ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 19, ಗುರುವಾರ 144 ಸೆಕ್ಷನ್ ಜಾರಿ ಇದ್ದರೂ, ಗುಂಪೊಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಎಚ್ಚರಿಕೆ ನೀಡಿದರು. ಅಷ್ಟಕ್ಕೂ ಚದುರದೆ ಇದ್ದಾಗ ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪನ್ನು ಓಡಿಸಿದರು.
ಬಳಿಕ ಆ ಗುಂಪು ನೆಲ್ಲಿಕಾಯಿ ರಸ್ತೆ ಬಳಿ ಇರುವ ಮಸೀದಿ ಬಳಿಯಲ್ಲಿ ನಿಂತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾರಂಭಿಸಿತು. ಇನ್ನೊಂದು ಗುಂಪು ರಾವ್ ಅಂಡ್ ರಾವ್ ಸರ್ಕಲ್ ಬಳಿ ನಿಂತು ಕಲ್ಲು ತೂರಾಟ ನಡೆಸಲಾರಂಭಿಸಿತು, ಈ ಸಂದರ್ಭ ಪೊಲೀಸರು ವಿಧಿ ಇಲ್ಲದೆ ಲಾಠಿ ಪ್ರಹಾರ ಮಾಡಿದರು.
ಇದು ಯಾವುದೇ ಸಂಘಟನೆಯಾಗಿರಲಿಲ್ಲ, ಗುರುತು ಸಿಗದಂತೆ ಮುಖಕ್ಕೆ ಬಟ್ಟೆ ಕಟ್ಟಿ, ಹೆಲ್ಮೆಟ್ ಧರಿಸಿ ನಗರದಲ್ಲಿ ಶಾಂತಿ ಕದಡುವ ಉದ್ದೇಶದಿಂದಲೇ ಬಂದಿತ್ತು ಎನ್ನಲಾಗಿದೆ. ಜೊತೆಗೆ ಕಲ್ಲು, ಬಾಟಲುಗಳಂತಹ ಮಾರಕಾಯುಧಗಳನ್ನು ಬಳಸಿತ್ತು. ಈ ಗುಂಪಿನ ಜೊತೆಗೆ ಸಂಧಾನಕ್ಕೆ ಹೋರಾಟ ಮುಸ್ಲಿಂ ನಾಯಕ ಮಾಜಿ ಮೇಯರ್ ಕೆ ಅಶ್ರಫ್ ಮೇಲೆಯೂ ಹಲ್ಲೆ ನಡೆಸಿದೆ.
ಬಂದರು ಪ್ರದೇಶ, ಬಜಿಲ ಕರಿಯ, ಮೈದಾನ್ ರಸ್ತೆಯಲ್ಲಿ ಸುಮಾರು ನೂರು ಮಂದಿಯಷ್ಟು ಇದ್ದ ಈ ಗುಂಪು ಪೊಲೀಸರನ್ನೇ ಹಿಮ್ಮೆಟ್ಟಿಸಿತ್ತು. ಬಂದರು ಪ್ರದೇಶದ ರಸ್ತೆ ಬದಿಯಲ್ಲಿದ್ದ ಸಾರ್ವಜನಿಕ ವಸ್ತುಗಳನ್ನು ಹಾಳು ಗೆಡವಿದೆ, ಬಂದರು ಪ್ರದೇಶದಲ್ಲಿದ್ದ ಕೆಲವು ಮುಸ್ಲಿಮರ ಗುಜಿರಿ ಅಂಗಡಿಯಲ್ಲಿ ತಂದು ಈ ಇರಿಸಲಾಗಿದ್ದ ವಸ್ತುಗಳನ್ನು ಬೆಂಕಿ ಹಾಕಿ ಸುಡಲಾಗಿದೆ. ಗುಜರಿ ಅಂಗಡಿಯ ಹಳೆಯ ಟೈರ್ ಮತ್ತು ದ್ವಿಚಕ್ರ ವಾಹನವೊಂದನ್ನು ಈ ದುಷ್ಕರ್ಮಿಗಳು ಸುಟ್ಟು ಹಾಕಿದರು.
ಈ ಸಂದರ್ಭ ಪೊಲೀಸರು ಸೆಲ್ ದಾಳಿ, ಗಾಳಿಯಲ್ಲಿ ಗುಂಡು ಹಾರಿಸಿದರು ಗುಂಪು ಪದೇ ಪದೇ ಪೊಲೀಸರತ್ತ ಕಲ್ಲುಎಸೆಯುತ್ತಲೇ ಇತ್ತು. ಕೆಲವೊಂದು ದುಷ್ಕರ್ಮಿಗಳು ಮಾಧ್ಯಮದ ಫೋಟೋಗ್ರಾಫರ್ಗಳ ಮೇಲೆ ಕಲ್ಲು ಎಸೆಯುತ್ತಿತ್ತು. ಕಟ್ಟಡಗಳ ಮೇಲಿಂದಲೂ ಈ ದುಷ್ಕರ್ಮಿಗಳು ಅಮಾಯಕರ ಮೇಲೆ ಕಲ್ಲು ಎಸೆಯುತ್ತಿದ್ದುದನ್ನು ಗಮನಿಸಲಾಗಿದೆ.
ಈ ಸಂದರ್ಭ ಆಗಮಿಸಿದ ಪೊಲೀಸ್ ಕಮಿಷನರ್ ಉದ್ರಿಕ್ತ ದುಷ್ಕರ್ಮಿಗಳ ಮೇಲೆ ಗಾಳಿಯಲ್ಲಿ ಗುಂಡು ಹಾರಿಸುವಂತೆ, ಚದುರದಿದ್ದರೆ ಮೊಣಕಾಲಿನಿಂದ ಕೆಳಗೆ ಗುಂಡು ಹಾರಿಸಲು ಸೂಚಿಸಿದರು. ಇದರಿಂದ ಗುಂಪು ಚದುರಿತಲ್ಲದೆ ಗುಂಪಿನಲ್ಲಿ ಕೆಲವರಿಗೆ ಗಾಯಗಳಾಗಿದೆ.
ಗಾಳಿಸುದ್ದಿ : ಪೊಲೀಸರು ಹಾರಿಸಿದ ಗುಂಡಿನಿಂದ ಇಬ್ಬರು ಮೃತ ಪಟ್ಟಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದು , ಇನ್ನು ದೃಢಪಟ್ಟಿಲ್ಲ.
ಮಂಗಳೂರಿನ ನಗರದ ಐದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸೆಂಬರ್ 22 ರವರೆಗೆ ಕರ್ಫ್ಯೂ ಘೋಷಿಸಲಾಗಿದೆ.
Click this button or press Ctrl+G to toggle between Kannada and English