ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಕಾರ್ಗಿಲ್ ದಿನಾಚರಣೆ

5:49 PM, Thursday, July 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

police-kargilಮಂಗಳೂರು: ಇಂದು ಜಿಲ್ಲಾ ಗೃಹರಕ್ಷಕ ದಳ ಕಛೇರಿ, ಮೇರಿಹಿಲ್‍ನ ಆವರಣದಲ್ಲಿ ವಾರದ ಕವಾಯತು ನಡೆಸಲಾಯಿತು ಮತ್ತು ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಾರ್ಗಿಲ್‍ನಲ್ಲಿ ಹುತಾತ್ಮರಾದವರಿಗೆ ಗೌರವ ನಮನವನ್ನು ಸಲ್ಲಿಸುತ್ತಾ, ಕಾರ್ಗಿಲ್ ವಿಜಯೋತ್ಸವ ನಡೆಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಭರತ್ ಶೆಟ್ಟಿ ವೈ, ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಇವರು ಮಾತನಾಡಿ ದೇಶಕ್ಕಾಗಿ ಅದೇಷ್ಟೋ ಜನ ಸೈನಿಕರು ಪ್ರಾಣವನ್ನೇ ಭಾರತಮಾತೆಗೆ ಅರ್ಪಿಸಿದ್ದರು. ದೇಶಕ್ಕಾಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಒತ್ತೇ ಇಟ್ಟು ಹೋರಾಡಿದರು.

ದೇಶಕ್ಕಾಗಿ ಮಡಿದ ಆ ಸೈನಿಕರ ಆತ್ಮಗಳಿಗೆ ಭಾವಪೂರ್ಣ ನಮನ ಸಲ್ಲಿಸೋಣ. ತಮ್ಮ ಪ್ರಾಣವನ್ನೇ ತೆತ್ತ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದರು.

ಮಾಜಿ ಸೈನಿಕ ಸಂಘದ ಅಧ್ಯಕ್ಷರು, ವಿಕ್ರಂದತ್ತ, ಲಯನ್ಸ್ ಅಧ್ಯಕ್ಷರಾದ ವಿಜಯ್‍ವಿಷ್ಣು ಮಯ್ಯ, ಲಯನ್ಸ್ ಕಾರ್ಯದರ್ಶಿ ಹೇಮಾ ರಾವ್, ಲಯನೆಸ್ ಅಧ್ಯಕ್ಷರಾದ ಜ್ಯೋತಿ ಶೆಟ್ಟಿ, ಲಯನ್ಸ್ ಸದಸ್ಯರಾದ ಗುರುಪ್ರೀತ್, ನ್ಯಾನ್ಸಿ ಮಸ್ಕರೇನಸ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ಶ್ರೀ ರಮೇಶ್‍ರವರು ವಂದನಾರ್ಪಣೆ ಗೈದರು.

ಮಂಗಳೂರು ಘಟಕದ ಘಟಕಾಧಿಕಾರಿ, ಶ್ರೀ ಮಾರ್ಕ್‍ಶೇರಾ ಹಾಗೂ ಮಂಗಳೂರು ಘಟಕದ ಗೃಹರಕ್ಷಕ, ಗೃಹರಕ್ಷಕಿಯರು ಸೇರಿದಂತೆ ಸುಮಾರು 105ಕ್ಕೂ ಹೆಚ್ಚು ಮಂದಿ ಗೃಹರಕ್ಷಕರು ಈ ಕಾರ್ಗಿಲ್ ದಿನಾಚರಣೆಯಲ್ಲಿ ಭಾಗವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English