ಮಡಿಕೇರಿ : ಮಡೀಕೇರಿ ತಾಲ್ಲೂಕಿನ ಹಾಕತ್ತೂರು ಗ್ರಾ.ಪಂ ವ್ಯಾಪ್ತಿಯ ಕಗ್ಗೋಡ್ಲು ಮತ್ತು ಹಾಕತ್ತೂರು ಗ್ರಾಮದಲ್ಲಿ ಸುಮಾರು ೩.೫೦ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಚಾಲನೆ ನೀಡಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅನುದಾನ 1.35 ಕೋಟಿ ರೂ., ಲೋಕೋಪಯೋಗಿ ಇಲಾಖೆಯ ೨ ಕೋಟಿ, ಹೀಗೆ ಒಟ್ಟು ಸುಮಾರು ೩.೫೦ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭ 2018-19ರಲ್ಲಿ ಪೂರ್ಣಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ಈ ಸಂದರ್ಭ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ತಾ.ಪಂ. ಸದಸ್ಯೆ ತುಂತಜಿರ ಕುಮುದ, ಗ್ರಾ.ಪಂ ಅಧ್ಯಕ್ಷೆ ಮಂದ್ರೀರ ಶಾರದ, ಸದಸ್ಯರಾದ ದೇವಿ ಪ್ರಸಾದ್, ಪಿಯೂಷ್ ಪೆರೇರ, ಹೇಮಾವತಿ, ಬಿಜೆಪಿ ಮಡಿಕೇರಿ ತಾಲೂಕು ಅಧ್ಯಕ್ಷ ಕಾಂಗೀರ ಸತೀಶ್, ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಬೆಳ್ಯಪ್ಪ, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಮಂಡುವಂಡ ಜೋಯಪ್ಪ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಎ.ಇ.ಇ. ಶ್ರೀಕಂಠಯ್ಯ, ಗ್ರಾ.ಪಂ ಪಿಡಿಓ, ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಪೈಕೇರ ಮನೋಹರ, ಗುತ್ತಿಗೆದಾರ ಎಂ.ಕೆ.ಪೂಣಚ್ಚ, ಅಮ್ಮಟಂಡ ಚೇತನ್, ಹಾಗೂ ಸ್ಥಳಿಯ ಗ್ರಾಮಸ್ಥರು ಹಾಜರಿದ್ದರು.
Click this button or press Ctrl+G to toggle between Kannada and English