ನಕ್ಸಲ್ ಬೆಂಬಲಿಗರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಪುತ್ತೂರಿನಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ

3:06 PM, Tuesday, September 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

putturuಪುತ್ತೂರು: ನಕ್ಸಲೀಯರಿಗೆ ಬೆಂಬಲ ನೀಡಿದ ಗಿರೀಶ್ ಕಾರ್ನಾಡ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸನಾತನ ಸಂಸ್ಥೆಯ ಮೇಲಿನ ಸುಳ್ಳು ಆರೋಪವನ್ನು ಖಂಡಿಸಿ ಬೆಳಿಗ್ಗೆ 11.00 ಗಂಟೆಗೆ ಪುತ್ತೂರು ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಎಲ್ಲಾ ಹಿಂದೂಪರ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಿತು. ಶಂಖನಾದದ ಮೂಲಕ ಆಂದೋಲನವನ್ನು ಆರಂಭಿಸಲಾಯಿತು. ಚೇತನ ಪ್ರಭು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ಮಂಗಳೂರು ಕೇಂದ್ರ ಸಮನ್ವಯಕರಾದ ಶ್ರೀ. ಉಪೇಂದ್ರ ಆಚಾರ್ಯ, ’ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ’ನಾನೂ ಕೂಡ ನಗರ ನಕ್ಸಲ್’ ಎಂಬ ಫಲಕವನ್ನು ತನ್ನ ಕೊರಳಿನಲ್ಲಿ ಧರಿಸಿಕೊಂಡು ನಕ್ಸಲರಿಗೆ ಬೆಂಬಲ ನೀಡಿದ ಘಟನೆ ನಡೆಯಿತು.

ಹಿಂದೂಗಳಿಗೆ ಒಂದು ನ್ಯಾಯ ಮತ್ತು ನಕ್ಸಲವಾದಿಗಳ ಸಮರ್ಥಕರಿಗೆ ಮತ್ತೊಂದು ನ್ಯಾಯ ಹೀಗೇಕೆ? ದೇಶದ್ರೋಹಿ ನಕ್ಸಲವಾದಿಗಳ ಸಮರ್ಥನೆ ಮಾಡಿರುವ ಕಾರಣ ಇವರೆಲ್ಲರ ಮೇಲೆಯೂ ಕಠಿಣ ಕ್ರಮ ಜರುಗಿಸುವ ಕಾನೂನು ರಚಿಸಬೇಕು ಮತ್ತು ‘ನಗರವಾಸಿ ನಕ್ಸಲವಾದಿ’ಗಳೊಂದಿಗೆ ದೇಶಾದ್ಯಂತ ನೆಲೆಯೂರಿರುವ ನಕ್ಸಲವಾದಿಗಳನ್ನು ನಾಶಪಡಿಸಲು ಸೈನ್ಯ ಮತ್ತು ಪೊಲೀಸರಿಗೆ ಸರ್ವಾಧಿಕಾರವನ್ನು ನೀಡಬೇಕು’ ಎಂದರು.

putturu-2ಅವರು ಮುಂದೆ ಮಾತನಾಡುತ್ತಾ, ನಾಲಾಸೋಪಾರಾ ಸ್ಫೋಟಕ ಪ್ರಕರಣ ಮತ್ತು ದಾಭೋಲಕರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಲ್ಲಿ 9 ಹಿಂದುತ್ವನಿಷ್ಠರನ್ನು ಬಂಧಿಸಲಾಗಿದೆ. ಇವರಲ್ಲಿ ಯಾರೂ ಸನಾತನ ಸಂಸ್ಥೆಯ ಸಾಧಕರಲ್ಲ, ಆದಾಗ್ಯೂ‘ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು’, ಎನ್ನುವ ತಳಬುಡವಿಲ್ಲದ ಮತ್ತು ಉತ್ಪ್ರೇಕ್ಷೆಯ ಬೇಡಿಕೆಯನ್ನು ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು, ತಥಾಕಥಿತ ಪುರೋಗಾಮಿಗಳು, ಮುಸಲ್ಮಾನ ಮುಖಂಡರು ಮುಂತಾದವರು ಮಾಡುತ್ತಿದ್ದಾರೆ.

ಕೆಲವು ಪ್ರಸಾರ ಮಾಧ್ಯಮಗಳು ಬಿಸಿಬಿಸಿ ಮತ್ತು ದಿಕ್ಕು ತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡಿ ‘ಹಿಂದೂ ಭಯೋತ್ಪಾದಕತೆ’ಯ ಡಂಗುರ ಸಾರುತ್ತಿದ್ದಾರೆ, ಹಿಂದೂ ವಿರೋಧಿ ಧೋರಣೆ ಅನುಸುತ್ತಿರುವ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಬೇಕೆಂದು ರಾಜ್ಯದ ಮಾನ್ಯ ಗೃಹಮಂತ್ರಿ ಡಾ. ಜಿ. ಪರಮೇಶ್ವರ ಇವರಿಗೆ ಸಹಾಯಕ ಕಮಿಷನರ್ ಕಛೇರಿಯ ಮೂಲಕ ಮನವಿ ನೀಡಲಾಯಿತು.

ಪ್ರತಿಭಟನೆಯ ವೇಳೆ ಧರ್ಮಪ್ರೇಮಿಗಳು ರಾಜ್ಯ ಸರಕಾರದ ವಿರುದ್ಧ, ’ವ್ಯಕ್ತಿ ಸ್ವಾತಂತ್ರ್ಯದ ಆಧಾರದಲ್ಲಿ ನಕ್ಸಲ್ ವಾದಿಗಳನ್ನು ಸಮರ್ಥಿಸುವವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಕಠಿಣ ಕಾನೂನು ಜಾರಿಗೊಳಿಸಿರಿ’, ’ಹಿಂದೂ ಸಂಘಟನೆಯನ್ನು ಮುಗಿಸಲು ಷಡ್ಯಂತ್ರವನ್ನು ಮಾಡುವವರಿಗೆ ಧಿಕ್ಕಾರ, ಧಿಕ್ಕಾರ’ ಎಂಬ ಘೋಷಣೆಯನ್ನು ಕೂಗಿದರು.

ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ದಯಾನಂದ ಹೆಗ್ಡೆ, ಶ್ರೀ. ಜನಾರ್ದನ, ಶ್ರೀ. ಮಾಧವ ಎಸ್. ರೈ ಕುಂಬ್ರ, ಧರ್ಮಪ್ರೇಮಿಗಳಾದ ಶ್ರೀ. ಹರಿಪ್ರಸಾದ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ. ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English