ಮಂಗಳೂರು : ನಗರದ ಪದವು ಗ್ರಾಮದ ಕುಲಶಖರ ಚೌಕಿ ಎಂಬಲ್ಲಿ ರಸ್ತೆಬದಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂರು ಮಂದಿ ಯುವಕರನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ .
ಜಿತಿನ್ (25) ತಂದೆ: ರಾಮಯ್ಯ ವಾಸ: ಕಕ್ಕೆ ಬೆಟ್ಟು ಮನೆ, ಕುಲಶೇಖರ, ಪದವು ಗ್ರಾಮ, ಮಂಗಳೂರು, ಮೋಹಿತ್ ಕುಮಾರ್ (27) ತಂದೆ: ಉಮೇಶ್ ಪೂಜಾರಿ ವಾಸ: ಪ್ರಕೃತಿ ಲೇಔಟ್, ಅಡ್ಯಾರ್ ಪದವು, ನೀರು ಮಾರ್ಗ, ಮಂಗಳೂರು ಮತ್ತು ಗುರುರಾಜ್ (25) ತಂದೆ: ಸುರೇಂದ್ರ ವಾಸ: ಶಿವನಗರ, ಮೂಡು ಶೆಡ್ಡೆ, ವಾಮಂಜೂರು ಮಂಗಳೂರು ಎಂಬವರುಗಳನ್ನು NDPS ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ. ಆರ್. ಸುರೇಶ್, ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ ಹಾಗೂ ಶ್ರೀಮತಿ ಉಮಾ ಪ್ರಶಾಂತ್ ಮತ್ತು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರಾಮರಾವ್ ರವರ ನಿರ್ದೇಶನದಂತೆ ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅಶೋಕ್ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ.
Click this button or press Ctrl+G to toggle between Kannada and English