ನಾಳೆ ಮಂಗಳೂರಿನಲ್ಲಿ ಬ್ರಹ್ಮಾಕುಮಾರಿ ಶಿವಾನಿಯವರ ಕಾರ್ಯಕ್ರಮ

12:38 PM, Saturday, February 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

BK-Shivani

ಮಂಗಳೂರು : ವಿಶ್ವವಿಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿಯಾಗಿ ಗುರುತಿಸಲ್ಪಟ್ಟಿರುವ ಬ್ರಹ್ಮಾಕುಮಾರಿ ಶಿವಾನಿಯವರು ನಗರಕ್ಕೆ ಆಗಮಿಸಿದ್ದಾರೆ.

ಆ ಪ್ರಯುಕ್ತ ಪ್ರತಿಷ್ಟಿತ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಶಿವಾನಿಯವರ ಇದು ಎರಡನೆಯ ಕಾರ್ಯಕ್ರಮವಾಗಿದೆ. 2010 ರಲ್ಲಿ ನಗರದ ಪುರಭವನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಂಗಳೂರಿನ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಫೆಬ್ರುವರಿ 9 ರಂದು ಬೆಳಿಗ್ಗೆ10.30ರಿಂದ 12.30ರವರೆಗೆ “ಆರೋಗ್ಯ ಸಂತೋಷ ಮತ್ತು ಸಾಮರಸ್ಯ” ಎಂಬ ವಿಷಯದ ಮೇಲೆ ಹಾಗೂ ಸಾಯಂಕಾಲ 5.30ರಿಂದ 7.30 ರವರೆಗೆ ವಿರಾಮ… ಶಾಂತಿಗಾಗಿ” ಎನ್ನುವ ವಿಷಯದ ಕುರಿತು ಆಧ್ಯಾತ್ಮಿಕ ಪ್ರವಚನ ನೀಡಿದ್ದಾರೆ. ಈ ಎರಡೂ ಕಾರ್ಯಕ್ರಮಗಳಿಗೂ ಪಾಸ್‌ನ ವ್ಯವಸ್ಥೆ ಇರುವುದರಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಉರ್ವಾಸ್ಟೋರ್‌ನಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಪ್ರವೇಶದ ಪಾಸನ್ನು ಪಡೆದುಕೊಳ್ಳಬಹುದು.

BK-Shivani

ಬ್ರಹ್ಮಕುಮಾರಿ ಬಿ ಕೆ ಶಿವಾನಿಯವರ ಕಿರು ಪರಿಚಯ :
ಬಿ.ಕೆ ಶಿವಾನಿಯವರು 31-03-1972 ರಂದು ಪುಣೆ ನಗರದಲ್ಲಿ ಜನಿಸಿದ್ದು ತಮ್ಮ 22 ನೇ ವಯಸ್ಸಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದು ಚಿನ್ನದ ಪದಕ ವಿಜೇತೆಯಾಗಿ ಎರಡು ವರ್ಷಗಳ ಕಾಲ ಪುಣೆಯಲ್ಲಿರುವ ಭಾರತೀಯ ವಿದ್ಯಾಪೀಠದಲ್ಲಿ ಉಪನ್ಯಾಸಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
ನಂತರ 2003ರಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ ಕಲಿಸುವ ರಾಜಯೋಗ ಶಿಕ್ಷಣದಿಂದ ಆಕರ್ಷಿತರಾಗಿ ಅದರ ಆಳವಾದ ಅಧ್ಯಯನವನ್ನು ಮಾಡಿದರು.

