ಪುತ್ತೂರು: ಜೆಹಾದಿ ಶಕ್ತಿಗಳನ್ನು ಸಲಹುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕಾಶ್ಮೀರದಲ್ಲಿ ಪಂಡಿತರಿಗಾದ ಗತಿ ಕರಾವಳಿಯಲ್ಲೂ ಬರಬಹುದು, ಕರಾವಳಿ ಕೈತಪ್ಪಿ ಹೋಗಬಹುದು ಎಂದು ಸಂಸದ ಪ್ರತಾಪ್‌ಸಿಂಹ ಎಚ್ಚರಿಸಿದರು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಆಶ್ರಯದಲ್ಲಿ ಪುತ್ತೂರಿನ ದರ್ಬೆಯಿಂದ ಬೊಳುವಾರು ವರೆಗೆ ಪಾದಯಾತ್ರೆಯ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ನಾಡು ಶಿಕ್ಷಣದ ನೆಲೆವೀಡು. ಇದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ. ಹಿಂದೂಗಳು ಒಗ್ಗಟ್ಟಾಗಿ ಮುನ್ನಡೆಯಬೇಕು. ಇಲ್ಲದೇ ಹೋದರೆ ಕಾಶ್ಮೀರದ ಪರಿಸ್ಥಿತಿ ಕರಾವಳಿಗೂ ಒದಗಬಹುದು. ಪಾಕಿಸ್ಥಾನದ ಬಗ್ಗೆ ಡಾ|ಬಿ.ಆರ್. ಅಂಬೇಡ್ಕರ್ ಬರೆದ ಪುಸ್ತಕದಲ್ಲಿ “ಪಾಕ್‌ನಲ್ಲಿ ಇಸ್ಲಾಮಿಕ್ ಬ್ರದರ್‌ಹುಡ್ ಇದೆ’ ಎಂದು ಹೇಳಿದ್ದರು. ಭಾರತದ ಚರಿತ್ರೆಯ ಪುಟಗಳಲ್ಲಿ ಹುಟ್ಟಿಬಂದ ಮತ್ತೂಬ್ಬ ಮೇಧಾವಿ ಅಂಬೇಡ್ಕರ್. ಇವರಿಗೆ ಮಹಾತ್ಮಾ ಗಾಂಧೀಜಿಗೆ ನೀಡಿದ ಸ್ಥಾನಮಾನ ನೀಡಬೇಕಿತ್ತು ಎಂದರು.
ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ ಹತ್ಯೆ, ಮಂಗಳೂರು, ಹುಬ್ಬಳ್ಳಿ, ಮೈಸೂರು, ಕ್ಯಾತಮಾರನಹಳ್ಳಿ ಮೊದಲಾದ ಕಡೆಗಳಲ್ಲಿ ನಡೆದ ಹತ್ಯೆಗಳ ಹಿಂದೆ ಕೆಎಫ್‌ಡಿ, ಪಿಎಫ್‌ಐ, ಎಸ್‌ಡಿಪಿಐ ನೇರ ಶಾಮೀಲಾಗಿವೆ. ಇವು ಕರಾವಳಿಗೆ ಬಂದು ಹಲವು ವರ್ಷಗಳೇ ಸಂದವು, ಈಗ ರಾಜ್ಯಾದ್ಯಂತ ಹಬ್ಬುತ್ತಿವೆ. ಜೆಹಾದಿ ಶಕ್ತಿಗಳಿಗೆ ರಾಜ್ಯದಲ್ಲಿ ಅವಕಾಶ ಒದಗಿಸಲಾಗುತ್ತಿದೆ. ಇದಕ್ಕೆ ಮುಂದಿನ 2 ತಿಂಗಳಲ್ಲಿ ಉತ್ತರ ನೀಡುವ ಕೆಲಸ ಆಗಬೇಕಿದೆ ಎಂದರು.
2019ರಲ್ಲಿ ಅಡಿಕೆ ಆಹಾರ ವಸ್ತು ಅಡಿಕೆಯನ್ನು ಆಹಾರ ವಸ್ತು ಎಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಕುರಿತ ಪ್ರಯೋಗಾಲಯದ ವರದಿಯನ್ನು ಕೇಂದ್ರಕ್ಕೆ ಕೊಡಲಿದ್ದೇವೆ. 2019ರ ಮೊದಲು ಅಡಿಕೆ ಆಹಾರ ವಸ್ತು ಎಂದು ಘೋಷಣೆ ಆಗಲಿದೆ ಎಂದು ನಳಿನ್ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಕೊಡಗಿನ ಕುಶಾಲನಗರದಿಂದ ಶನಿವಾರ ಹೊರಟಯಾತ್ರೆ ರವಿವಾರ ಬೆಳಗ್ಗೆ ಸುಳ್ಯ ವಿಧಾನ ಸಭಾ ಕ್ಷೇತ್ರ ಪ್ರವೇಶಿಸಿತು. ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಂಸದರಾದ ಪ್ರತಾಪ್‌ಸಿಂಹ ನಳಿನ್‌ಕುಮಾರ್ ಕಟೀಲು, ಶಾಸಕ ಎಸ್. ಅಂಗಾರ ಮಾತನಾಡಿದರು.
ಮುಸ್ಲಿಮರು ಶುಕ್ರವಾರ, ಕ್ರೈಸ್ತರು ರವಿವಾರ ಒಟ್ಟು ಸೇರುತ್ತಾರೆ. ಆದರೆ ಹಿಂದೂಗಳು ವರ್ಷಕ್ಕೆ 3-4 ಬಾರಿ ಹಬ್ಬಗಳ ಸಂದರ್ಭ ಒಗ್ಗಟ್ಟಾಗುವುದಕ್ಕೂ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಗಣೇಶೋತ್ಸವಕ್ಕೆ ಬಾಂಡ್ ನೀಡಬೇಕು, ಮೈಕ್ ಕಟ್ಟಲು ಅನುಮತಿ ಇಲ್ಲ. ಹಿಂದೂಗಳು ಒಗ್ಗಟ್ಟಾಗುವ ಸಂಪ್ರದಾಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಪ್ರತಾಪ್ ಸಿಂಹ ವಿಶ್ಲೇಷಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅಧಿಕಾರಕ್ಕೆ ಬಂದ ತತ್‌ಕ್ಷಣ ಗೋಹತ್ಯೆ ನಿಷೇಧ ಕಾಯ್ದೆ ಹಿಂದೆಗೆದುಕೊಂಡು ಗೋಹತ್ಯೆಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟದ್ದು ಸಿದ್ದರಾಮಯ್ಯ ಸಾಧನೆ. ಈ ಮೂಲಕ ಮಹಮ್ಮದ್ ಘೋರಿ, ಅಕºರ್ ಅವರಂತೆ ತನ್ನದೂ ಸುಲ್ತಾನ್ ಆಡಳಿತ ಎಂದು ಅವರು ಸಾಬೀತು ಪಡಿಸಿದ್ದಾರೆ. ತಲವಾರು ತೋರಿಸಿ ದನಗಳ ಕಳವು ಮಾಡಿದರೂ ಸುಮ್ಮನಿರುವ ಶಾಸಕರು, ಗೋಪೂಜೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
Click this button or press Ctrl+G to toggle between Kannada and English