ಬಳ್ಳಾರಿ : ಹೊಲದಲ್ಲಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ, ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಸಣ್ಣ ಮಲ್ಲಯ್ಯ ಎಂಬ ರೈತನ ಮೇಲೆ ಕರಡಿಯು ದಾಳಿ ನಡೆಸಿದ್ದು, ತಲೆ ಹಾಗೂ ಕೈ ಕಾಲುಗಳ ಮೇಲೆ ಗಂಭೀರ ಗಾಯಗಳಾಗಿವೆ. ದನಗಳನ್ನು ಹುಡುಕಲು ಹೋದಾಗ ಈ ಘಟನೆ ಸಂಭವಿಸಿದೆ.
ಇನ್ನು ಸಣ್ಣ ಮಲ್ಲಯ್ಯನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಕೆ ಕಾಣುತ್ತಿದ್ದಾನೆ.
Click this button or press Ctrl+G to toggle between Kannada and English