ರಂಜಾನ್‌ : ಹುಬ್ಬಳ್ಳಿಯಲ್ಲಿ ಕಿಲೋ ಚಿಕನ್‌ ಗೆ 300 ರೂ !

1:40 PM, Monday, May 25th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Chicken Rateಹುಬ್ಬಳ್ಳಿ : ವಿಶ್ವದೆಲ್ಲೆಡೆ ಇಂದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್‌ ಆಚರಿಸಲಾಗುತ್ತಿದೆ. ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿ ನಂತರ ಮನೆಯಲ್ಲಿ ಸಿಹಿ ತಿನಿಸು ಹಾಗೂ ಮಾಂಸಾಹಾರ ಅಡುಗೆ ಮಾಡಿ ತಮ್ಮ ಆಪ್ತರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದು ಆದರಾತಿಥ್ಯ ಮಾಡುತ್ತಿದ್ದರು.

ಆದರೆ ಈಗ ಕೋರೋನಾ ಭಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಮೂಹಿಕ ಪ್ರಾರ್ಥನೆಗೆ ಅನುಮತಿ ನೀಡಿಲ್ಲ. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಸೂಚಿಸಿದೆ.

ರಂಜಾನ್‌ ಸಮಯದಲ್ಲಿ ಮಾಂಸದೂಟಕ್ಕೆ ಹೆಚ್ಚು ಜನರು ಚಿಕನ್‌ ಅಡುಗೆ ಮಾಡುತ್ತಿದ್ದರೆ. ಆದರೆ, ಈಗ ಚಿಕನ್‌ ಬೆಲೆ ಗಗನಕ್ಕೇರಿದ್ದು, ಹಬ್ಬವನ್ನಾಚರಿಸುವ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಿದೆ.

ಈ ಹಿಂದೆ ವಿವಿಧ ರೀತಿಯ ಕೋಳಿ ಮಾಂಸಕ್ಕೆ 1 ಕಿಲೋಗೆ 159 ರಿಂದ 180 ರೂ. ಇರುತ್ತಿತ್ತು.

ಆದರೆ ಈಗ ಕೊರೋನಾ ಭೀತಿಯಲ್ಲಿ ಕೋಳಿ ಪಾರಂಗಳ ಬಂದ ಆಗಿವೆ. ಅಲ್ಲದೇ ಕೆಲವರು ಹಕ್ಕಿಜ್ವರದ ಭೀತಿಯಿಂದ ಕೋಳಿಗಳನ್ನು ದಾನ ಮಾಡಿದ್ದರು. ಆದರೆ ಇಂದು ಕೋಳಿಯ ಕೊರತೆಯಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಬಶೀರ್‌ ಅಹ್ಮದ್‌ ಪಠಾಣ.

ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರು ಬೆಲೆ ಹೆಚ್ಚಳದಿಂದ ಎಂದಿಗಿಂತ ಕಡಿಮೆ ಪ್ರಮಾಣದಲ್ಲಿ ಕೋಳಿ ಮಾಂಸ ಖರೀದಿಸಿ ಸರಳವಾಗಿ ಆಚರಿಸುತ್ತಿದ್ದಾರೆ.

ವರದಿ: ಶಂಭು
ಮೆಗಾಮೀಡಿಯಾ ನ್ಯೂಸ್‌ , ಹುಬ್ಬಳ್ಳಿ ಬ್ಯೂರೋ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English