ಮಡಿಕೇರಿ ಗೌಡ ಸಮಾಜದಲ್ಲಿ ’ಹುತ್ತರಿ’ ಸಂಭ್ರಮ

9:14 PM, Thursday, December 12th, 2019
Share
1 Star2 Stars3 Stars4 Stars5 Stars
(No Ratings Yet)
Loading...

Madikeri-Gowda-Samajaಮಡಿಕೇರಿ :ನಗರದ ಗೌಡ ನಾಗರಿಕ ಹುತ್ತರಿ ಸಮಿತಿ ವತಿಯಿಂದ 11ನೇ ವರ್ಷದ ಹುತ್ತರಿ ಹಬ್ಬವನ್ನು ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಸಮಿತಿಯ ಅಧ್ಯಕ್ಷ ಪರಿವಾರ ಅಪ್ಪಾಜಿ ಅವರ ಮುಂದಾಳತ್ವದಲ್ಲಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಐದು ವಿದಧ ಎಲೆಗಳಿಂದ ನೆರೆ ಕಟ್ಟಿ, ನಿಗದಿತ ಮುಹೂರ್ತದಲ್ಲಿ ಪ್ರಮುಖರಾದ ಪೊನ್ನಚ್ಚನ ಮಧು ಸೋಮಣ್ಣ ಕದಿರು ಕೊಯ್ದು ಧಾನ್ಯಲಕ್ಷ್ಮಿಯನ್ನು ಬರಮಾಡಿಕೊಂಡರು.

ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಪಾಣತ್ತಲೆ ಬಿದ್ದಪ್ಪ, ಕಾರ್ಯದರ್ಶಿ ನಡುಮನೆ ಕಾರ್ಯಪ್ಪ, ಖಜಾಂಚಿ ಪೊನ್ನಚ್ಚನ ಸೋಮಣ್ಣ, ಸಂಚಾಲಕರಾದ ಚೆರಿಯಮನೆ ತಿಮ್ಮಯ್ಯ, ಪೂಜಾರಿರ ಬೆಳ್ಯಪ್ಪ, ಬೈಚನ ಸೋಮಣ್ಣ, ಕೋಡಿ ಮುತ್ತಪ್ಪ, ಸೂದನ ಹರೀಶ, ಪೊನ್ನೇಟಿ ಚಿಣ್ಣಪ್ಪ, ಬಂಗಾರ ಕೋಡಿ ಉದಯಕುಮಾರ್, ಪುದಿಯನೆರವನ ರಿಶೀತ್ ಮಾದಯ್ಯ, ಕುಟ್ಟನ ಪ್ರಶಾಂತ್ ತಿಮ್ಮಯ್ಯ, ಪೂಜಾರೀರ ಸುಮನ್ ರಮೇಶ್, ಕುಂಡಿಯನ ಚರಣ್, ಮಾನಡ್ಕ ವಿಜು ಬೋಪಯ್ಯ ಹಾಗೂ ಮತ್ತಿತರರು ಇದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English