ಪುತ್ತೂರಿನ ಜನಪ್ರಿಯ ಶಾಸಕಿ ಶಕುವಕ್ಕ

12:09 PM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

shakuntala-shettyಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎರಡನೇ ದೊಡ್ಡನಗರ ಪುತ್ತೂರು ಹೇಳಿ ಕೇಳಿ ಬಿಜೆಪಿ ಭದ್ರಕೋಟೆ.1994ರಿಂದ 2008ರ ವರೆಗೆ ಇಲ್ಲಿ ಬಿಜೆಪಿಯದ್ದೇ ರಾಜ್ಯಭಾರ.ಅದಕ್ಕೂ ಮೊದಲು ಇಲ್ಲಿ ಪರಿವಾರದ ಶಾಸಕರೇ ಆಯ್ಕೆ ಆಗಿದ್ದರು. ಕಳೆದ ಬಾರಿ ಬಿಜಪಿಯಿಂದ ವಲಸೆ ಬಂದ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಪುತ್ತೂರನ್ನು ಗೆದ್ದು ಕೊಟ್ಟರು. ಒಂದು ಬಾರಿ ಬಿಜೆಪಿಯಿಂದಲೂ ಆಯ್ಕೆ ಆಗಿದ್ದ ಶಕುವಕ್ಕ ಇಂದು ಪುತ್ತೂರಿನ ಜನಪ್ರಿಯ ಶಾಸಕಿ.

ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಶಿವರಾಮ ಕಾರಂತರ ಕಾರ್ಯಕ್ಷೇತ್ರ ಬಾಲವನ , ಬಿರುಮಲೆ ಗುಡ್ಡೆ ಮುಂತಾದಕ್ಕೆ ಹೆಸರುವಾಸಿಯಾದ ಪುತ್ತೂರಿನಲ್ಲಿ 1978ರಲ್ಲೇ ಇಲ್ಲಿ ಜನತಾ ಪಕ್ಷದಿಂದ ಉರಿಮಜಲು ರಾಮಭಟ್ ಗೆಲುವು ಸಾಧಿಸಿದ್ದರು.ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಡಿ.ವಿ. ಸದಾನಂದ ಗೌಡ ಅವರಿಬ್ಬರ ರಾಜಕೀಯ ಗುರು ಕೂಡ ರಾಮಭಟ್ ಆಗಿದ್ದಾರೆ.
ರಾಮಭಟ್ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಬೇರುಗಳನ್ನು ಇಳಿಬಿಡಲು ಪ್ರಮುಖ ಕಾರಣವಾಗಿದ್ದರು.1983ರಲ್ಲೂ ಬಿಜೆಪಿಯಿಂದ ಇಲ್ಲಿ ಗೆದ್ದಿದ್ದರು.

ಸದ್ಯ ಕಾಪು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿನಯ್ ಕುಮಾರ್ ಸೊರಕೆ ಇಲ್ಲಿ 1985 ಮತ್ತು 1989ರಲ್ಲಿ ಗೆಲುವು ಸಾಧಿಸಿದ್ದರು. ನಂತರ ಮತ್ತೆ ಪುತ್ತೂರು ನಿಧಾನವಾಗಿ ಬಿಜೆಪಿಯತ್ತ ವಾಲಿತು. 1994ರಿಂದ 2008ರ ವರೆಗೆ ಇಲ್ಲಿ ಬಿಜೆಪಿಯದ್ದೇ ರಾಜ್ಯಭಾರ.

ಮುಂದೆ ಮುಖ್ಯಮಂತ್ರಿಯಾಗಿ, ಸದ್ಯ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದ ಗೌಡರು 1994 ರಲ್ಲಿ ಸೊರಕೆಯನ್ನು ಸೋಲಿಸಿ ಕ್ಷೇತ್ರವನ್ನು ಮತ್ತೆ ಬಿಜೆಪಿ ತೆಕ್ಕೆಗೆ ತಂದಿದ್ದರು.1999ರಲ್ಲಿಯೂ ಡಿವಿಎಸ್ ಗೆದ್ದು ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಯಾದರು.ನಂತರದ ದಿನಗಳಲ್ಲಿ ಡಿ.ವಿ. ಸದಾನಂದ ಗೌಡರು ಕ್ಷೇತ್ರ ತೊರೆದರೂ ಪುತ್ತೂರು ಬಿಜೆಪಿಹಿಡಿತದಲ್ಲೇ ಇತ್ತು.

