ಮರಳುಗಾರಿಕೆ: ಡಿ.ಸಿ.ನೇತೃತ್ವದ ತಂಡ ದಾಳಿ

5:34 PM, Tuesday, January 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mangaluruಮಂಗಳೂರು: ಸಿಆರ್‌ಝಡ್‌ ವ್ಯಾಪ್ತಿಯ ಕೆಲವು ಕಡೆ ಅಕ್ರಮದಕ್ಕೆ ನಿರ್ಮಿಸಿ ಮರಳುಗಾರಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ನೇತೃತ್ವದ ತಂಡದವರು ಮೂಡುಶೆಡ್ಡೆ, ಪಡುಶೆಡ್ಡೆ, ಜಪ್ಪಿನ ಮೊಗರು ಸೇರಿದಂತೆ ಹಲವೆಡೆ ಹಠಾತ್‌ ಧಾಳಿ ನಡೆಸಿ 800ಕ್ಕೂ ಅಧಿಕ ಲೋಡ್‌ ಮರಳು, ಡ್ರೆಜ್ಜಿಂಗ್‌ ಮೆಷಿನ್‌, ಲಾರಿಯನ್ನು ವಶಪಡಿಸಿಕೊಂಡು ಮುಟ್ಟುಗೋಲು ಹಾಕಿದ್ದಾರೆ.

ಮಂಗಳೂರು ತಾಲೂಕಿನ ಮರವೂರು ವೆಂಟೆಡ್‌ ಡ್ಯಾಂ ಪಕ್ಕದ ಪಡುಶೆಡ್ಡೆ, ಮೂಡುಶೆಡ್ಡೆ, ಮಂಜಲ್ಪಾದೆ ಸುತ್ತಮುತ್ತ ದಾಳಿ ನಡೆಸಿ 5 ಮರಳು ಧಕ್ಕೆ ಮುಟ್ಟುಗೊಲು ಹಾಕಲಾಗಿದ್ದು, 800 ಕ್ಕೂ ಅಧಿಕ ಲೋಡ್‌ ಮರಳು, ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 6ಮಂದಿಯ ಮೇಲೆ ಪ್ರಕರಣ ದಾಖಲಾಗಿದ್ದು, 40ಬೋಟು, ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಆರಂಭಿಸಿದ ಧಾಳಿ ಸೋಮವಾರ ಸಂಜೆಯವರೆಗೆ ಮುಂದುವರಿದಿದೆ ಎಂದು ಪ್ರಕಟನೆ ತಿಳಿಸಿದೆ.

ದಾಳಿ ಮಾಡಿದ ತಂಡದಲ್ಲಿ ತಹಶೀಲ್ದಾರ್‌ ಗುರುಪ್ರಸಾದ್‌, ಎಸಿ ರೇಣುಕಾಪ್ರಸಾದ್‌, ಹಿರಿಯ ಭೂ ವಿಜ್ಞಾನಿ ನಿರಂಜನ್‌, ಮೂರ್ತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಕಾವೂರು, ಪಾಂಡೇಶ್ವರ ಪೊಲೀಸರು ಭಾಗವಹಿಸಿದ್ದರು.

ಮರಳು ಶಿರಾಡಿ ಕಾಮಗಾರಿಗೆ: ಪಡುಶೆಡ್ಡೆಯಲ್ಲಿ ವಶಪಡಿಸಿಕೊಂಡ ಎಲ್ಲಾ ಮರಳನ್ನು ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೀಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಮೂಲಕ ಗಣಿ ಇಲಾಖೆಗೆ ರಾಜಧನ ಪಾವತಿಸಿ, ಶಿರಾಡಿಗೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English