ಮಂಗಳೂರು: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪದ ನಡುವೆಯೇ ಅಡಕೆ ಚಹಾ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.
ಪ್ರತಿಷ್ಠಿತ ಇಂಡಿಯನ್ ಕೌನ್ಸಿಲ್ ಆಫ್ ಫುಡ್ ಆ್ಯಂಡ್ ಅಗ್ರಿಕಲ್ಚರ್ ಸಂಸ್ಥೆಯು ಅಡಕೆ ಚಹಾವನ್ನು ಈ ವರ್ಷದ ಉತ್ತಮ ಅಗ್ರಿಕಲ್ಚರ್ ಸ್ಟಾರ್ಟ್‌ಅಪ್ ಉತ್ಪನ್ನ ಎಂದು ಘೋಷಿಸಿದೆ. ಈ ಹಿಂದೆ ಅಡಕೆ ಚಹಾಕ್ಕೆ ಮೇಕ್ ಇನ್ ಇಂಡಿಯಾ ಪ್ರಶಸ್ತಿ ದೊರೆತಿದ್ದು, ಈಗ ಮತ್ತೆ ರಾಷ್ಟ್ರೀಯ ಪ್ರಶಸ್ತಿ ದೊರತಿದೆ.
ಅಡಕೆಯಲ್ಲಿರುವ ಆರೋಗ್ಯದಾಯಕ ಅಂಶಗಳನ್ನು ಗುರುತಿಸಿ ಅಡಕೆ ಚಹಾವನ್ನು ಸಂಶೋಧಿಸುವ ಮೂಲಕ, ಅಡಕೆಯ ಮಾನ ಸಮ್ಮಾನಗಳ ರಕ್ಷಣೆಗೆ ಮುಂದಾಗಿರುವ ಅಡಕೆಯ ಗೌರವವನ್ನು ರಾಷ್ಟ್ರಮಟ್ಟಕ್ಕೆ ಏರಿಸಿದ ನಿವೇದನ್ ನೆಂಪೆ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ನೀಡಿದರು.
ಅಡಕೆ ಚಹಾ ಅಡಕೆ, ಲೆಮೆನ್, ಜಿಂಜರ್, ಮಿಂಟ್ ಹಾಗೂ ತುಳಸಿ ಪ್ಲೇವರ್‌ಗಳಲ್ಲಿ ಮೆಡಿಕಲ್‌ಗಳಲ್ಲಿ ಲಭ್ಯವಿದೆ. ಅಡಕೆ ಚಹಾಕ್ಕೆ ಕೆಂಪು ಅಡಕೆಯನ್ನು ಬಳಸಲಾಗುತ್ತಿದೆ. ಅಡಕೆ ಚಹಾದ ಮಾರುಕಟ್ಟೆ ವಿಸ್ತರಿಸುತ್ತಿದೆ ಎಂದರು.
ನಿವೇದನ್ ನೆಂಪೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವ ವಿದ್ಯಾಲಯದಲ್ಲಿ ಮ್ಯಾನಿಫ್ಯಾಕ್ಚರಿಂಗ್ ಅಂಡ್ ಮ್ಯಾನೇಜ್ಮೆಂಟ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೃಷಿ ಸಂಬಂಧಿಸಿದ ಮೌಲ್ಯವರ್ಧಿತ ಕಂಪೆನಿ ಸ್ಥಾಪಿಸಿ, ರೈತರು ಬೆಳೆಯುವ ಉತ್ಪನ್ನಗಳ ಸಂಶೋಧನೆಯಲ್ಲಿ ತೊಡಗಿದ್ದಾರೆ. ಇವರು ಶಿವಮೊಗ್ಗದ ತೀರ್ಥಹಳ್ಳಿಯ ಮಂಡಗದ್ದೆಯವರು.
ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತೀಶ್‌ಚಂದ್ರ ಮಾತನಾಡಿ, ಅಡಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್‌ಕಾರಕ ಎಂಬಿತ್ಯಾದಿ ಅಪಪ್ರಚಾರದ ಈ ಸಂದರ್ಭದಲ್ಲಿ ಅಡಕೆ ಆರೋಗ್ಯದಾಯಕವೆಂದು ಸಾಬೀತುಪಡಿಸುವ ಅಡಕೆ ಚಹಾ ಇಂದು ರಾಷ್ಟ್ರಮನ್ನಣೆಗೆ ಪಾತ್ರವಾಗಿದೆ. ಈ ಮೂಲಕ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಹೇಳಿದರು.
ಅಡಕೆ ನಿಷೇಧ ವಿಚಾರ ಕೇಂದ್ರ ಸರ್ಕಾರದ ಮುಂದಿಲ್ಲ. ಈ ಕುರಿತು ಅಡಕೆ ಬೆಳೆಗಾರರಿಗೆ ಯಾವುದೇ ಆತಂಕ ಬೇಡ. ಅಡಕೆ ಬೆಳೆಗಾರರ ಹಿತರಕ್ಷಣೆಗೆ ಕ್ಯಾಂಪ್ಕೊ ಸಿದ್ಧವಾಗಿದ್ದು ಯಾವುದೇ ಸವಾಲು ಎದುರಿಸಲು ಸಿದ್ಧ ಎಂದರು.
Click this button or press Ctrl+G to toggle between Kannada and English