ಕ್ಯಾಂಪ್ಕೋ ಸಂಸ್ಥೆಯಿಂದ ಪ್ರಥಮ ಹಂತದ ಅಡಿಕೆ ಚೀನಾ ದೇಶದ ಕಿಂಗ್ ಆಫ್ ಟೇಸ್ಟ್ ಕಂಪೆನಿಗೆ ರಪ್ತು

11:53 AM, Saturday, November 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

CAMPCO exportsಮಂಗಳೂರು: ಚೀನಾದಲ್ಲಿ ಅಡಿಕೆಯ ಮೌತ್ ಪ್ರೆಶ್‌ರನ್ನು ಬಹಳ ಜನಪ್ರಿಯವಾಗಿ ಅಭಿವೃದ್ಧಿಪಡಿಸಿದ ಕಿಂಗ್ ಆಫ್ ಟೇಸ್ಟ್‌ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರ ಜೊತೆ ನಡೆಸಿದ ಮಾತುಕತೆ ಪ್ರಕಾರ ಕ್ಯಾಂಪ್ಕೋ ಸಂಸ್ಥೆ ಪ್ರಥಮ ಹಂತದ ಅಡಿಕೆಯನ್ನು ಪುತ್ತೂರಿನಿಂದ ರಪ್ತು ಮಾಡಿದೆ.

ಶಿವಮೊಗ್ಗ, ಪುತ್ತೂರು ಹಾಗೂ ಕೊಯಂಬತ್ತೂರು ಪ್ರದೇಶದ ಆಯ್ದ ಅಡಿಕೆಯನ್ನು ಪುತ್ತೂರಿನಲ್ಲಿ ಸಂಸ್ಕರಣಗೊಳಿಸಿದ್ದು, ಭಾರತ ಸರ್ಕಾರದ ಅಧೀನದಲ್ಲಿರುವ ಕೃಷಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢೀಕರಣಗೊಂಡ ಈ ಉತ್ಪನ್ನಗಳನ್ನು ಚೆನೈ ಬಂದರಿನ ಮೂಲಕ ಚೀನಾ ದೇಶದ ಕಿಂಗ್ ಆಫ್ ಟೇಸ್ಟ್ ಕಂಪೆನಿಗೆ ರಪ್ತು ಮಾಡಲಾಯಿತು. ಇದೊಂದು ಮಹತ್ತರ ಬೆಳವಣಿಗೆಯಾಗಿದ್ದು ಮುಂದಿನ ದಿನಗಳಲ್ಲಿ ಚೀನಾದ ಬೇಡಿಕೆಯನ್ನು ಪರಿಗಣಿಸಿ ರಪ್ತು ವ್ಯವಹಾರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕ್ಯಾಂಪ್ಕೋ ಸಂಸ್ಥೆಯು ತೀರ್ಮಾನಿಸಿದೆ.

ಅಡಿಕೆಯನ್ನು ರಪ್ತು ಮಾಡುವ ಸಂದರ್ಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್.ಸತೀಶ್‌ಚಂದ್ರ, ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಭಂಡಾರಿ. ಎಂ. ಉಪಸ್ಥಿತರಿದ್ದು ಶುಭ ಹಾರೈಸಿದರು. ಅಡಿಕೆ ವಿಭಾಗದ ಸಹಾಯಕ ಮಹಾ ಪ್ರಬಂಧಕರಾದ ಕೆ.ಎಂ. ಲೋಕೇಶ್, ಪುತ್ತೂರು ವಿಭಾಗದ ಹಿರಿಯ ವ್ಯವಸ್ಥಾಪಕರಾದ ಶ್ರೀಧರ ಶೆಟ್ಟಿ ಹಾಗೂ ಚೀನಾ ರಪ್ತು ವ್ಯಾಪಾರದ ಸಂಯೋಜಕರಾದ ರಾಮಚಂದ್ರ ಕಾಮತ್ ಭಾಗಿಯಾಗಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English