ಕರ್ತವ್ಯ ನಿರತ ಪೇದೆ ಮೇಲೆ ಹಲ್ಲೆ ಪ್ರಕರಣ: ಅಪರಾಧಿಗೆ ಕಠಿಣ ಸಜೆ

10:54 AM, Tuesday, October 9th, 2018
Share
1 Star2 Stars3 Stars4 Stars5 Stars
(No Ratings Yet)
Loading...

arrstedಮಂಗಳೂರು: ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ನಡೆದ ಪೊಲೀಸ್ ಪೇದೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಉಮ್ಮರ್ ಫಾರೂಕ್ಗೆ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 5 ವರ್ಷ ಕಠಿಣ ಸಜೆ ವಿಧಿಸಿದೆ.

2015ರ ಎಪ್ರಿಲ್ 17ರಂದು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ವಾಸವಿರುವ ಜೊಹರಾ ಎಂಬುವರ ಮಗಳು ತಸ್ಮಿಯಾ ಎಂಬುವರಿಗೆ ಆರೋಪಿ ಹಲ್ಲೆ ನಡೆಸಿ ಕೊಲೆ ನಡೆಸಲು ಯತ್ನಿಸಿದ್ದ. ಈ ಬಗ್ಗೆ ಜೋಹರ ಠಾಣೆಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಠಾಣಾ ಪ್ರಭಾರದಲ್ಲಿದ್ದ ಹೆಚ್.ಸಿ 1397 ನಾರಾಯಣ ಅವರು ಹೆಚ್.ಸಿ ವಿಶ್ವನಾಥ್ ರೈ ಅವರನ್ನು ಕರ್ತವ್ಯದಲ್ಲಿ ಕರೆದುಕೊಂಡು ಜೊತೆಯಲ್ಲಿ ಹೋಗಿದ್ದರು.

ಈ ಸಂದರ್ಭ ಆರೋಪಿಯು ಮಾರಣಾಂತಿಕ ಹಲ್ಲೆ ನಡೆಸಲು ಕಬ್ಬಿಣದ ರಾಡಿನಿಂದ ಬೀಸುತ್ತಾ ದಾಳಿ ನಡೆಸುತ್ತಿದ್ದ. ಅಲ್ಲಿನ ಪರಿಸ್ಥಿತಿಯನ್ನು ತಿಳಿದು ಸಮವಸ್ತ್ರದಲ್ಲಿದ್ದ ಪೇದೆಗಳಾದ ವಿಶ್ವನಾಥ ರೈ ಮತ್ತು ನಾರಾಯಣ ಅವರು ತಡೆಯಲು ಮುಂದಾಗಾಗ ಆರೋಪಿಯು ನಾರಾಯಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನಾರಾಯಣ ಅವರ ಮೇಲೆ ಹಲ್ಲೆಗೈದಿದ್ದ.

ಈವೇಳೆ ತಡೆಯಲು ಬಂದ ಮತ್ತೋರ್ವ ಪೇದೆಯ ಮೇಲೂ ಹಲ್ಲೆ ನಡೆಸಲಾಗಿತ್ತು. ಆ ಸಂದರ್ಭ ಆರೋಪಿಯನ್ನು ಆಗಿನ ಪೊಲೀಸ್ ನಿರೀಕ್ಷಕ ಮಂಜಯ್ಯರವರು ದಸ್ತಗಿರಿ ಮಾಡಿದ್ದರು. ಈಗಿನ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಅಂತಿಮ ತೀರ್ಪನ್ನು ನೀಡಿದ್ದು, ಅದರಂತೆ 307 ಐಪಿಸಿಯಲ್ಲಿ ಆರೋಪಿ ಖುಲಾಸೆಗೊಂಡಿದ್ದಾನೆ.

333 ಐಪಿಸಿಯಲ್ಲಿ 5 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿ 1ವರ್ಷ ಸಜೆ ಮತ್ತು 504 ಐಪಿಸಿಯಲ್ಲಿ 1ವರ್ಷ ಸಾದಾ ಸಜೆ ಹಾಗೂ 7000 ರೂ, ದಂಡ, ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿ 3 ತಿಂಗಳ ಸಜೆ ವಿಧಿಸುವಂತೆ ಆದೇಶ ನೀಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English