ಮಂಗಳೂರು : ಕಾರ್ಯಕರ್ತರು ಸೇವೆಯಜತೆಗೆ ಸಾಮಾಜಿಕ ಕಾಳಜಿಯನ್ನು ಹೊಂದಿರ ಬೇಕಾದುದು ಅತ್ಯವಶ್ಯ ಎಂದು ನೆಕ್ಲಾಜೆ ಕಾರ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಕೆ. ರತ್ನಾಕರಆಚಾರ್ಯ ನುಡಿದರು.
ನಗರದ ರಥಬೀದಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ 54ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಪಾಲ್ಗೊಂಡಿದ್ದರು. ಪ್ರತೀ ದೇವಸ್ಥಾನಗಳಲ್ಲೂ ಸೇವಾ ಸಮಿತಿಗಳು ಇದ್ದೇಇರುತ್ತವೆ. ಆಡಳಿತ ವರ್ಗ ಮತ್ತು ಸೇವಾ ಸಮಿತಿಗಳು ಪರಸ್ಪರಅನ್ಯೋನ್ಯತೆಯಿಂದ ಕೆಲಸ ಮಾಡಿದಾಗ ಮಾತ್ರಕ್ಷೇತ್ರದಎಲ್ಲಾ ಕೆಲಸಗಳು ಸುಲಲಿತವಾಗಿರಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಸಮಿತಿಯಅಧ್ಯಕ್ಷ ಕೆ.ವಿ. ಜಯರಾಜ್‌ಅಧ್ಯಕ್ಷತೆ ವಹಿಸಿದ್ದು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಳದ ೩ನೇ ಮೊಕ್ತೇಸರ್ ಎ. ಲೋಕೇಶ್‌ಆಚಾರ್, ಹಾಗೂ ಇ.ಸಿ.ಎಚ್.ಎಸ್. ಮಂಗಳೂರು ಇಲ್ಲಿನ ಜಯಶ್ರೀ ಪಿ. ಉಳ್ಳಾಲ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಸಮಿತಿಯ ಹಿರಿಯ ಕಾರ್ಯಕರ್ತರಾದ ಕರೋಪಾಡಿ ಜಗದೀಶ ಆಚಾರ್ಯ ಮತ್ತು ಯು. ಗಣೇಶ್ ಅವರನ್ನು ದಂಪತಿ ಸಹಿತವಾಗಿ ಸನ್ಮಾನಿಸಲಾಯ್ತು. ಕಾರ್ಯದರ್ಶಿ ಜೆ. ವಿವೇಕ್ ವಾರ್ಷಿಕ ವರದಿ ವಾಚಿಸಿದರು. ಬಿ. ಉದಯಆಚಾರ್ಯ ಸ್ವಾಗತಿಸಿದರು, ಸುರೇಶ್‌ಎಚ್ ಸಂದೇಶ ವಾಚಿಸಿದರು. ರವೀಂದಎಸ್ ಹಾಗೂ ಸುದೇಶ್ ಬಬ್ಬುಕಟ್ಟೆ ಸನ್ಮಾನ ಪತ್ರ ವಾಚಿಸಿದರು.
ವಿಶ್ವಕರ್ಮಕ್ರೀಡಾ ಕೂಟ-2019 ರ ವಿಜೇತರಿಗೆ ಬಹುಮಾನ ವಿತರಣಾಕಾರ್ಯಕ್ರಮವನ್ನುಕ್ರೀಡಾ ಕಾರ್ಯದರ್ಶಿ ಸದಾಶಿವ ಪಿ. ಅಂಡಿಂಜೆ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ ನೆತ್ತರ ನಿರ್ವಹಿಸಿದರು. ಪಿ.ಕೆ. ಹರೀಶ್ ವಂದಿಸಿದರು ಹಾಗೂಪಿ.ರವೀಂದ್ರ ಮಂಗಳಾದೇವಿ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English