2007ರಲ್ಲಿ ದೂರದರ್ಶನ ಕಾರ್ಯಕ್ರಮವಾದ “ಬ್ರಹ್ಮ ಕುಮಾರರೊಂದಿಗೆ ಜಾಗೃತಿ”ಮೂಲಕ ಜನಪ್ರಿಯತೆಯನ್ನು ಗಳಿಸಿದ ಶಿವಾನಿಯವರು ವರ್ತಮಾನ ಸಮಯದಲ್ಲಿ ತಮ್ಮ ವಿಭಿನ್ನ ಶೈಲಿಯ ಪ್ರವಚನಗಳಿಂದ ಲಕ್ಷಾಂತರ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಮನುಷ್ಯರ ಮನಸ್ಸನ್ನು ಆಳವಾಗಿ ಅಧ್ಯಯನ ಮಾಡಿರುವ ಶಿವಾನಿಯವರು ಮಾನಸಿಕ ಕಾಯಿಲೆಗಳಾದ ಮಾನಸಿಕ ಒತ್ತಡ ಖಿನ್ನತೆ ಮೊದಲಾದವುಗಳಿಗೆ ತಮ್ಮ ಪ್ರವಚನಗಳ ಮೂಲಕ ಪರಿಹಾರ ಸೂಚಿಸುವುದನ್ನು ಕಂಡು ಮೆಚ್ಚಿದ ವಿಶ್ವ ಮನ:ಶಾಸ್ತ್ರಜ್ಞರ ಸಂಘ ಶಿವಾನಿಯವರನ್ನು ತಮ್ಮ ಸದ್ಭಾವನಾ ರಾಯಭಾರಿಯನ್ನಾಗಿ (ಗುಡ್ ವಿಲ್ ರಾಯಭಾರಿ) ನಿಯೋಜಿಸಿದೆ. ತಮ್ಮ ನಿಸ್ವಾರ್ಥ ಸೇವೆಯಿಂದ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿರುವ ಶಿವಾನಿಯವರು ಕಳೆದ ವರ್ಷ ಭಾರತದ ರಾಷ್ಟ್ರಪತಿ ಮಾನನೀಯ ರಾಮನಾಥ ಕೋವಿಂದ ಇವರಿಂದ ನಾರಿ ಶಕ್ತಿ ಸಮ್ಮಾನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಯು ಟ್ಯೂಬ್ ಹಾಗೂ ಫೇಸ್ ಬುಕ್‌ನಲ್ಲಿ ಮಿಲಿಯಾಂತರ ಅಭಿಮಾನಿಗಳನ್ನು ಹೊಂದಿರುವ ಬ್ರಹ್ಮಾಕುಮಾರಿ ಶಿವಾನಿಯವರು ಫೆಬ್ರುವರಿ 9 ರಂದು ನಗರದ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್‌ನ ನಲ್ಲಿ ನೀಡಲಿರುವ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ, ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದ್ವಿನಿಯೋಗಗೊಳಿಸಬೇಕೆಂದು ಮಂಗಳೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬಿ ಕೆ ವಿಶ್ವೇಶ್ವರಿಯವರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ www.townscript.com/e/pauceforpeace-mangaluru ಮತ್ತು www.townscript.com/e/Happiness-mangaluruಹಾಗೂ ಮೊಬೈಲ್ ನಂ : 8618626826, 9886247272, 7483383882, 9113941604 ಗೆ ಸಂಪರ್ಕಿಸಬಹುದು.

ಸೂಚನೆಗಳು

೧) ನೋಂದಣಿಯ ನಂತರ, ಜನವರಿ5 ರಿಂದ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಬ್ರಹ್ಮ ಕುಮಾರಿಸ್ ಕೇಂದ್ರದಲ್ಲಿ ಪ್ರವೇಶದ ಪಾಸ್‌ಗಳನ್ನು ಸಂಗ್ರಹಿಸಬೇಕು. ೧೨ ವ?ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಬಾಗವಹಿಸಲು ಅನುಮತಿ ಇಲ್ಲ.

೨) ಕಾರ್ಯಕ್ರಮದಲ್ಲಿ ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇಡಬೇಕು.

೩) ದಯವಿಟ್ಟು ಕಾರ್ಯಕ್ರಮದ 15 ನಿಮಿಷಗಳ ಮೊದಲು ಕುಳಿತುಕೊಳ್ಳಿ.

೪) ಯಾವುದೇ ಸಂಧರ್ಭ ದಲ್ಲಿ ನೀವು ಬಾಗವಹಿಸಲು ಅನಾನುಕೂಲ ವಾದರೆ ತೆಗೆದುಕೊಂಡ ಪಾಸನ್ನು ಆದಷ್ಟು ಬೇಗ ನಮಗೆ ಹಿಂದಿರುಗಿಸಿ ಇದರಿಂದ ನಾವು ನೋಂದಾಯಿಸಿದ ಇತರರಿಗೆ ನೀಡಿ ಅವರಿಗೆ ಅವಕಾಶ ಕಲ್ಪಿಸಬಹುದು.

ಕೇಂದ್ರ ವಿಳಾಸ – ಬ್ರಹ್ಮ ಕುಮಾರಿ “ವಿಶ್ವ ಶಾಂತಿ ಮಂದಿರ”, ಉರ್ವಾ ಪೊಲೀಸ್ ಠಾಣೆ ಹಿಂದೆ, ಮಹಾಗಣಪತಿ ದೇವಸ್ಥಾನದ ಹತ್ತಿರ, ಉರ್ವಾ ಸ್ಟೋರ್, ಮಂಗಳೂರು ಫೋನ್ ನಂ :  08242458141,9113941604

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English