ಕಾಸರಗೋಡು : ಉಪ್ಪಳ ಜೋಡುಕಲ್ಲು ಓಪತ್ತಿಮೂಲೆಯ ರಮೇಶ್ ಶೆಟ್ಟಿ(44) ನ್ಯೂಮೋನಿಯಾ ದಿಂದ ಸೋಮವಾರ ಸಾವನ್ನಪ್ಪಿದ್ದಾರೆ .
ಪೈಂಟಿಂಗ್ ಕಾರ್ಮಿಕನಾಗಿದ್ದ ರಮೇಶ್ ಶೆಟ್ಟಿ ಒಂದು ವರ್ಷದ ಹಿಂದೆ ಮುಂಬೈಯ ಹೋಟೆಲ್ ನಲ್ಲಿ ಕಾರ್ಮಿಕನಾಗಿ ಕೆಲಸಮಾಡಿದ್ದರು. ಬಳಿಕ ಊರಿಗೆ ಬಂದು ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕಲ್ಲಿಕೋಟೆಯಲ್ಲಿ ಕಟ್ಟಡವೊಂದರ ಪೈಂಟಿಂಗ್ ಕೆಲಸಕ್ಕೆ ತೆರಳಿದ್ದರು. ಜ್ವರದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ರಮೇಶ್ ರವರು ಶುಕ್ರವಾರ ಉಪ್ಪಳದ ಖಾಸಗಿ ಆಸ್ಪತ್ರೆಯಿಂದ ಔಷದಿ ತೆಗೆದುಕೊಂಡರೂ ವಾಸಿಯಾಗದ ಕಾರಣ ಶನಿವಾರ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟಿದ್ದಾರೆ. ಇವರಿಗೆ ನ್ಯೂಮೋ ನಿಯಾ ತಗಲಿತ್ತೆಂದು ಶಂಕಿಸಲಾಗಿದೆ.
Click this button or press Ctrl+G to toggle between Kannada and English