ಕೆ. ಅಣ್ಣಾಮಲೈ: ಶಿಕ್ಷಣವು ಬದುಕಿಗೆ ಪ್ರಯೋಜನವಾಗಬೇಕು

11:09 AM, Monday, August 12th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

annamalaiಪುತ್ತೂರು : ಇಂದು ಶಿಕ್ಷಣದ ಮೂಲ ಉದ್ದೇಶವನ್ನು ಬಿಟ್ಟುನಾವು ಬೇರೆ ಕಡೆಗೆ ಸಾಗುತ್ತಿದ್ದೇವೆ. ನಾವು ಪಡೆದ ಶಿಕ್ಷಣ ಅರ್ಥಪೂರ್ಣ ವಾಗಬೇಕು ಮತ್ತು ಬದುಕಿಗೆ ಪ್ರಯೋಜನವಾಗಬೇಕು. ಶಿಕ್ಷಣದ ಮೂಲಕ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡಬೇಕು ಎಂದು ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಅಭಿಪ್ರಾಯಿಸಿದರು.

ಶ್ರೀ ಮಹಾಲಿಂಗೇಶ್ವರ ದೇವಾ ಲಯದ ಎದುರಿನ ಗದ್ದೆಯಲ್ಲಿ ರವಿವಾರ ನಡೆದ ಯುವವಾಹಿನಿ ಮಂಗಳೂರು ಕೇಂದ್ರ ಸಮಿತಿಯ 32ನೇ ವಾರ್ಷಿಕ ಸಮಾವೇಶದಲ್ಲಿ ಯುವ ಸಿಂಚನ ವಿಶೇಷಾಂಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬ್ರಹ್ಮಶ್ರೀ ನಾರಾಯಣ ಗುರು, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾ ನಂದರು ಯುವ ಸಮುದಾಯದ ಶಕ್ತಿಯನ್ನು ಅರಿತು ಅವರ ಮೂಲಕ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಿ ದ್ದರು. ಆದರೆ ಇಂದು ಯುವಕರ ಕೊಡುಗೆ ಸಾಲುತ್ತಿಲ್ಲ. ಎಲ್ಲರೂ ತಮ್ಮ ಶಕ್ತಿಯನ್ನು ಅರಿತುಕೊಂಡು ಸಾಧಕ ರಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಸಹಾಯಕ ಕಮಿಷನರ್‌ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ನವಭಾರತ ನಿರ್ಮಾಣಕ್ಕೆ ದೇಶದ ಸಂಪತ್ತಾದ ಯುವಕರು ಮನ ಮಾಡ ಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಯುವ ಸಮು ದಾಯ ಸುಶಿಕ್ಷಿತರಾಗಿ, ಸಕಾರಾತ್ಮಕ ಯೋಚನೆಗಳೊಂದಿಗೆ ಬಲಯುತ ರಾಗಬೇಕು ಎಂದು ಹೇಳಿದರು.

ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅಂತಾರಾಷ್ಟ್ರೀಯ ಆರ್ಥಿಕ – ಶಿಕ್ಷಣ ತಜ್ಞ ಹಾಗೂ ಉದ್ಯಮಿ ಡಾ| ಸಿ.ಕೆ. ಅಂಚನ್‌, ಅತಿಥಿಗಳಾಗಿ ಭಾಗವಹಿಸಿದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ ಕೋಟ್ಯಾನ್‌, ರಂಗಭೂಮಿ ಮತ್ತು ಚಿತ್ರನಟಿ ನವ್ಯಾ ಪೂಜಾರಿ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, 31 ವರ್ಷಗಳಿಂದ ಹಿರಿಯರು ಯುವಕ ರನ್ನು ಸಂಘಟಿಸುವ ಕೆಲಸ ಮಾಡುತ್ತಾ ಬಂದಿದ್ದು, ಅದನ್ನು ಮುಂದುವರಿ ಸಿದ್ದೇನೆ ಎಂದರು.

ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಯುವಾಹಿನಿ 35 ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿದ್ದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೆ. ಅಂಚನ್‌ ವರದಿ ವಾಚಿಸಿದರು. ಸಮಾವೇಶದ ನಿರ್ದೇಶಕ ಶಶಿಧರ ಕಿನ್ನಿಮಜಲು ಸ್ವಾಗತಿಸಿ, ದಿನೇಶ್‌ ಸುವರ್ಣ ರಾಯಿ ಹಾಗೂ ನರೇಶ್‌ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English