ಹುಬ್ಬಳ್ಳಿ ಯಲ್ಲಿ ಸರಳವಾಗಿ ರಂಜಾನ್ ಆಚರಣೆ

8:14 PM, Monday, May 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

Hubli-Ramzanಹುಬ್ಬಳ್ಳಿ : ಅಲ್ತಾಫ್ ನಗರ ಮದೀನಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಹಕೀಮ್ ತಹಶಿಲ್ದಾರ ಅವರಿಂದ ನಮಾಜ ಪ್ರಾರ್ಥನೆ ಸಲ್ಲಿಸಿಲಾಯಿತು.  ಈದ್- ಉಲ್ಲ್ – ಪೀತರ್ ನಮಾಜ ವು ಬೆಳಿಗ್ಗೆ 9-30 ಕ್ಕೆ ಕೇವಲ 5 ಜನರು ಮಾತ್ರ ನಮಾಜ ಸಲ್ಲಿಸಿದರು.

ಕರೋನಾ ವೈರಸ್ ನಿಂದ ದೇಶ ಎದುರಿಸುತ್ತಿರುವ ಸಂಕಷ್ಟ ಗಳು ದೂರವಾಗಿ ಜನರು ನೆಮ್ಮದಿ ಜೀವನವನ್ನು ನಡೆಯುವಂತೆ ಆಗಲೇಂದು ಪ್ರಾರ್ಥನೆ ಮಾಡಲಾಯಿತು. ಅದರಂತೆ ಓಣಿಯ ಮುತವಲ್ಲಿ ಹಾಗೂ ಪಾಲಿಕೆಯ ಹಿರಿಯ ಸದಸ್ಯರು, ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷರು ಶ್ರೀ ಅಲ್ತಾಫ್ ನವಾಜ ಎಮ್ ಕಿತ್ತೂರು ಅವರು ಮಾತನಾಡುತ್ತಾ ನಾಡಿನ ಸಮಸ್ತ ಬಂಧುಗಳಿಗೆ ಈದ್- ಉಲ್ಲ್- ಪಿತರ್ , ಕುತುಬಾ- ಏ – ರಂಜಾನ್ ಹಬ್ಬದ ಶುಭಾಶಯ ಗಳು ಸಲ್ಲಿಸುತ್ತೇನೆ.ದೇವರು ಸುಖ, ಶಾಂತಿ, ಸಮ್ರದ್ದಿ ,ನೀಡಲೆಂದು ಹಾರೈಸುತ್ತೇನೆ.ಅದರಂತೆಯೇ ಹುಬ್ಬಳ್ಳಿ ಅಂಜುಮನ್- ಏ- ಇಸ್ಲಾಂ ಸಂಸ್ಥೆ ಯು ಮನೆಯಲ್ಲಿಯೇ ನಮಾಜ ಮಾಡಲು ಕೊಟ್ಟ ಪ್ರತಿಯೊಂದು ನಮ್ಮ ಮನವಿಗೆ ಸ್ಪಂದಿಸಿದ ಮುಸ್ಲಿಂ ಜನತೆಗೆ ಅಂಜುಮನ್ – ಏ- ಇಸ್ಲಾಂ ಸಂಸ್ಥೆ ಯ ವತಿಯಿಂದ ಕೃತಜ್ಞತೆ ಗಳನ್ನು ಸಲ್ಲಿಸುತ್ತೇವೆ ರಂಜಾನ್ 1 ತಿಂಗಳಲ್ಲಿ ನಮಾಜ್ ಸಲ್ಲಿಸಿ , ವಿಷೇಶವಾಗಿ ತರಾವಿ ನಮಾಜ್ ನಂತರದಲ್ಲಿ ರಾತ್ರಿ ಸುಮಾರು 3.30 ವೇಳೆಯಲ್ಲಿ ಎದ್ದು ಸಹರಿ ಮಾಡಿ ದಿನದ 14 ಗಂಟೆಗಳ ಉಪವಾಸವಿದ್ದು ಸಂಜೆಯ 7-00 ಗಂಟೆಗೆ ರೋಸಾ ಮುಕ್ತಾಯ ಮಾಡಿ ಈ ರೀತಿಯಲ್ಲಿ ಹಬ್ಬವನ್ನು ತುಂಬಾ ಖುಷಿ ಯಿಂದ ಹಬ್ಬ ಅಚರಣೆ ಮಾಡಲಾಯಿತು ಎಂದು ತಮ್ಮ ಸಂತೋಷ ವನ್ನು ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ  ಶ್ರೀ ಅಲ್ಲಾಬಕ್ಷ ಸವಣೂರು, ಶ್ರೀ ಎ.ಎಮ್.ಮಸೂತಿ,ಶ್ರೀ ನನ್ನೇಸಾಬ ನಲ್ಲಿಕೊಪ್ಪ ಉಪಸ್ಥಿತಿ ಇದ್ದರು.

ಸರ್ವರಿಗೂ ಪವಿತ್ರ ರಂಜಾನ್ ಪವಿತ್ರ ಹಬ್ಬದ ಶುಭಾಶಯ ಗಳು ಇಂದು ದಿ.25-5-2020 ರಂದು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English