ಕಂಬಳ ವೀರ ಶ್ರೀನಿವಾಸ ಗೌಡರ ದಾಖಲೆ ಮುರಿದ ಮತ್ತೋರ್ವ ಕಂಬಳ ವೀರ ನಿಶಾಂತ್​ ಶೆಟ್ಟಿ

12:37 PM, Tuesday, February 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

nishanth

ಮಂಗಳೂರು : ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆ ಹಿಂದಿಕ್ಕುವ ಮೂಲಕ ಜಾನಪದ ಕ್ರೀಡೆ ಕಂಬಳ ಪಟು ಶ್ರೀನಿವಾಸ ಗೌಡ ಹೊಸ ಸಾಧನೆ ಮಾಡಿದ್ದರು. ಅಚ್ಚರಿ ಎಂದರೆ, ಈಗ ಶ್ರೀನಿವಾಸ್ ಗೌಡ ಅವರ ದಾಖಲೆಯನ್ನೇ ಮತ್ತೋರ್ವ ಕಂಬಳ ಸ್ಪರ್ಧಿ ಮುರಿಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.

ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಸಾಧನೆ ಮಾಡಿದ ಯುವಕ. ವೇಣೂರಿನ ಪೆರ್ಮುಡ ಕಂಬಳದಲ್ಲಿ ನಿಶಾಂತ್ ಈ ಸಾಧನೆ ಮಾಡಿದ್ದಾರೆ. 143 ಮೀಟರ್‌ ದೂರವನ್ನು ನಿಶಾಂತ್ ಕೇವಲ 13.61 ಸೆಕೆಂಡ್ನಲ್ಲಿ ಓಡಿ ಸಾಧನೆ ಮಾಡಿದ್ದಾರೆ. ಈ ಮೂಲಕ ಶ್ರೀನಿವಾಸ ಗೌಡ ಅವರ ದಾಖಲೆಯನ್ನು ಮುರಿದಿದ್ದಾರೆ.

ನಿಶಾಂತ್ ಶೆಟ್ಟಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬಜಗೋಳಿಯವರು. ಶ್ರೀನಿವಾಸ್ ಗೌಡ 13.62 ಸೆಕೆಂಡ್ನಲ್ಲಿ 143 ಮೀಟರ್ ಕ್ರಮಿಸಿದ್ದರು. ಆದರೆ, ನಿಶಾಂತ್ ಗೌಡ ಈ ದೂರವನ್ನು ಕೇವಲ 13.61 ಸೆಕೆಂಡ್ಗಳಲ್ಲಿ ಓಡಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಇಡಿ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶ್ರೀನಿವಾಸ ಗೌಡ ಎಂಬುವವರು ಕಂಬಳ ಸ್ಪರ್ಧೆಯಲ್ಲಿ 143 ಮೀ. ಓಡುವಾಗ 100 ಮೀಟರ್ಅನ್ನು ಕೇವಲ 9.55 ಸೆಕೆಂಡ್ನಲ್ಲಿ ಕ್ರಮಿಸಿದ್ದರು. ಈ ದಾಖಲೆಯ ಓಟಕ್ಕೆ ದೇಶವೇ ನಿಬ್ಬೆರಗಾಗಿತ್ತು. ಅನೇಕರು ಟ್ವಿಟ್ಟರ್ನಲ್ಲಿ ಶ್ರೀನಿವಾಸ ಗೌಡಗೆ ಹೆಚ್ಚಿನ ತರಬೇತಿ ಸಿಗಬೇಕು ಎಂದು ಬರೆದುಕೊಂಡಿದ್ದರು.

ಈ ಬೆಳವಣಿಗೆ ನಂತರ ಕ್ರೀಡಾ ಸಚಿವ ಕಿರಣ್ ರಿಜಿಜು ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ಬರುವಂತೆ ಶ್ರೀನಿವಾಸ ಗೌಡಗೆ ಆಹ್ವಾನ ನೀಡಿದ್ದರು. ಆದರೆ, ಈ ಆಹ್ವಾನವನ್ನು ಅವರು ವಿನಮ್ರವಾಗಿ ತಿರಸ್ಕರಿಸಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English