ನಿಮ್ಮನ್ನು ನೋಡುತ್ತಿದೆ ಕ್ಯಾಮರಾ… ಎಲ್ಲೆಂದರಲ್ಲಿ ಕಸ ಹಾಕುವ ಮುನ್ನ ಹುಷಾರ್‌!

11:28 AM, Thursday, January 18th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Mangaluruಮಂಗಳೂರು: ಎಲ್ಲೆಂದರಲ್ಲಿ ಕಸ ಹಾಕಬೇಡಿ ಎಂದು ಸ್ಥಳೀಯಾಡಳಿತ ಅದೆಷ್ಟೇ ಹೇಳಿದರೂ ರಸ್ತೆಯಲ್ಲೇ ಕಸ ಎಸೆದು ಹೋಗುವವರಿಗೇನೂ ಕಮ್ಮಿಯಿಲ್ಲ.

ಹೀಗೆ ಹೆದ್ದಾರಿ ಪಕ್ಕ ಕಸ ಎಸೆದು ಮಾಯವಾಗುವ `ಬುದ್ಧಿವಂತರನ್ನು’ ಪ್ರಜ್ಞಾವಂತರನ್ನಾಗಿಸಲು ಮಾಣಿ ಗ್ರಾಪಂ ಸಿಸಿ ಕ್ಯಾಮರಾ ಅಳವಡಿಸಿ ಕಾಯುವ ವಿನೂತನ ಯೋಜನೆ ರೂಪಿಸಿ ಪಣ ತೊಟ್ಟಿದೆ.

ಸದಾ ಒಂದಿಲ್ಲೊಂದು ದಿನ ಕಾಣಿಸುವ ಕಸದ ರಾಶಿಗೆ ಮುಕ್ತಿ ದೊರಕಿಸಲು ಮೊದಲ ಹೆಜ್ಜೆಯಾಗಿ ಸಿಸಿ ಕ್ಯಾಮರಾ ಅಳವಡಿಸುವ ನಿರ್ಧಾರಕ್ಕೆ ಗ್ರಾಮ ಪಂಚಾಯತ್ ಬಂದಿದೆ. ಇದು ಸ್ವಚ್ಛ ಭಾರತದೆಡೆಗೆ ಮೊದಲ ಹೆಜ್ಜೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳು ಹೇಳುತ್ತಾರೆ. ಕಸ ಎಸೆಯುವ ಮನಸ್ಸುಗಳು ಕ್ಯಾಮರಾ ಕಂಡಾದರೂ ಪರಿವರ್ತನೆ ಆಗಬಹುದು ಎಂಬುದು ಲೆಕ್ಕಾಚಾರ.

ಬಂಟ್ವಾಳದಿಂದ ಬೆಂಗಳೂರು, ಮೈಸೂರು ಕಡೆ ಹೋಗುವ ಸಂದರ್ಭ ಸುಮಾರು 13 ಕಿ.ಮೀ. ಸಾಗಿದರೆ ಮಾಣಿ ಜಂಕ್ಷನ್ ಸಿಗುತ್ತದೆ. ಕಣ್ಣಳತೆಯಷ್ಟೇ ದೊಡ್ಡ ಪೇಟೆ, ಕೆಲವು ಅಂಗಡಿ ಮುಂಗಟ್ಟುಗಳಷ್ಟೇ ಇರುವ ಮಾಣಿ ಪೇಟೆಯ ಹೃದಯ ಭಾಗದಲ್ಲೇ ಗ್ರಾಮ ಪಂಚಾಯತ್ ಕಚೇರಿ ಇದೆ. ದೊಡ್ಡದಾದ ಹೆದ್ದಾರಿಗಳೆರಡು ಕವಲಾಗಿ ಸಾಗುವುದು ಈ ಗ್ರಾಮ ಪಂಚಾಯತ್ ಮೂಲಕವೇ. ಆದರೆ, ಹೆದ್ದಾರಿಯಲ್ಲಿ ಹಾದುಹೋಗುವವರು ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಾರೆ ಎಂಬುದೇ ಪಂಚಾಯಿತಿಗಿರುವ ತಲೆನೋವು.

ಕಸ ಎಸೆಯುವ ಸಮಸ್ಯೆ ತಾ.ಪಂನಲ್ಲಿ ಚರ್ಚೆಯಾದಾಗ ಸಿಸಿ ಕ್ಯಾಮರಾ ಅಳವಡಿಸುವ ಪರಿಹಾರ ದೊರೆಯಿತು. ಆ ಮೂಲಕ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಸೂಕ್ತ ಎಚ್ಚರಿಕೆ, ದಂಡ, ಕಾನೂನಿನ ಪಾಠ ಹೇಳಬಹುದು ಎಂಬುದು ಇದರ ಆಶಯ.

ಇಂಥ ಕ್ರಮಗಳಿಗೆ ಕೇವಲ ಗ್ರಾಪಂಗಳನ್ನಷ್ಟೇ ಅಲ್ಲ, ಸಾರ್ವಜನಿಕರೂ ಜಾಗೃತರಾಗಬೇಕು. ಸ್ವಚ್ಛತೆಯ ಪರಿಕಲ್ಪನೆ ಎಲ್ಲರ ಮನಸ್ಸಿನಲ್ಲೂ ಮೂಡಬೇಕು ಎನ್ನುತ್ತಾರೆ ಮಾಣಿ ಗ್ರಾಪಂ ಸದಸ್ಯರಾದ ಇಬ್ರಾಹಿಂ ಮತ್ತು ನಾರಾಯಣ ಶೆಟ್ಟಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English