2004ರಲ್ಲಿ ಬಿಜೆಪಿಯ ಶಕುಂತಳಾ ಶೆಟ್ಟಿ ಗೆಲುವು ಸಾಧಿಸಿದರು.2008ರಲ್ಲಿ ಶಕುಂತಳಾ ಶೆಟ್ಟಿಗೆ ಟಿಕೆಟ್ ಕೈತಪ್ಪಿತು.ಇದರಿಂದ ಬಂಡಾಯವೆದ್ದ ಸಂಘ ಪರಿವಾರದ ಒಂದು ಉರಿಮಜಲು ರಾಮ ಭಟ್ಟರ ಸಹಿತ ಬಿಜೆಪಿಗೆ ವಿರುದ್ಧ ಕೆಲಸ ಮಾಡಿದರೂ. ಆದರೂ, ಮಲ್ಲಿಕಾ ಪ್ರಸಾದ್ ಭಂಡಾರಿ 2008ರಲ್ಲಿ ಗೆಲುವು ಸಾಧಿಸಿದರು.

2013ರಲ್ಲಿ ಶಕುಂತಳಾ ಶೆಟ್ಟಿಅವರನ್ನು ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ಸೇರಿಸಿ ಅಭ್ಯರ್ಥಿ ಮಾಡಿದ ಪರಿಣಾಮ ಶಕುವಕ್ಕ ಮತ್ತೊಮ್ಮೆ ಶಾಸಕಿಯಾದರು.

ಸುಮಾರು 20 ವರ್ಷಗಳಿಂದ ಬಿಜೆಪಿ ಭದ್ರ ಕೋಟೆಯಾಗಿ ಹೊರ ಹೊಮ್ಮಿದ್ದ ಪುತ್ತೂರಿನಲ್ಲಿ ಅದೇಪಕ್ಷದಿಂದ ಬಂದು ಬಿಜೆಪಿ ರಾಜ್ಯಭಾರಕ್ಕೆ ಕೊನೆ ಹಾಡಿದರು ಶಕುಂತಳಾ ಶೆಟ್ಟಿ. ಈ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ 66,345 ಮತಗಳನ್ನು ಪಡೆದರೆ, ಬಿಜೆಪಿಯ ಸಂಜೀವ ಮಠಂದೂರು 62,056 ಮತಗಳನ್ನು ಪಡೆದು 4,289 ಮತಗಳ ಅಂತರದಿಂದ ಸೋತಿದ್ದರು.

ರಾಜಕೀಯವಾಗಿ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಸಾಕಷ್ಟು ಹಿಡಿತ ಹೊಂದಿದ್ದು, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿಯಾಗಿ ಕೂಡ ಕಾರ್ಯನಿರ್ವಹಿಸಿದರು. ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಹೆಗ್ಗಳಿಕೆ ಶಕುವಕ್ಕ ಅವರದ್ದು.

ಪುತ್ತೂರಿಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ ಬಳಿಕ ಬಹುಗ್ರಾಮ ಯೋಜನೆ, ಅಲ್ಪಸಂಖ್ಯಾತ ನಿಗಮದ ಅನುದಾನಗಳು ಸೇರಿದಂತೆ ಸುಮಾರು ರೂ. ೯೦ ಕೋಟಿಯಷ್ಟು ಮಂಜೂರಾಗಿದೆ.ಕಳೆದ ೫ ವರ್ಷದ ಅವಧಿಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಸುಮಾರು ರೂ.೯೦೦ ಕೋಟಿ ಅನುದಾನಬಂದಿರುವುದು ಇತಿಹಾಸ ಆಗಿದೆ.

ಶಾಸಕಿ ಶಕುಂತಳಾ ಶೆಟ್ಟಿಅವರ ವಿಶೇಷ ಮುತುವರ್ಜಿಯಿಂದಾಗಿ ಕಳೆದ ೫ ವರ್ಷದ ಅವಧಿಯಲ್ಲಿ ಪುತ್ತೂರು ಕ್ಷೇತ್ರಕ್ಕೆಅಲ್ಪಸಂಖ್ಯಾತ ನಿಗಮದಿಂದ ರೂ.೧೩ ಕೋಟಿಯ ಯೋಜನೆ ಬಂದಿದೆ ಎನ್ನುತ್ತಾರೆ. ಶಾಸಕಿ ಶಕುವಕ್ಕ ಪಕ್ಷಬೇಧ ಮರೆತು ಕೆಲಸ ಮಾಡುತ್ತಿರುವುದರಿಂದ ಕ್ಷೇತ್ರದಲ್ಲಿ ತುಂಬಾ ಹೆಸರುವಾಸಿಯಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English