ಮಂಗಳೂರು : ಜನವರಿ 29 ಮತ್ತು 30 ರ೦ದು ಪಿಲಿಕುಲ ಶಿವರಾಮ ಕಾರ೦ತ ವಿಜ್ಞಾನ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪಿಯರ್ ಅವಾರ್ಡ್ ವಿಜ್ಞಾನ ಮೇಳದಲ್ಲಿ ಹಳ್ಳಿ ಪ್ರತಿಭೆ ಮಾ| ಪ್ರೀತೆಶ್ ತಯಾರಿಸಿದ ವಾಕರ್ ಕಮ್ ಚೇರ್ ಮಾದರಿ ನೆರೆದಿರುವ ಎಲ್ಲರ ಗಮನ ಸೆಳೆಯಿತು. ಮಾತ್ರವಲ್ಲ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಯಿತು. ಇವನು ದ. ಕ. ಜಿ. ಪ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೂಹಾಕುವ ಕಲ್ಲು ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ತನ್ನ ಅಜ್ಜ ವಾಕರ್ ಹಿಡಿದು ಹೆಚ್ಚು ನಡೆಯಲು ಕಷ್ಟ ಪಡುತ್ತಿರುವುದನ್ನು ಕ೦ಡು, ಅವರಿಗೆ ವಾಕರ್ ಹಿಡಿದು ನಡೆಯುವಾಗ ಆಯಾಸವಾದಾಗ ಕುಳಿತು ಕೊಳ್ಳಲು ಚೇರ್ ಮಾಡಿಕೊಡುತ್ತೇನೆ೦ದು ಹೇಳಿದ. ಆದರೆ ಅವನಿಗೆ ಅಜ್ಜ ವಾಕರ್ ಕೊಡಲು ಒಪ್ಪಲಿಲ್ಲ. ಬೈದು ಬಾಯಿ ಮುಚ್ಚಿಸಿದರು. ಅಜ್ಜನ ಮರಣನ೦ತರ ಅದೇ ವಾಕರ್‌ಗೆ ಕುಳಿತು ಕೊಳ್ಳುವ ವ್ಯವಸ್ಥೆ ಮಾಡಿ ತನ್ನ ವಿಜ್ಞಾನ ಶಿಕ್ಷಕಿಗೆ ಇದರ ಬಗ್ಗೆ ವಿವರಿಸಿದ. ಮಗುವಿನ ಪ್ರತಿಭೆಯನ್ನು ಗಮನಿಸಿದ ಶಿಕ್ಷಕಿ ಅವನಿಗೆ ಮಾರ್ಗದರ್ಶನ ನೀಡಿ ಅದೇ ಮಾದರಿಯನ್ನು ಇನ್ ಸ್ಪೇಯರ್ ಅವಾರ್ಡ್‌ಗೆ ತಯಾರುಗೊಳಿಸಿದರು.
ಈಗ ಇದೇ ಮಾದರಿಯನ್ನು ತನ್ನ ವಿಜ್ಞಾನ ಶಿಕ್ಷಕಿ ಶ್ರೀಮತಿ ಸರಿತಾ ಸಿಕ್ವೇರಾ ರವರ ಮಾರ್ಗದರ್ಶನದಲ್ಲಿ ಇನ್ನಷ್ಟು ಅಭಿವೃದ್ದಿ ಪಡಿಸಿ ರಾಜ್ಯಮಟ್ಟದಲ್ಲಿಯೂ ಸ್ಥಾನಗಿಟ್ಟಿಸುವ ಆಸೆಯಲ್ಲಿದ್ದಾನೆ. ಮಾ| ಪ್ರೀತೇಶ್ ಇವನು ಹೂ ಹಾಕುವ ಕಲ್ಲು ಸೈಟ್ ನಿವಾಸಿ ಶ್ರೀ ಹರೀಶ್ ಮತ್ತು ಶ್ರೀಮತಿ ಆಶಾ ರವರ ಪುತ್ರರಾಗಿದ್ದಾನೆ.
Click this button or press Ctrl+G to toggle between Kannada and English