯ ಇದೆ. ಸಿನಿಮಾ ಬಿಡುಗಡೆಯ ವೇಳೆ ನಿರ್ಮಾಪಕರು ಹೊಂದಾಣಿಕೆ ಮಾಡಿಕೊಂಡು ಚಿತ್ರ ಬಿಡುಗಡೆಗೊಳಿಸಿದರೆ ನಿರ್ಮಾಪಕರಿಗೆ ಲಾಭವಾಗಬಹುದೆಂದು ಜಗನ್ನಾಥ ಶೆಟ್ಟಿ ಬಾಳ ಅಭಿಪ್ರಾಯ ಪಟ್ಟರು.

ಮೊಟ್ಟ ಮೊದಲ ಬಾರಿಗೆ ತುಳು ಸಿನಿಮಾ ನಿರ್ದೇಶಿಸುತ್ತಿದ್ದೇನೆ. ಪ್ರೇಕ್ಷಕರು ಚಾಲಿಪೋಲಿಲು ಸಿನಿಮಾಕ್ಕೆ ನೀಡಿದ ಪ್ರೋತ್ಸಾಹವನ್ನು ದಬಕ್ ದಬಾ ಐಸಾ ಚಿತ್ರಕ್ಕೂ ನೀಡಿ ಎಂದು ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ವಿನಂತಿಸಿದರು. ಸಮಾರಂಭದಲ್ಲಿ ಚಾಲಿಪೋಲಿಲು ಚಿತ್ರದ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, ಛಾಯಾಗ್ರಾಹಕ ಉತ್ಪಲ್ ನಯನಾರ್, ಸಾಹಿತಿ ಶಶಿರಾಜ್ ಕಾವೂರು, ಕಲಾನಿರ್ದೇಶಕ ತಮ್ಮಲಕ್ಷ್ಮಣ್, ಮಧುಸುರತ್ಕಲ್, ಕಲಾವಿದರಾದ ನವೀನ್ ಡಿ.ಪಡೀಲ್, ಸುಂದರ್ ರೈ ಮಂದಾರ, ನಾಯಕಿ ನಟಿ ಶೀತಲ್, ಪ್ರಜ್ವಲ್, ಗಿರೀಶ್ ಕಟೀಲ್ ಮೊದಲಾದವರು ಉಪಸ್ಥಿತರಿದ್ದರು. ರೋಹನ್ ಮೊಂತೆರೋ ಚಿತ್ರದ ನಿರ್ಮಾಪಕರಾಗಿದ್ದಾರೆ.

ಸಿನಿಮಾಕ್ಕೆ ಶಶಿರಾಜ್ ಕಾವೂರು ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ:ಉತ್ಪಲ್ ನಯನಾರ್, ಸಂಗೀತ: ರಾಜೇಶ್ ಎಂ.ಮಂಗಳೂರು, ಕಲೆ: ತಮ್ಮ ಲಕ್ಷ್ಮಣ್, ಚಿತ್ರದಲ್ಲಿ ಒಟ್ಟು ೪ ಹಾಡು ಇದ್ದು, ದೇವದಾಸ್ ಕಾಪಿಕಾಡ್, ಕದ್ರಿ ನವನೀತ ಶೆಟ್ಟಿ, ವೀರೇಂದ್ರ ಶೆಟ್ಟಿ ಕಾವೂರು, ಶಶಿರಾಜ್ ಕಾವೂರು ಸಾಹಿತ್ಯ ಒದಗಿಸಿದ್ದಾರೆ. ಚಾಲಿಪೋಲಿಲು ತುಳು ಚಲನ ಚಿತ್ರದ ಬಳಿಕ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ ಜತೆಯಾಗಿ ಅಭಿನಯಿಸುತ್ತಿದ್ದಾರೆ. ಮೊದಲ ಬಾರಿಗೆ ಶೀತಲ್ ಈ ಚಿತ್ರದ ಮೂಲಕ ನಾಯಕಿ ಯಾಗಿ ಅಭಿನಯಿಸುತ್ತಿದ್ದಾರೆ.

ಇನ್ನುಳಿದಂತೆ ಲಕ್ಷ್ಮಣ್ ಕುಮಾರ್ ಮಲ್ಲೂರು, ಸುರೇಂದ್ರ ಬಂಟ್ವಾಳ, ಗಿರೀಶ್ ಶೆಟ್ಟಿ ಕಟೀಲು, ಸುಧೀರ್ ರಾಜ್ ಉರ್ವಾ, ಸರೋಜಿನಿ ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಬೈಲೂರು, ಸತೀಶ್ ಬಂದಲೆ, ರವಿ ಸುರತ್ಕಲ್, ಸೋಮು ಜೋಗಟ್ಟೆ, ಹರೀಶ್ ಕಡಂದಲೆ, ಶೋಭಾ ಶಕ್ತಿನಗರ, ಸುಜಾತ ಶಕ್ತಿನಗರ, ಪ್ರಶಾಂತ್ ಕೊಂಚಾಡಿ, ಸದಾಶಿವದಾಸ್, ಮೋಹನ್ ಕೊಪ್ಪಲ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಮನೋಹರ್ ಶೆಟ್ಟಿ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಚೇತಕ್ ಪೂಜಾರಿ, ವಿನೋದ್ ಎಕ್ಕೂರು, ಚಂದ್ರಹಾಸ ಕದ್ರಿ ಮೊದಲಾದವರು ಅಭಿನಯಿಸುತ್ತಿದ್ದಾರೆ.
ಡಾ.ಹನ್ಸರಾಜ್ ಆಳ್ವ, ಮತ್ತು ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ರಕರ್ತರಾದ ಜಗನ್ನಾಥ ಶೆಟ್ಟಿ ಬಾಳ, ಪಿ.ಬಿ.ಹರೀಶ್ ರೈ, ಏಗ್ನೆಲ್ ರಾಡ್ರಿಗಸ್, ನರೇಶ್ ಕುಮಾರ್ ಸಸಿಹಿತ್ಲು, ಶಶಿಧರ ಬೆಳ್ಳಾಯರು, ಸುನೀಲ್ ಕೃಷ್ಣಾಪುರ, ಪ್ರವೀಣ್ ನೀರ್‌ಮಾರ್ಗ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ವಿನಯ ಕೃಷ್ಣ , ಬಿಜೇಶ್ ಗರೋಡಿ, ಭುವನ, ರಾಜೇಶ್ ಶೆಟ್ಟಿ, ಗಿರೀಶ್ ಮಳಲಿ, ಮೊದಲಾದವರು ಚಿತ್ರದಲ್ಲಿದ್ದಾರೆ.

ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ದಬಕ್ ದಬಾ ಐಸ ಚಿತ್ರ 21 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಹಾಗೂ ಸುರತ್ಕಲ್, ಬೋಂದೆಲ್, ಶಕ್ತಿನಗರದಲ್ಲಿ ಚಿತ್ರೀಕರಣ ನಡೆಯಲಿದೆ. ದಬಕ್ ದಬಾ ಐಸ ಚಿತ್ರ ಸಂಪೂರ್ಣ ಹಾಸ್ಯ ಚಿತ್ರವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ ಎಂದು ನಿರ್ದೇಶಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English