ಗುಜರಾತಿನ ಸೂರತ್‌ನಲ್ಲಿ ಕ್ಯಾಂಪ್ಕೊ ಮಾರಾಟ ಕೇಂದ್ರ ಆರಂಭ

6:11 PM, Tuesday, May 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

campcoಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಕೃಷಿಕರು ಬೆಳೆಯುವ ಅಡಿಕೆ ಉತ್ತರ ಭಾರತದಲ್ಲಿ ಬಹುಬೇಡಿಕೆಯ ವಸ್ತುವಾಗಿದೆ. ವಿಶೇಷವಾಗಿ, ಉತ್ತಮ ಗುಣಮಟ್ಟದ ಚಾಲಿ (ಬಿಳಿ) ಅಡಿಕೆಗೆ ಗುಜರಾತ್ ರಾಜ್ಯ ಯೋಗ್ಯ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಗುಜರಾತಿನ ಅಹಮದಾಬಾದ್ ಮತ್ತು ರಾಜಕೋಟ್ ನಗರಗಳಲ್ಲಿ ಈಗಾಗಲೇ ಮಾರಟ ಕೇಂದ್ರಗಳನ್ನು ಹೊಂದಿರುವ ಕ್ಯಾಂಪ್ಕೊ, ಗ್ರಾಹಕರ ಬೇಡಿಕೆಗನುಸಾರವಾಗಿ ಇದೀಗ ಆ ರಾಜ್ಯದಲ್ಲಿ ಮೂರನೇ ಮಾರಾಟ ಕೇಂದ್ರವನ್ನು ಸೂರತ್ ನಗರದಲ್ಲಿ ಆರಂಭಿಸಿದೆ. ಗುಜರಾತಿನ ಎರಡನೇ ದೊಡ್ಡ ನಗರವಾಗಿರುವ ಸೂರತ್, ವಜ್ರ ಹಾಗೂ ಜವಳಿ ಉದ್ಯಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ.

ಕ್ಯಾಂಪ್ಕೊ ಅಧ್ಯಕ್ಷ ಶ್ರೀ ಎಸ್.ಆರ್.ಸತೀಶ್ಚಂದ್ರ ಅವರು, ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುರೇಶ್ ಭಂಡಾರಿಯವರ ಉಪಸ್ಥಿತಿಯಲ್ಲಿ ಇದೇ ಕಳೆದ 20.05.18 ರಂದು ಸೂರತ್ ಕ್ಯಾಂಪ್ಕೊ ಮಾರಾಟ ಕೇಂದ್ರವನ್ನು ಉದ್ಘಾಟಿಸುತ್ತಾ, ಗ್ರಾಹಕರ ಸಂತೃಪ್ತಿಯೊಂದಿಗೆ ಮಾರುಕಟ್ಟೆಯ ಬಲವರ್ಧನೆಯ ಸಕಾರತ್ಮಾಕ ಅಂಶಗಳಿಂದ ಬೆಳೆಗಾರರ ಹಿತರಕ್ಷಣೆಯಾಗುವ ದೃಢ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸೂರತ್‌ನಲ್ಲಿ ಮಾರಾಟ ಅಭಿವೃದ್ಧಿ ಕಾರ್ಯಸ್ಥರಾಗಿ ನೇಮಕಗೊಂಡಿರುವ ಶ್ರೀ ಪಂಕಜ್ ಸಿ. ಕೋಟಕ್, ಸೂರತ್ ಕ್ಯಾಂಪ್ಕೊ ಶಾಖಾಧಿಕಾರಿ ಶ್ರೀ ಹರೀಶ್ ಮೂಲ್ಯ, ಅಹಮದಾಬಾದ್ ಕ್ಯಾಂಪ್ಕೊ ಶಾಖಾಧಿಕಾರಿ ಶ್ರೀ ಪ್ರದೀಪ್ ಕುಮಾರ್ ಮತ್ತು ಉತ್ತರ ಭಾರತದಲ್ಲಿ ಕ್ಯಾಂಪ್ಕೊದಿಂದ ನಿಯೋಜನೆಗೊಂಡಿರುವ ಮಾರಾಟ ಅಭಿವೃದ್ಧಿ ಕಾರ್ಯಸ್ಥರು  ಹಾಜರಿದ್ದರು. ದೇಶದಲ್ಲಿ ಇದು ಕ್ಯಾಂಪ್ಕೊದ 14ನೇ ಮಾರಾಟ ಕೇಂದ್ರವಾಗಿದೆ.

ಕ್ಯಾಂಪ್ಕೊ ಸ್ಥಾಪನೆಯ ಆರಂಭದಿಂದಲೂ ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದ್ದು ಮುಂದೆಯೂ ಈ ಕಾರ್ಯವನ್ನು ಮುಂದುವರಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English