60ನೇ ರಾಜ್ಯಮಟ್ಟದ ಗೇಮ್ಸ್ ಗೆ ಉಪ್ಪಳದಲ್ಲಿ ಚಾಲನೆ

3:48 PM, Wednesday, November 9th, 2016
Share
1 Star2 Stars3 Stars4 Stars5 Stars
(No Ratings Yet)
Loading...

Kabbaddi ಉಪ್ಪಳ: ಬಹುಭಾಷಾ ಸಂಗಮ ಭೂಮಿಯಾದ ಗಡಿನಾಡು ಕಾಸರಗೋಡಿನ ಉಪ್ಪಳದ ಮಣ್ಣಂಗುಳಿ ಮೈದಾನದಲ್ಲಿ ಇದೇ ಮೊತ್ತಮೊದಲ ಬಾರಿಗೆ ರಾಜ್ಯಮಟ್ಟದ ಶಾಲಾ ಗೇಮ್ಸ್ ಗೆ ಮಂಗಳವಾರ ಚಾಲನೆ ನೀಡಲಾಯಿತು.

ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಸಮಾರಂಭವನ್ನು ಉದ್ಘಾಟಿಸಿದರು. ಮಂಗಳವಾರದಿಂದ ಮೊದಲ್ಗೊಂಡು ಮೂರು ದಿನಗಳವರೆಗೆ ನಡೆಯುವ ಗೇಮ್ಸ್ ನಲ್ಲಿ ರಾಜ್ಯದ 14 ಜಿಲ್ಲೆಗಳ 1400 ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಕುಸ್ತಿ, ಕಬಡ್ಡಿ, ಹ್ಯಾಂಡ್ ಬಾಲ್, ರಸ್ ಲಿಂಗ್ ಗಳ ಚಾಂಫಿಯನ್‌ಶಿಫ್ ನಡೆಯುತ್ತಲಿದೆ.ಸ್ಥಳೀಯ ಉಪ್ಪಳ,ಮಂಜೇಶ್ವರ ಪ್ರದೇಶದ ನಾಗರಿಕ ಸಮಿತಿ ನೆರವು ನೀಡುತ್ತಿದೆ.

ಗಡಿ ಪ್ರದೇಶವಾದ್ದರಿಂದ ವೈವಿಧ್ಯಮಯ ಭಾಷೆ ನ್ನು ಗಮನಿಸಿದ ಕೇರಳದ ದಕ್ಷಿಣ ತುದಿಯ ಕ್ರೀಡಾಳುಗಳು ಇದು ಕೇರಳವೇ ಅಥವಾ ಕರ್ನಾಟಕವೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿರುವುದು ಕಂಡುಬಂತು.

kabbaddi-1

Kabbaddi

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English