ಪುತ್ತೂರು ಧರ್ಮ ಜಾಗೃತಿ ಸಮಿತಿಯ ಆಶ್ರಯದಲ್ಲಿ ನಾಳೆ ಗೋವು-ಸಂತ ಸಂಗಮ

1:03 PM, Wednesday, July 6th, 2016
Share
1 Star2 Stars3 Stars4 Stars5 Stars
(No Ratings Yet)
Loading...

Go-Santhaಪುತ್ತೂರು: ‘ಭಾರತೀಯ ಸನಾತನ ಸಂಸ್ಕೃತಿಯು ಸಂತರನ್ನು ಮತ್ತು ಗೋ ಮಾತೆಯನ್ನು ಜೀವನದ ಅವಿಭಾಜ್ಯ ಅಂಗಗಳೆಂದು ಪರಿಗಣಿಸಿದ್ದು, ಈ ಸಂಪ್ರ ದಾಯವನ್ನು ಉಳಿಸಿ ಬೆಳೆಸುವ ಕಲ್ಪನೆ ಯೊಂದಿಗೆ ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇದೇ 7ರಂದು `ಗೋವು-ಸಂತ ಸಂಗಮ’ ಎಂಬ ರಾಜ್ಯಕ್ಕೆ ಮತ್ತು ದೇಶಕ್ಕೆ ಉತ್ತಮ ಸಂದೇಶ ಸಾರುವ ವಿನೂತನ ಸಮಾರಂಭ ನಡೆಯಲಿದೆ’ ಎಂದು ಗೋವು-ಸಂತ ಸಂಗಮ ಸ್ವಾಗತ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ತಿಳಿಸಿದರು.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಧರ್ಮ ಜಾಗೃತಿ ಸಮಿತಿಯ ಆಶ್ರಯದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ಈ ಕಾರ್ಯ ಕ್ರಮ ಇದೇ 7ರಂದು ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳುವುದು ಎಂದು ತಿಳಿಸಿ ದರು.

ರಾಮಚಂದ್ರಾಪುರ ಮಠದ ರಾಘ ವೇಶ್ವರ ಭಾರತೀ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಹಾಸನದ ಅರೆಮಾರನ ಹಳ್ಳಿಯ ಶಿವಸುಜ್ಞಾನಮೂರ್ತಿ ಸ್ವಾಮೀ ಜಿ, ಉಡುಪಿ ಕಟಪಾಡಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಒಡಿಯೂರು ಗುರುದೇವಾನಂದ ಸ್ವಾಮೀಜಿ, ಮಾಣಿಲ ದ ಮೋಹನದಾಸ ಸ್ವಾಮೀಜಿ, ವಜ್ರ ದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಸಾದ್ವಿ ಮಾತಾನಂದಮಯಿ, ಕೊಂಡೆಯೂರು ನಿತ್ಯಾನಂದ ಯೋಗಾಶ್ರಮದ ಯೋಗಾ ನಂದ ಸರಸ್ವತಿ ಸ್ವಾಮೀಜಿ, ವಿರಾಪೇಟೆ ಯ ಅರಮೇರಿ ಕಲಂಬೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಏಕಗಯ್ಯಾನಂದ ಜೀ, ಮೂಡುಬಿದಿರೆ ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ, ಕಣಿಯೂರು ಚಾಮುಂಡೇ ಶ್ವರಿ ಕ್ಷೇತ್ರದ ಮಹಾಬಲ ಸ್ವಾಮೀಜಿ, ಕಿನ್ನಿಗೋಳಿ ಶಕ್ತಿದರ್ಶನ ಆಶ್ರಮದ ದೇವದಾಸ್ ಅವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಲಿರುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ.ಕ., ಉಡುಪಿ, ಕಾಸರಗೋಡು ಹಾಗೂ ಹಾಸನ ಜಿಲ್ಲೆಯ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಭಾ ವೇದಿಕೆಯು ಗುತ್ತಿನ ಮನೆಯ ಸ್ವರೂಪದಲ್ಲಿರುವುದು, ಪ್ರವೇಶ ದ್ವಾರ ದಲ್ಲಿ ಗೋಪೂಜೆ, ಪಂಚಗವ್ಯ ಪ್ರಸಾದ ವಿತರಿಸಲಾಗುವುದು. ಗೋವು ಮತ್ತು ಸಂತರಿಗೆ ಸಹಸ್ತ್ರ ಮಂಗಳನೀರಾಜನ ನಡೆಯುವುದು. ಸ್ವದೇಶಿ ಗೋ ತಳಿಗಳ ನ್ನು ಸಂರಕ್ಷಿಸಿ, ಪೋಷಿಸುತ್ತಿರುವ ಗೋಪಾಲಕರನ್ನು ಗುರುತಿಸಲಾಗುವು ದು, ಗೋವುಗಳು ಕೂಡ ವೇದಿಕೆಯ ಮೇಲೆಯೇ ಇರುವುದು ಕಾರ್ಯಕ್ರಮದ ವಿಶೇಷತೆಗಳಾಗಿವೆ ಎಂದು ಮಾಹಿತಿ ನೀಡಿದರು.

ಗೋವು-ಸಂತ ಸಂಗಮ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಸಂಚಾಲಕ ಕೃಷ್ಣ ನಾರಾಯಣ ಮುಳಿಯ, ಸ್ವಾಗತ ಸಮಿತಿಯ ಸಂಘಟನಾ ಕಾರ್ಯ ದರ್ಶಿ ಹರಿಪ್ರಸಾದ್ ಪೆರಿಯಪ್ಪು, ಸದಸ್ಯ ರಾಜೇಶ್ ಬನ್ನೂರು ಅವರು ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು.

ಮಂಗಳೂರುಃ
ಮಂಗಳೂರಿನಲ್ಲಿ ಗೋವು ಸಂತ ಸಂಗಮದ ಕುರಿತು ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಕೃಷ್ಣ ನಾರಾಯಣ ಮೂಲ್ಯ, ಪ್ರಧಾನ ಕಾರ್ಯದರ್ಶಿ ರಾಜರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English