ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ , ಜಾತ್ಯತೀತ ಮೌಲ್ಯಗಳು ಕುಸಿಯುತ್ತಿವೆ : ಮುನೀರ್

11:52 PM, Friday, July 7th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

muneer ಮಂಗಳೂರು : ಸೌಹಾರ್ದತೆ, ಐಕ್ಯತೆ, ಜ್ಯಾತೀತತೆ ವ್ಯವಸ್ಥೆಯನ್ನು ದುರ್ಭಲಗೊಳಿಸುವ ಶಕ್ತಿಗಳ ವಿರುದ್ಧ  ಡಿವೈಎಫ್‌ಐ ವತಿಯಿಂದ ಹಮ್ಮಿಕೊಂಡಿರುವ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ  ದಲಿತರ, ಅಲ್ಪ ಸಂಖ್ಯಾತರ ಜನರ ಮೇಲೆ ಆಳುವ ಶಕ್ತಿಗಳ ಪ್ರಾಯೋಜಕತ್ವದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನವನುದ್ದೇಶಿಸಿ ಮಾತನಾಡಿ ದೇಶದೊಳಗೆ ದ್ವೇಷದ ವಾತವರಣ ಸೃಷ್ಟಿಯಾಗುತ್ತಿರುವ ಕಾರಣ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ , ಜಾತ್ಯತೀತ ಮೌಲ್ಯಗಳು ಕುಸಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜನ ಸಾಮನ್ಯರಲ್ಲಿ, ಅಲ್ಪಸಂಖ್ಯಾತರಲ್ಲಿ, ದಲಿತರಲ್ಲಿ ಅಭದ್ರತೆಯ ವಾತವರಣ ಸೃಷ್ಟಿಯಾಗುತ್ತಿದೆ. ಇದನ್ನು ತಡೆಯಲು ಡಿವೈಎಫ್‌ಐ ದೇಶಾದ್ಯಂತ ಒಂದು ವಾರಗಳ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ಪ್ರತಿಭಟನಾ ಸಭೆಯಲ್ಲಿ ಡಿವೈಎಫ್‌ಐ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ , ಇಮ್ತಿಯಾಝ್, ಸಂತೋಷ್ ಬಜಾಲ್, ರಫೀಕ್ ಹರೇಕಳ, ಎಸ್.ಎಫ್‌.ಐನ ಮುಖಂಡರಾದ ನಿತಿನ್ ಕುತ್ತಾರ್, ಚರಣ್, ಮುಹಮ್ಮದ್ ಸಾದಿಕ್, ಆಶಾ ಬೊಳೂರು ಹಾಗೂ ಮುಹ್ಮದ್ ಸಾಲಿ, ನಾಸಿರ್ ಬಜ್ಪೆ ಮೊದಲಾದವರು ಉಪಸ್ಥಿತರಿದ್ದರು.

muneer

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English