ಮಂಗಳೂರು : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯದ ಸಹಕಾರಿ ಮತ್ತು ಸಕ್ಕರೆ ಖಾತೆ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಅವರ ನಿಧನಕ್ಕೆ ಮಂಗಳವಾರ ಸಂತಾಪ ಸಭೆ ನಡೆಯಿತು .
ಅರಣ್ಯ,ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಸಹಕಾರಿ ರಂಗದ ರೈತರ ಸಮಸ್ಯೆಗಳ ಬಗ್ಗೆ ತ್ವರಿತವಾಗಿ ಸ್ಪಂದಿಸುತ್ತಿದ್ದ ಮಹಾದೇವ ಪ್ರಸಾದ್ ಜನಾನುರಾಗಿಯಾಗಿದ್ದರು . ಅವರ ನಿಧನ ಪಕ್ಷಕ್ಕೆ ಹಾಗೂ ರಾಜ್ಯದ ಜನತೆಗೆ ಅಪಾರ ನಷ್ಟ ವನ್ನುಂಟು ಮಾಡಿದೆ ಎಂದು ಸಂತಾಪ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರೈತರ ಸಮಸ್ಯೆಗಳ ಬಗ್ಗೆ ಸಂಯಮದಿಂದ ಆಲಿಸಿ ಅವರ ಸಮಸ್ಯೆಗಳಿಗೆ ಸೂಕ್ತವಾದ ರೀತಿಯಲ್ಲಿ ಸ್ಪಂಧಿಸಿ ಕ್ರಮ ಕೈಗೊಳ್ಳುತ್ತಿದ್ದರು. ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ, 3ಶೇ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೆ ತರುವಲ್ಲಿ ಮಹಾದೇವ ಪ್ರಸಾದರ ಪಾತ್ರವಿದೆ. ಅವರ ಜನಪ್ರಿಯತೆಯ ಫಲವಾಗಿ ಗುಂಡ್ಲಪೇಟೆಯ ವಿಧಾನ ಸಭಾ ಕ್ಷೇತ್ರದಲ್ಲಿ 5 ಬಾರಿ ಆಯ್ಕೆಯಾಗುವ ಮೂಲಕ ಜನಪ್ರಿಯ ಜನನಾಯಕರಾಗಿ ಮೂಡಿ ಬಂದಿದ್ದರು. ವೈಯಕ್ತಿಕವಾಗಿ ಅವರು ನನಗೆ ಆತ್ಮೀಯ ಮಿತ್ರರಾಗಿದ್ದರು. ಅವರ ಜೊತೆ ಸಚಿವರ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ, ವಿದೇಶ ಪ್ರವಾಸ ತೆರಳಿದ ಅನುಭವಗಳನ್ನು ಹೊಂದಿರುವುದಾಗಿ ವಿವರಿಸಿದ ಸಚಿವ ರಮಾನಾಥ ರೈ , ಅವರ ಅಗಲುವಿಕೆ ಅತ್ಯಂತ ನೋವನ್ನುಂಟುಮಾಡಿದೆ ಎಂದು ಸಂತಾಪ ಸೂಚಿಸಿದರು.
ಅಗಲಿದ ಸಚಿವ ಮಹಾದೇವ ಪ್ರಸಾದ್‌ರವರು ಸರಳ, ಮೃದು ಸ್ವಭಾವದ ಯಾವೂದೇ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳದ ವ್ಯಕ್ತಿಯಾಗಿದ್ದರು. ಯಾವೂದೇ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಸಚಿವರಾಗಿದ್ದರು. ಅವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಶಾಸಕ ಜೆ.ಆರ್.ಲೋಬೊ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಮನಪಾ ಮೇಯರ್ ಹರಿನಾಥ್, ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಇತರ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ್, ಬಾಲಕೃಷ್ಣ ಶೆಟ್ಟಿ, ಲ್ಯಾನ್ಸಿ ಲೋಟ್ ಪಿಂಟೊ, ಎ.ಸಿ.ವಿನಯ ರಾಜ್, ಅಪ್ಪಿ ಲತಾ, ಕವಿತಾವಾಸು, ಸದಾಶಿವ ಅಮೀನ್, ರೆಹ್‌ಮಾನ್ ಕೋಡಿಜಾಲ್, ಸುದರ್ಶನ ಜೈನ್, ಆರಿಫ್ ಬಂದರ್, ಸುಹೈಲ್ ಕಂದಕ್, ಸಂತೋಷ್ ಶೆಟ್ಟಿ, ವಸಂತ್ ಬೆರ್ನಾಡ್, ಪ್ರಕಾಶ್ ಅಳಪೆ, ವಿಶ್ವಾಸ್‌ದಾಸ್, ಶಾಹುಲ್ ಹಮೀದ್,ಟಿ.ಕೆ.ಸುಧೀರ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English