ಮೂಡುಬಿದಿರೆ: ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯಕೀಯ ಕಾರ್ಯಗಾರವನ್ನು ಮಂಗಳೂರಿನ ಖ್ಯಾತ ಪೆರಿಫೆರಲ್ ವ್ಯಾಸ್ಕ್ಯುಲರ್ ಸರ್ಜನ್ ಡಾ. ನರೆನ್ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿದ ಇಂದಿನ ಕಾಲಘಟ್ಟದಲ್ಲಿ ಡೀಪ್ ವೈನ್ ಥ್ರೊಂಬೋಸಿಸ್‍ನ ಸಮಸ್ಯೆಗಳಿಗೆ ಅತ್ಯಾಧುನಿಕ ಚಿಕಿತ್ಸಾ ಪರಿಕ್ರಮಗಳನ್ನು ವಿವರಿಸಿದರು. ಈ ಕಾಯಿಲೆಯ ಸಮಸ್ಯೆಗಳು, ಗಂಭೀರ ಪರಿಣಾಮಗಳು ಹಾಗೂ ಸಮರ್ಪಕ ಆಧುನಿಕ ಪರಿಹಾರೋಪಯಗಳ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್‍ನ ಪ್ರಸೂತಿ ತಜ್ಞೆ ಡಾ. ಹನ ಶೆಟ್ಟಿ ವಹಿಸಿದ್ದರು. ಆಳ್ವಾಸ್ ಆಯುರ್ವೇದ ಅಸ್ಪತ್ರೆಯ ವೈದ್ಯಕೀಯ ಅಧೀüಕ್ಷಕಿ ಡಾ. ಝೆನಿಕಾ ಡಿ’ಸೋಜ ಸ್ವಾಗತಿಸಿದರು. ಡಾ. ಸುರೇಶ್ ವೈ. ವಂದಿಸಿದರು. ಡಾ. ಸಫ್ರಾಯ ನಿರೂಪಿಸಿದರು.
ಸುಮಾರು 300 ಕ್ಕೂ ಅಧಿಕ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English