ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರ ಸ್ಥಾಪನೆ.

9:22 PM, Tuesday, March 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

skfಕಟೀಲು: ಮುಂಬೈಯಿಯ ಸಮಾಜ ಸೇವಾ ಸಂಸ್ಥೆ ಸಂಜಿವನ್ ಚಾರಿಟೇಬಲ್ ಟ್ರಸ್ಟ್ ತನ್ನ ಸಮಾಜಮುಖಿ ಸೇವಾ ಯೋಜನೆಯ ಭಾಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದಲ್ಲಿ ಸಾರ್ವಜನಿಕರು ಶುದ್ಧ ನೀರನ್ನು ಬಳಸುವಂತೆ ಪ್ರೇರಿಪಿಸಲು 5 ನೀರು ಶುದ್ಧೀಕರಣ ಯಂತ್ರ( minaral Water purifier machine) ಗಳನ್ನು ಕೊಡುಗೆಯಾಗಿ ನೀಡಿದೆ. ಈ ನೀರು ಶುದ್ಧೀಕರಿಸುವ ಯಂತ್ರಗಳನ್ನು ಮೂಡ ಬಿದ್ರೆ ಯ ಎಸ್. ಕೆ. ಎಫ್. ಎಲಿಕ್ಷರ್ ಸಂಸ್ಥೆ ಸಂಶೋಧಿಸಿ ತಯಾರಿಸಿದೆ. ಸಂಜೀವಿನಿ ಚಾರಿಟೇಬಲ್ ಟ್ರಸ್ಟ್, ಪ್ಲಾಸ್ಟಿಕ್ ಮುಕ್ತ ಸ್ವಚ ಪರಿಸರವನ್ನು ರಕ್ಷಿಸಿ ಎಂಬ ಧ್ಯೇಯ ದೊಂದಿಗೆ ಸ್ವಚ್ ಕಟೀಲ್ ಪ್ರೊಜೆಕ್ಟ್ ನ ಅಂಗವಾಗಿ ಈ ಯಂತ್ರಗಳನ್ನು ಕಟೀಲು ದೇವಸ್ಥಾನ ಪರಿಸರದಲ್ಲಿ ಅಳವಡಿಸಲಾಗಿದೆ.

5ಯಂತ್ರಗಳನ್ನು ಕ್ರಮವಾಗಿ ದೇವಸ್ಥಾನದ ಪ್ರಾಂಗಣ, ಭೋಜನ ಶಾಲೆ,ವಿ ಐ ಪಿ ಹಾಲ್, ಬಸ್ ನಿಲ್ದಾಣ ಪರಿಸರ ದ ಸ್ಥಾಪಿಸಲಾಗಿದೆ. ಬಸ್ ನಿಲ್ದಾಣ ದಲ್ಲಿ ಇರಿಸಲಾದ ಯಂತ್ರದಲ್ಲಿ 2 ವಿಭಾಗ ಮಾಡ ಲಾಗಿದ್ದು ಒಂದು ಕಡೆಯಲ್ಲಿ ಶುದ್ಧೀಕರಿಸಿದ ಖನಿಜಯುಕ್ತ ನೀರನ್ನು ರೂಪಾಯಿ 1,5,10 ಉಪಯೋಗಿಸಿ ತಮ್ಮದೆ ಹಿತ್ತಾಳೆ, ತಾಮ್ರ, ಸ್ಟೀಲ್ ಪಾತ್ರೆ ಗಳನ್ನ ಬಳಸಿ ಕ್ರಮವಾಗಿ 1ಲೀಟರ್,5 ಲೀಟರ್,20 ಲೀಟರ್ ನ್ನು ಪಡೆಯಬಹುದಾಗಿದೆ. ಯಂತ್ರದ ಇನ್ನೊಂದು ಬದಿಯಲ್ಲಿ ಸಹ ಶುದ್ಧ ನೀರನ್ನು ತೆಗೆದು ಉಪಯೋಗಿಸ ಬಹುದು.ಪ್ರಧಾನಿ ಮೋದಿಯವರ ಆಶಯದಂತೆ ಪ್ಲಾಸ್ಟಿಕ್ ಮುಕ್ತ ಭಾರತ ಮತ್ತು ಸ್ವಚ್ಛ್ ಪರಿಸರ ಎಂಬ ಧ್ಯೇಯ ವಾನ್ನೂ ಮನದಲ್ಲಿಟ್ ಕೊಂಡು, ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲ್ ಬಳಸದೆ ಹಿತ್ತಾಳೆ ತಾಮ್ರ ಮತ್ತು ಸ್ಟೀಲ್ ಫ್ಲಾಸ್ಕ್ ಗಾಳನ್ನ ಉಪಯೋಗಿಸಿಕೊಂಡು ಶುದ್ಧೀಕರಿಸಿದ ಖನಿಜಯುಕ್ತ ನೀರನ್ನು ಬಳಸಲು ಪ್ರೇರೇಪಿಸಲಾಗುತಿದೆ.

ಸಂಜೀವ ನಿ ಚಾರಿಟೇಬಲ್ . ಟ್ರಸ್ಟ್ ಮತ್ತು ಎಸ್. ಕೆ. ಎಫ್. ಎಲಿಕ್ಷರ್ ಸಂಸ್ಥೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದಲ್ಲಿ ಕುಡಿಯುವ ಶುದ್ಧ ನೀರಿನ ಯಂತ್ರವನ್ನು ಉದ್ಘಾಟಿಸಲಾಯಿತು.ಈ ಸಮಾರಂಭದಲ್ಲಿ ಹರಿನಾರಾಯಣ ಅಸ್ರಣ್ಣ, ಡಾಕ್ಟರ್ ಸುರೇಶ್ ರಾವ್, ಜಯಪ್ರಕಾಶ್ ಮಾವಿನಕುಳಿ,SKF ನ ಎಂಡಿ ರಾಮಕೃಷ್ಣ ಆಚಾರ,ತೇಜಸ್ ಆಚಾರ ಮತ್ತು ಪ್ರಜ್ವಲ್ ಆಚಾರ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಹರಿನಾರಾಯಣ ಅಸ್ರಣ್ಣ, ಡಾಕ್ಟರ್ ಸುರೇಶ್ ರಾವ್, ಜಯಪ್ರಕಾಶ್ ಮಾವಿನಕುಳಿ,SKF ನ ಎಂಡಿ ರಾಮಕೃಷ್ಣ ಆಚಾರ,ತೇಜಸ್ ಆಚಾರ ಮತ್ತು ಪ್ರಜ್ವಲ್ ಆಚಾರ ಉಪಸ್ಥಿತಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English