ಬೆಂಗಳೂರು: ರೋಗಿಯ ರಕ್ತ ಪರೀಕ್ಷೆ ನಡೆಸಿ ಕೊರೋನಾ ಪತ್ತೆಹಚ್ಚುವುದರಲ್ಲಿ ಆತ ಸಾವನ್ನಪ್ಪಿರುತ್ತಾನೆ. ನಮ್ಮಲ್ಲಿ ಕೊರೋನಾ ತಪಾಸಣೆ ಕೇಂದ್ರಗಳಿಲ್ಲ. ಚೀನಾ ಸೇರಿ ಅನೇಕ ದೇಶದಲ್ಲಿರುವಂತೆ ತಪಾಸಣಾ ಕೇಂದ್ರ ಸ್ಥಾಪನೆ ಆಗಬೇಕು. ರಾಜ್ಯದಲ್ಲಿ ಕೊರೋನಾ ಹಾವಳಿ ತಡೆಯಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವರು ಅಭಿಪ್ರಾಯ ಪಟ್ಟರು.
ಇಷ್ಟೇ ಅಲ್ಲದೆ ಕೊರೋನಾ ವೈರಸ್ ದಾಳಿಯಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದ್ದು ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಕಾಳಜಿವಹಿಸಬೇಕು ಎಂದು ಇಬ್ರಾಹಿಂ ಹೇಳಿದ್ದಾರೆ.
ನಾಟಿ ಔಷಧಿ
ಕೊರೋನಾ ಮಾರಕ ರೋಗ ಬರದಂತೆ ತಡೆಯಲು ದಿನಕ್ಕೆ ಮೂರು ಹೊತ್ತು ಈರುಳ್ಳಿ ತಿನ್ನಬೇಕು, ಈರುಳ್ಳಿ ತಿನ್ನೋದ್ರಿಂದ ಕೊರೋನಾ ಬರಲ್ಲ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕೊರೋನಾ ವೈರಸ್ ರಾಜ್ಯದಾದ್ಯಂತ ಜನರಲ್ಲಿ ಭೀತಿ ಹುಟ್ಟಿಸಿದ್ದು ಮಾಜಿ ಸಚಿವ ಇಬ್ರಾಹಿಂ ರೋಗಕ್ಕೆ ನಾಟಿ ಔಷಧಿಯ ಸಲಹೆ ಕೊಟ್ಟಿದ್ದಾರೆ. ದಿನಕ್ಕೆ ಮೂರು ಬಾರಿ ಈರುಳ್ಳಿಗೆ ಉಪ್ಪು ಸೇರಿಸಿ ತಿಂದರೆ ಕೊರೋನಾ ಬರಲ್ಲ ಎಂದು ಇಬ್ರಾಹಿಂ ಹೇಳಿದ್ದಾರೆ.
Click this button or press Ctrl+G to toggle between Kannada and English