ಶಾಲೆಗೆ ಹೋದ ಮಗಳನ್ನು ಹುಡುಕಿ ಕೊಡಲು ತಂದೆಯಿಂದ ಪೊಲೀಸ್ ಠಾಣೆಯಲ್ಲಿ ದೂರು

12:28 PM, Tuesday, February 19th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Nishmithaಮಂಗಳೂರು  : ಕಂಕನಾಡಿ. ನಗರ ಪೊಲೀಸ್ ಠಾಣೆ ಯಲ್ಲಿ  ಶ್ರೀಮತಿ ಗಿರಿಜಾ (38)ಗಂಡ ಅಶೋಕ್ ಪೂಜಾರಿ. ವಾಸ- ಎಕ್ಕೂರು. ಮಂಗಳೂರು. ಇವರ ದೂರಿನಂತೆ. ಗೋರಿಗುಡ್ಡ ದ ಕಿಟೆಲ್ ಮೆಮೋರಿಯಲ್ ಶಾಲೆಯಲ್ಲಿ 9 ನೆ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳು ಕು.ನಿಶ್ಮಿತಾ ಪ್ರಾಯ-14 ವರ್ಷ ದಿನಾಂಕ 16-02-2019 ರಂದು  ಶನಿವಾರ ಶಾಲೆಗೆಂದು ತೆರಳಿದವಳು ಈ ವರೆಗೂ ಮನೆಗೆ  ಬಂದಿರುವುದಿಲ್ಲ ಈ ಬಗ್ಗೆ ಪ್ರಕರಣ ದಾಖಲಾಲಿಸಿದ್ದಾರೆ .

ನಿಶ್ಮಿತಾ ಎತ್ತರ- 4 ಅಡಿ 7 ಇಂಚು, ಎಣ್ಣೆ ಗೆಂಪು  ಮೈ ಬಣ್ಣ,ಸಾಧಾರಣ ಮೈಕಟ್ಟು, ಉದ್ದ ಮುಖ, ಹಣಿಯ ಎಡ ಭಾಗದಲ್ಲಿ ಹಳೆಯ ಗಾಯದ ಗುರುತು ಇದೆ.  ಬಾಷೆ- ಕನ್ನಡ ಮತ್ತು ತುಳು ಮಾತನಾಡುವುದಾಗಿದ್ದು ಅಲ್ಪ ಸ್ವಲ್ಪ ಹಿಂದಿ ಬಲ್ಲವಳಾಗಿದ್ದಾಳೆ…  ಉಡುಪು ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಟಾಪ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧ ರಿಸಿದ್ದು ಕಿವಿಯಲ್ಲಿ  ಗುಂಡುಗಳಿರುವ ಬಂಗಾರದ ಓಲೆ ಇದೆ. ಕೈಯಲ್ಲಿ ವಾಚ್ ಧರಿಸಿದ್ದಾಳೆ…. ಈ ಬಗ್ಗೆ ಮಾಹಿತಿ ಲಭ್ಯ ವಿದ್ದಲ್ಲಿ ಕಂಕನಾಡಿ ನಗರ ಠಾಣಿ-08242220529,  9480805354 ಅಥವಾ ಪೊಲೀಸ್ ಕಂಟ್ರೋಲ್ ರೂಂ 08242220800/100 ಸಂಪರ್ಕಿಸ ಬೇಕಾಗಿ ಕೋರಿದೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English