ಘನತೆಯ ಬದುಕಿಗೆ ಕಾನೂನು ಮುಖ್ಯ- ಜಿಲ್ಲಾ ನ್ಯಾಯಾಧೀಶ ರುಡೋಲ್ಫ್ ಪಿರೇರಾ

3:20 PM, Wednesday, August 7th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

kssap ಪುತ್ತೂರು  : ಯುವಜನತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳಲು ಕಾರಣಗಳೇನು ಎಂಬುದರ ಬಗ್ಗೆ ನಾವು ಅಗತ್ಯವಾಗಿ ಅರಿತುಕೊಳ್ಳಬೇಕಾಗಿದೆ. ಇದು ಅನಿವಾರ್ಯಕೂಡ. ಶಾಲಾ ಕಾಲೇಜುಗಳ ಆವರಣದಲ್ಲಿ ವಿವಿಧ ಆಧುನಿಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಗಮನಿಸಿದರೆ ಇದಕ್ಕೆ ಹೆತ್ತವರು ಕಾರಣವೇ, ಪೋಷಕರು ಕಾರಣವೇ, ಸಮಾಜ ಕಾರಣವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ದ.ಕ. ಜಿಲ್ಲಾ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡೋಲ್ಫ್ ಪಿರೇರಾ ಅವರು ಹೇಳಿದರು. ಅವರು  ಆಗಸ್ಟ್ 6, 2019 ರಂದು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷಾನ, ಮಂಗಳೂರು (KSSAP), ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ (ರಿ) ಪುತ್ತೂರು, ಇವರ ಸಹಯೋಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ ಹದಿಹರೆಯ ಮತ್ತು ಕಾನೂನು- ಕಾರ‍್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.

kssap ಯುವಜನತೆಯ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾನೂನಿನ ಬಗ್ಗೆ ನಮ್ಮ ನಡುವೆ ಇರುವ ನಿರ್ಲಕ್ಷ್ಯ ಅಸಡ್ಡೆಗಳೇ ಕಾರಣವಾಗಿದೆ. ನಮಗೆ ಬದುಕಲು ನೀರು ಎಷ್ಟು ಅಗತ್ಯವೋ ಘನತೆಯ ಬದುಕಿಗೆ ಕಾನೂನು ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮಂಜುನಾಥ ಮಾತನಾಡಿ ಇಂದಿನ ಯುವ ಸಮಾಜದಲ್ಲಿ ನಡೆಯುವ ಹಿಂಸೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ಗಮನಿಸುವಾಗ ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬ ಆತಂಕ ಮೂಡುತ್ತಿದೆ. ಕೆಲವು ಕಿಡಿಗೇಡಿಗಳು ಮಾಡುವ ಕೃತ್ಯದಿಂದಾಗಿ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಮಾನವ ಸಮಾಜ ನಾಚಿಕೆ ಪಟ್ಟುಕೊಳ್ಳುವಂತಾಗಿದೆ. ಇದು ಅತ್ಯಂತ ಖೇದಕರ ವಿಚಾರ ಎಂದು ಹೇಳಿದರು.

kssap ಪ್ರಾಸ್ತಾವಿಕವಾಗಿ NSCDFಈ ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ ಆಧುನಿಕ ತಂತ್ರಜ್ಞಾನದ ಭಾಗವಾದ facebook/whatsapp ಮುಂತಾದ ಸಾಮಾಜಿಕ ಜಾಲತಾಣಗಳನ್ನ ಬಳಸದಂತೆ ಪ್ರಮಾಣ ಮಾಡಿಸುವುದು ಅತ್ಯಂತ ಬಾಲಿಶತನದ್ದು, ಏಕೆಂದರೆ ಸಾಮಾಜಿಕ ಜಾಲತಾಣಗಳನ್ನು ಬಳಸದಿದ್ದರೆ ನಾವು ಹತ್ತು ವರ್ಷ ಹಿಂದೆ ಸರಿದಂತೆ. ಹಾಗಾಗಿ ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಸಿ ಅತ್ಯಂತ ವೇಗವಾಗಿ ಕಾರ್ಯ ಸಿದ್ದಿಗೊಳಿಸಬಹುದು ಎಂದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಪಿ. ಶ್ರೀನಿವಾಸ್ ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎ. ಉದಯಶಂಕರ ಶೆಟ್ಟಿ, ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಶ್ರೀ ಮನೋಹರ ಕೆ.ವಿ ಯವರಿಂದ ಉಪನ್ಯಾಸ ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿದರು, ಮಲ್ಲಿಕಾ ಶೆಟ್ಟಿ ನಿರೂಪಿಸಿದರು.

kssap

kssap

kssap

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English