ಪುತ್ತೂರು : ಇಲ್ಲಿನ ಕಾವು ಪ್ರದೇಶದಲ್ಲಿ, ಕ್ಯಾಂಪ್ಕೊ ತನ್ನ ಸ್ವಂತ ನಿವೇಶನದಲ್ಲಿ ಅತ್ಯಾಧುನಿಕವಾದ ಬೃಹತ್ ಗೋದಾಮು ನಿರ್ಮಿಸಲು ಸಂಕಲ್ಪಸಿದ್ದು ಅದರ ಅಂಗವಾಗಿ ಭೂಮಿ ಪೂಜೆ ಕಾರ್ಯ ಮಂಗಳವಾರ ನೆರವೇರಿತು.
1.31 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸುಮಾರು 24.5 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬೃಹತ್ ಗೋದಾಮು ಕಾವಿನಲ್ಲಿ ನಿರ್ಮಾಣಗೊಳಲ್ಲಿದ್ದು, ಅಲ್ಲಿ ಅಡಕೆ, ರಬ್ಬರ್ ಹಾಗೂ ಕಾಳುಮೆಣಸು ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಶೇಖರಣೆಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಸುಸಜ್ಜಿತ ಆಧುನಿಕ ವ್ಯವಸ್ಥೆಗಳಿಂದ ಸಂಸ್ಥೆಯ ಕಾರ್ಯಕ್ಷಮತೆ ವೃದ್ಧಿಗೊಂಡು ಸದಸ್ಯರಿಗೆ ಹೆಚ್ಚಿನ ಮೌಲ್ಯಾಧಾರಿತ ಸೇವೆ ನೀಡಲು ಸಾಧ್ಯವಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಶ್ರೀ ಎಸ್.ಆರ್. ಸತೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ವಿಭಾಗ ಕಾರ್ಯವಾಹ ಶ್ರೀ ನ. ಸೀತಾರಾಮ ಹಾಗೂ ಕ್ಯಾಂಪ್ಕೊ ಅಧ್ಯಕ್ಷರು ಶಂಕು ಸ್ಥಾಪನೆ ನೆರವೇರಿಸಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಲೂಕು ಪಂಚಾಯತ್‌ನ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್, ಕಾವು ಸಿ.ಎ. ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ನನ್ಯ ಅಚ್ಯುತ ಮೂಡೆತ್ತಾಯ, ಕ್ಯಾಂಪ್ಕೊ ಉಪಧ್ಯಾಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುರೇಶ್ ಭಂಡಾರಿ ಎಂ., ಕ್ಯಾಂಪ್ಕೊ ನಿರ್ದೇಶಕರು, ಅನೇಕ ಸಹಕಾರಿಗಳು, ಜನಪ್ರತಿನಿಧಿಗಳು ಕ್ಯಾಂಪ್ಕೊ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English