ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು: ಇಪ್ಪತ್ತೈದನೆ ಪದವಿ ಪ್ರದಾನ ಸಮಾರಂಭ

2:32 PM, Wednesday, June 12th, 2019
Share
1 Star2 Stars3 Stars4 Stars5 Stars
(No Ratings Yet)
Loading...

Prakrutiಉಜಿರೆ: ರೋಗಿಗಳಿಗೆ ಸಾಂತ್ವನದ ಮಾತುಗಳೊಂದಿಗೆ ಧೈರ್ಯ ಮತ್ತುಆತ್ಮವಿಶ್ವಾಸತುಂಬಿ ಅವರ ಭಯ, ಆತಂಕ ನಿವಾರಿಸಿ ರೋಗವನ್ನು ಶಮನ ಮಾಡಿಆರೋಗ್ಯರಕ್ಷಣೆ ಮಾಡುವುದು ವೈದ್ಯರಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವೈದ್ಯ ವೃತ್ತಿ ಹಣ ಸಂಪಾದನೆಗಾಗಿಅಲ್ಲ. ಮಾನವೀಯತೆಯಿಂದ ಸೇವೆ ಮಾಡಲಿಕ್ಕಾಗಿ.ರೋಗಿಗಳಆರೋಗ್ಯ ಭಾಗ್ಯರಕ್ಷಣೆಗಾಗಿ ವಿವೇಚನೆಯಿಂದ ವೈದ್ಯರುಅಲೊಪತಿ ಹಾಗೂ ಪಾರಂಪರಿಕಚಿಕಿತ್ಸಾ ವಿಧಾನವನ್ನು ಬಳಸಬೇಕು ಎಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನಿರ್ದೇಶಕಡಾ. ಬಿ.ಎನ್. ಗಂಗಾಧರ್ ಹೇಳಿದರು.

ಅವರುಉಜಿರೆಯಲ್ಲಿಎಸ್.ಡಿ.ಎಂ.ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಕಾಲೇಜಿನಲ್ಲಿ ಮಂಗಳವಾರ ಇಪ್ಪತ್ತೈದನೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವೈದ್ಯ ವೃತ್ತಿ ಪವಿತ್ರ ವೃತ್ತಿಯಾಗಿದೆ.ರೋಗಿಗಳ ರೋಗವನ್ನು ಶಮನಗೊಳಿಸಿ ಆರೋಗ್ಯರಕ್ಷಣೆ ಮಾಡುವುದು ವೈದ್ಯರಕರ್ತವ್ಯವಾಗಿದೆ.ರೋಗದ ಲಕ್ಷಣರೋಗಿಯದೈಹಿಕ ಹಾಗೂ ಮಾನಸಿಕ ಸ್ಥಿತಿ, ಜೀವನ ಶೈಲಿಯನ್ನು ಹೊಂದಿಕೊಂಡು ವಿವೇಚನೆಯಿಂದ ಸೂಕ್ತ ಚಿಕಿತ್ಸಾ ವಿಧಾನ ಬಳಸಬೇಕು. ಕೇವಲ ಅಲೋಪತಿಯಿಂದಅಥವಾ ಪಾರಂಪರಿಕ ಪದ್ಧತಿಗಳಾದ ಆಯುರ್ವೇದ, ಯುನಾನಿ, ಯೋಗ, ಪ್ರಕೃತಿಚಿಕಿತ್ಸೆ, ಹೋಮಿಯೋಪತಿಚಿಕಿತ್ಸಾ ವಿಧಾನದಿಂದಎಲ್ಲಾ ರೋಗಗಳನ್ನು ಗುಣ ಪಡಿಸಲು ಸಾಧ್ಯವಿಲ್ಲ. ಆದುದರಿಂದ ವೈದ್ಯರು ವಿವೇಚನೆಯಿಂದರೋಗಿ ಮತ್ತುರೋಗದ ಲಕ್ಷಣ ಹೊಂದಿಕೊಂಡುಎಲ್ಲಾ ಪದ್ಧತಿಗಳ ಉತ್ತಮ ಅಂಶಗಳನ್ನು ಬಳಸಿ ಸಮಗ್ರಚಿಕಿತ್ಸಾ ವಿಧಾನದಿಂದ ರೋಗಿಗಳ ಸೇವೆ ಮಾಡಬೇಕುಎಂದುಅವರು ಸಲಹೆ ನೀಡಿದರು.
ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ,ದೆಹಲಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಹಾಗೂ ವಿದೇಶಗಳಲ್ಲಿರುವ ಆಸ್ಪತ್ರೆಗಳಲ್ಲಿ ಈಗ ಸಮಗ್ರಚಿಕಿತ್ಸಾ ಪದ್ಧತಿಯನ್ನು ಬಳಸಲಾಗುತ್ತದೆ ಎಂದುಅವರು ಹೇಳಿದರು.ಎಲ್ಲಾ ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿಯೂ ಈ ವಿಧಾನ ಬಳಸಬೇಕು ಎಂದುಅವರು ಸಲಹೆ ನೀಡಿದರು.

Prakrutiಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರದಕ್ಷ ನೇತೃತ್ವದಲ್ಲಿಉಜಿರೆಯ ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಕಾಲೇಜಿನ ಸೇವೆ, ಪ್ರಗತಿ ಮತ್ತು ಸಾಧನೆಯನ್ನುಅವರು ಶ್ಲಾಘಿಸಿ ಅಭಿನಂದಿಸಿದರು.
ಇಲ್ಲಿಕಲಿತವರು ಆಡಳಿತ ಮಂಡಳಿಗೆ, ಸಂಸ್ಥೆಗೆ, ಪ್ರಾಧ್ಯಾಪಕರಿಗೆ, ತಮ್ಮ ಪೋಷಕರಿಗೆ ಸದಾಕೃತಜ್ಞರಾಗಿರಬೇಕುಎಂದುಅವರುಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಧಾರವಾಡದಎಸ್.ಡಿ.ಎಂ.ವಿಶ್ವವಿದ್ಯಾಲಯದ ಕುಲಪತಿಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿವೈದ್ಯರುರೋಗಿಗಳಲ್ಲಿ ಆತ್ಮವಿಶ್ವಾಸಮತ್ತು ಭರವಸೆ ಮೂಡಿಸಿ ಅವರನ್ನುಗುಣಮುಖರನ್ನಾಗಿ ಮಾಡಬೇಕು.ರೋಗ ಬಂದ ಮೇಲೆ ಶಮನಗೊಳಿಸುವುದಕ್ಕಿಂತ ರೋಗ ಬರದಂತೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ವೈದ್ಯರು ಸರಿಯಾದಆಹಾರಕ್ರಮ, ಜೀವನ ಶೈಲಿ, ಆರೋಗ್ಯಪೂರ್ಣ ಶಿಸ್ತಿನ ಜೀವನದ ಬಗ್ಯೆ ಮಾರ್ಗದರ್ಶನ, ಸಲಹೆ ನೀಡಬೇಕು.ರೋಗಿಗಳ ಸಮಸ್ಯೆ, ಆತಂಕವನ್ನು ತಾಳ್ಮೆಯಿಂದ, ಮಾನವೀಯತೆಯಿಂದ ಆಲಿಸಬೇಕು.ತಮ್ಮ ಪವಿತ್ರ ವೃತ್ತಿಯಲ್ಲಿ ಪ್ರತಿ ದಿನ ರೋಗಿಗಳಿಂದ ಹೊಸ ವಿಚಾರ, ಸಮಸ್ಯೆಗಳನ್ನು ತಿಳಿದುಕೊಂಡು ತಮ್ಮಜ್ಞಾನಕ್ಷಿತಿಜ ಹಾಗೂ ವೃತ್ತಿದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧಾರವಾಡದಲ್ಲಿಡೆಂಟಲ್‌ಕಾಲೇಜು ಮತ್ತುಆಸ್ಪತ್ರೆ, ವೈದ್ಯಕೀಯಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾಕೇಂದ್ರವನ್ನು ಸೇರಿಸಿಕೊಂಡು ಎಸ್.ಡಿ.ಎಂ.ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸಲಾಗಿದೆ ಮುಂದೆಎಲ್ಲಾ ವಿದ್ಯಾಸಂಸ್ಥೆಗಳನ್ನು ವಿಶ್ವವಿದ್ಯಾಲಯಕ್ಕೆ ಸಂಯೋಜನೆ ಮಾಡಲಾಗುವುದು.

ಹೇಮಾವತಿ ವಿ. ಹೆಗ್ಗಡೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್ ಮತ್ತುಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.

ಎಸ್.ಡಿ.ಎಂ.ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು.ಯೋಗ ವಿಭಾಗದಡೀನ್‌ಡಾ.ಶಿವಪ್ರಸಾದ ಶೆಟ್ಟಿಧನ್ಯವಾದವಿತ್ತರು.
ಅಂಕಿತ್ ಪಾಂಡೆ ಮತ್ತು ಪ್ರಿಯದಾ ಪಾಲ್‌ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English