ಮಂಗಳೂರು : ತುಳುಚಿತ್ರರಂಗದ ಬಹುನೀರೀಕ್ಷಿತ ತುಳು ಚಿತ್ರ ‘ತೊಟ್ಟಿಲು’ ಮಾರ್ಚ್ 23 ರ ಶುಕ್ರವಾರ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ರೋಹನ್ ಪ್ರದೀಪ್ ಅಗ್ರಾರ್ ಹೇಳಿದರು.
ಅವರು ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕನ್ನಡ ಚಿತ್ರಗಳಂತೆ ತುಳುವಿನಲ್ಲೂ ಪೈಪೋಟಿ ಆರಂಭವಾಗಿದ್ದು ಗುಣಮಟ್ಟದ ಚಿತ್ರಗಳು ಮಾರುಕಟ್ಟಗೆ ಬರುತ್ತಿದೆ. ‘ಮೈ ಮೂವೀ ಮೇಕರ‍್ಸ್’ ಬ್ಯಾನರಿನಡಿಯಲ್ಲಿ ನಿರ್ಮಾಣದ ಮೊದಲ ತುಳು ಚಿತ್ರ ‘ತೊಟ್ಟಿಲು’ ಮದರ್ ಸೆಂಟಿಮೆಂಟ್, ಲವ್ ಸ್ಟೋರಿ ಹಾಗೂ ಸಂಪೂರ್ಣ ಹಾಸ್ಯಮಯವಾಗಿ ಜನರನ್ನು ಮನರಂಜಿಸಲಿದೆ ಎಂದರು.
ಚಿತ್ರದ ನಾಯಕ ನಟರಾಗಿ ವಿಜೇತ್ ಸುವರ್ಣ ಮಾತನಾಡಿ ನನಗೆ ಇದು ಮೊದಲ ಅನಭವ ಈ ಚಿತ್ರದ ಕಥೆ ಹಾಗೂ ಹಾಸ್ಯ ಪಾತ್ರಗಳು ಅತ್ಯುತ್ತಮವಾಗಿದ್ದು ಪ್ರೇಕ್ಷಕರು ಇಷ್ಟಪಡುವಂತಹ ಮದರ್ ಸೆಂಟಿಮೆಂಟ್ ಹಾಗೂ ಲವ್ ಸ್ಟೋರಿ ಇದೆ ಎಂದು ಹೇಳಿದರು.
ನಟ ರಾಜೇಶ್ ಸ್ಕೈಲಾರ್ಕ್ ಮಾತನಾಡಿ ಚಿತ್ರದಲ್ಲಿ ಸಖತ್ ಕಾಮಿಡಿ, ಕಥೆ ಇರುವುದರಿಂದ ಕುಟುಂಬದ ಎಲ್ಲರಿಗೂ ಮನರಂಜನೆ ನೀಡುವಂತೆ ನಿರ್ದೇಶಕರು ಮಾಡಿದ್ದಾರೆ. ತುಳು ಚಿತ್ರಕ್ಕೆ ಸೀಮಿತ ಮಾರುಕಟ್ಟೆ ಇರುವುದರಿಂದ ಪ್ರೇಕ್ಷಕರ ಸಹಕಾರ ಅಗತ್ಯ ಎಂದರು.
‘ತೊಟ್ಟಿಲು’ ಚಿತ್ರದ ಸಹ ನಿರ್ದೇಶಕ ಸಂತೋಷ್ ಶೆಣ್ಯೆ ಹಾಗೂಸಹ ನಿರ್ಮಾಪಕ ರಿಚಾರ್ಡ್ ಕಾರ್ಕಳ ಉಪಸ್ಥಿತರಿದ್ದರು.
‘ತೊಟ್ಟಿಲು’ ಲವ್ ಸ್ಟೋರಿ ಹಾಗೂ ಮಥರ್ ಸೆಂಟಿಮೆಂಟ್‌ವುಳ್ಳ ಸಂಪೂರ್ಣ ಹಾಸ್ಯಮಯ ಚಿತ್ರ
ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು ಈ ಮೊದಲು ಇವರ ನಿರ್ದೇಶನದಲ್ಲಿ ಹೊರಬಂದ ‘ರಂಬಾರೂಟಿ’ ತುಳುವಿನಲ್ಲಿ ಸುಪರ್‌ಹಿಟ್ ಆಗಿತ್ತು. ಇವರದ್ದೇ ನಿರ್ದೇಶನದಲ್ಲಿ ‘ಜೈ ಮಾರುತಿ ಯುವಕಮಂಡಲ’ ಎಂಬ ಇನ್ನೋಂದು ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ನಿರ್ಮಾಪಕ ರೋಹನ್ ಪ್ರದೀಪ್ ಅಗ್ರಾರ್ ಅವರು ತುಳುವಿನಲ್ಲಿ ಅಲ್ಲದೆ ಕನ್ನಡದಲ್ಲಿ ‘ಹುತ್ತದ ಸುತ್ತ’ ಎಂಬ ಚಲನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ತೊಟ್ಟಿಲು’ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಪ್ರಜ್ವಲ್ ಕುಮಾರ್ ಅತ್ತಾವರ ಅವರದೆ. ಚಿತ್ರಕ್ಕೆ ಸಂಗೀತವನ್ನು ಮೊದಲಬಾರಿಗೆ ಕೊಳಲ್‌ಗಿರಿ ಡೋಲ್‌ವಿನ್ ಮಾಡಿರುತ್ತಾರೆ. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿದ್ದು ಶಶಿರಾಜ್ ಕಾವೂರು, ಕೀರ್ತನ್ ಭಂಡಾರಿ, ದೀಪಕ್ ಕೋಟ್ಯಾನ್ ಸಾಹಿತ್ಯ ಬರೆದಿದ್ದಾರೆ.
