ಮಂಗಳೂರು: ತುಳು ನಾಡಿನ್ಯಾದಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಪಿಲಿಬೈಲ್ ಯಮುನಕ್ಕ’ ಚಿತ್ರದ ಪೈರಸಿ ಪ್ರಕರಣ ಬೆಳಕಿಗೆ ಬಂದಿದೆ. ಥಿಯೇಟರ್‌ನಲ್ಲಿ ದೃಶ್ಯ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವವರ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಮಂಗಳೂರು ತುಳು ಕಾಮಿಡಿ ವಿಡಿಯೋಸ್ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ಸಿನಿಮಾದ ಹಾಸ್ಯ ದೃಶ್ಯಗಳನ್ನು ಒಳಗೊಂಡ ಸುಮಾರು ಮೂರು ನಿಮಿಷಗಳ ತುಣುಕಗಳನ್ನು ಹರಿಬಿಡಲಾಗಿದೆ ಎನ್ನಲಾಗಿದೆ. ಅನುಮತಿ ಇಲ್ಲದೆ ಅಪ್‌ಲೋಡ್ ಮಾಡಿದ ಹಿನ್ನೆಲೆಯಲ್ಲಿ ಚಿತ್ರ ತಂಡ ಮಂಗಳೂರು ಬಂದರು ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಳ್ತಂಗಡಿಯಲ್ಲೂ ಇದೇ ಕೃತ್ಯ ಬೆಳಕಿಗೆ ಬಂದಿದೆ. ಬೆಳ್ತಂಗಡಿಯ ಭಾರತ್ ಥಿಯೇಟರ್‌ನಲ್ಲಿ ವ್ಯಕ್ತಿಯೋರ್ವ ತನ್ನ ಖಾಸಗಿ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪ್ರಯತ್ನದಲ್ಲಿದ್ದಾಗ ಪ್ರೇಕ್ಷಕರೇ ಹಿಡಿದು ಥಳಿಸಿದ ಘಟನೆ ನಡೆದಿದೆ. ಆ ವ್ಯಕ್ತಿ ಕ್ಷಮೆ ಕೇಳಿದ ಹಿನ್ನೆಲೆಯಲ್ಲಿ ದೂರು ದಾಖಲಿಸಲಿಲ್ಲ ಎಂದು ಚಿತ್ರ ತಂಡ ತಿಳಿಸಿದೆ.
Click this button or press Ctrl+G to toggle between Kannada and English