ಮಂಗಳೂರು: ವಿದ್ಯಾರ್ಥಿ ಸಮುದಾಯದಲ್ಲಿ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕಾರ್ಯಕ್ರಮವೊಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಶ್ರಯದಲ್ಲಿ ಇತ್ತೀಚಿಗೆ ನಗರದ ಬೆಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿತು. ನಾನು ಮತಚಲಾಯಿಸುತ್ತೇನೆ ಎನ್ನುವಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳೆಲ್ಲರೂ ಸಾಮೂಹಿಕವಾಗಿ ಉಚ್ಚರಿಸುವ ಮೂಲಕ ಪ್ರತಿಜ್ಞೆಗೈದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂದ.ಕ. ಜಿಲ್ಲಾ ಪಂಚಾಯತ್‌ನ SಗಿಇಇP ವಿಭಾಗದ ಸುಧಾಕರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮತದಾನದಕುರಿತಾದ ಮಹತ್ವವನ್ನು ತಿಳಿಸಿದರಲ್ಲದೆ ಧ್ಯೇಯವಾಕ್ಯ ಘೋಷಿಸುವ ಮೂಲಕ ಪ್ರತಿಜ್ಞೆ ಭೋಧಿಸಿದರು.
ಈ ಸಮಾರಂಭದಲ್ಲಿಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್‌ಕುಮಾರ್ ಶೆಟ್ಟಿ ,ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ರಾಮಚಂದ್ರ, ಕಾಲೇಜಿನ ಸಂಚಾಲಕರಾದ ಶ್ರೀ ದೇವಾನಂದ ಪೈ, ಕ.ಸಾ.ಪ ಮಂಗಳೂರು ತಾಲೂಕುಘಟಕಅಧ್ಯಕ್ಷೆ ಬಿ. ವಿಜಯಲಕ್ಷ್ಮೀ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English