ಮಂಗಳೂರು: 2018ನೇ ಸಾಲಿನ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ವತಿಯಿಂದ ಉತ್ತಮ ಕೆಲಸ ನಿರ್ವಹಿಸಿರುವುದಕ್ಕೆ ನೀಡಲ್ಪಡುವ ಗೌರವಾನ್ವಿತ ರಾಷ್ಟ್ರಪತಿ ಪದಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಗ್ನಿಶಾಮಕ ಠಾಣೆಯ ಎನ್.ಸಿ.ರಾಮಚಂದ್ರ ನಾಯ್ಕರವರನ್ನು ಘೋಷಿಸಲಾಗಿದೆ.
ಎನ್.ಸಿ.ರಾಮಚಂದ್ರ ನಾಯ್ಕ ಅವರು 1993ರಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಗೆ ಅಗ್ನಿಶಾಮಕ ಚಾಲಕರಾಗಿ ಸೇರ್ಪಡೆಗೊಂಡು ಪುತ್ತೂರು ಹಾಗೂ ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ ಅಗ್ನಿಶಾಮಕ ಚಾಲಕ ಹುದ್ದೆಯಿಂದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಿ ಪ್ರಸ್ತುತ ಪುತ್ತೂರು ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತನ್ನ 25 ವರ್ಷಗಳ ಸೇವಾ ಅವಧಿಯಲ್ಲಿ ಅಗ್ನಿಕರೆಯಲ್ಲಿ ಖಾಸಗಿ, ಸಾರ್ವಜನಿಕ ಆಸ್ತಿಪಾಸ್ತಿ ಸಂರಕ್ಷಿಸುವಲ್ಲಿ ಹಾಗೂ ರಕ್ಷಣಾ ಕರೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿರುತ್ತಾರೆ. ಸದ್ಯ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಪದಕಕ್ಕೆ ಪುರಸ್ಕೃತರಾಗಿದ್ದಾರೆ.
Click this button or press Ctrl+G to toggle between Kannada and English