ಮೈಸೂರು : ನಾಲೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟ ದಾರುಣ ಘಟನೆ ಇಂದು ನಂಜನಗೂಡು ಸಮೀಪದ ತಗಡೂರು ಗ್ರಾಮದಲ್ಲಿ ನಡೆದಿದೆ.
ತಗಡೂರು ಗ್ರಾಮದ ರಾಮಚಂದ್ರ ನಾಳೆಗೆ ಈಜಲೆಂದು ಇಂದು ಮದ್ಯಾಹ್ನ ನಾಲ್ವರು ಬಾಲಕರು ತೆರಳಿದ್ದರು. ಆದರೆ ಇಬ್ಬರು ನೀರಿಣ ಸೆಳೆತಕ್ಕೆ ಕೊಚ್ಚಿ ಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ಬಾಲಕರನ್ನು ಚಿನ್ನು (16) ಮತ್ತು ಪ್ರೀತಮ್ (15)ಎಂದು ಗರ‍್ತಿಸಲಾಗಿದ್ದು ಪ್ರೀತಮ್ ರಜೆ ಕಳೆಯಲು ಸಂಭಂದಿಕರ ಮನೆಗೆ ಬಂದಿದ್ದ ಎನ್ನಲಾಗಿದೆ . ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಪೋಲಿಸರು ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ನಂಜನಗೂಡು ಠಾಣೆ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.
Click this button or press Ctrl+G to toggle between Kannada and English