ಲವ್ ಸ್ಟೋರಿ ಹಾಗೂ ಮಾತೃ ವಾತ್ಸಲ್ಯದ ಸೆಂಟಿಮೆಂಟ್ ಕಥೆಗೆ ಸಂಪೂರ್ಣ ಹಾಸ್ಯಮಯ ಘಟನೆಗಳನ್ನು ಅಳವಡಿಸಿ ಕುಟುಂಬದ ಸದಸ್ಯರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗುವಿನಿಂದ ‘ತೊಟ್ಟಿಲು’ ಚಿತ್ರ ಹೊರಬರಲಿದೆ.
ಚಿತ್ರೀಕರಣವು ಕಾರ್ಕಳ, ಉಡುಪಿ, ಹಾಸನದಲ್ಲಿ ೨೫ ದಿನಗಳಕಾಲ ನಡೆದಿದ್ದು, ಛಾಯಾಗ್ರಹಣ ಹಾಗೂ ಎಡಿಟಿಂಗ್ ಜವಾಬ್ದಾರಿಯನ್ನು ಕಾರ್ಕಳದ ಕಿಶನ್ ನಾಯ್ಕ್ ನಿರ್ವಹಿಸಿದ್ದಾರೆ. ‘ತೊಟ್ಟಿಲು’ ಚಿತ್ರದ ಸಹ ನಿರ್ಮಾಪಕರಾಗಿ ‘ಕೋಳಿಕಳ್ರು’ ಕನ್ನಡ ಚಿತ್ರದ ನಿರ್ಮಾಪಕ ರಿಚಾರ್ಡ್ ಕಾರ್ಕಳ. ಇವರು ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ಮೂರನೇ ತುಳು ಚಿತ್ರ ‘ಜೈ ಮಾರುತಿ ಯುವಕಮಂಡಲ’ ದ ನಿರ್ಮಾಪಕರಾಗಿದ್ದಾರೆ.
ಚಿತ್ರದ ನಾಯಕ ನಟರಾಗಿ ವಿಜೇತ್ ಸುವರ್ಣ ಮೊದಲಬಾರಿಗೆ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ‘ಅಂತು’ ಕೊಂಕಣಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ಸುರೇಖಾ ಭಟ್ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕೆ. ಸ್ವರಾಜ್ಯಲಕ್ಷ್ಮೀ ಅಲೆವೂರು, ಅರವಿಂದ ಬೋಳಾರ್, ಉಮೇಶ್ ಮಿಜಾರ್, ರಾಜೇಶ್ ಸ್ಕೈಲಾರ್ಕ್, ಸಂದೇಶ್ ಕೋಟ್ಯಾನ್ ಕಾರ್ಕಳ, ಅಕ್ಷತಾ ಅಮೀನ್, ಶಬರೀಶ ಕಬ್ಬಿನಾಲೆ, ಸೂರಜ್ ಸಾಲಿಯಾನ್, ಅರ್ಪಿತ್ ಅಡ್ಯಾರ್, ಸಂತೋಷ್ ಶೆಣ್ಯೆ, ಚೈತ್ರ ಅಂಚನ್, ಮಾಸ್ಟರ್ ಪ್ರತೀಕ್ ಮೊದಲಾದವರು ಅಭಿನಯಿಸಿದ್ದಾರೆ.
ಚಲನ ಚಿತ್ರವು ಮೊದಲ ಹಂತದಲ್ಲಿ ಮಂಗಳೂರು ಹಾಗೂ ಎರಡನೆಯವಾರ ಮಲ್ಟಿಪ್ಲೆಕ್ ಹಾಗೂ ಕರಾವಳಿ ಕರ್ನಾಟಕದಾದ್ಯಂತ ಬಿಡುಗಡೆಗೊಳ್ಳಲಿದೆ.
Click this button or press Ctrl+G to toggle between Kannada and English