ಪತಿಗೆ ದೀರ್ಘಾಯುಷ್ಯ ಲಭಿಸಬೇಕೆಂದು ಹಾಗೂ ಏಳು ಜನ್ಮವೂ ಅವರ ಪ್ರಾಪ್ತಿಗಾಗಿ ಹಿಂದೂ ಸ್ತ್ರೀಯರು ವಟಪೂರ್ಣಿಮೆಯ ವ್ರತವನ್ನು ಮಾಡುತ್ತಾರೆ. ಶಾಸ್ತ್ರಚರ್ಚೆಯಲ್ಲಿ ಯಮನನ್ನು ಸೋಲಿಸಿ ಹರಣವಾದ ಅವಳ ಪತಿಯ ಪ್ರಾಣವನ್ನು ಹಿಂದೆ ಪಡೆಯುವ ಸಾವಿತ್ರಿಯ ಪಾತಿವ್ರತ್ಯದ ಪ್ರತೀಕವೆಂದು ಈ ವ್ರತವನ್ನು ಮಾಡಲಾಗುತ್ತದೆ. ಸಾವಿತ್ರಿ ಮತ್ತು ಯಮನ ಸಂಭಾಷಣೆಯು ವಟವೃಕ್ಷದ ಕೆಳಗೆ ಆದುದರಿಂದ ಆ ದಿನ ವಟವೃಕ್ಷಕ್ಕೆ ಮಹತ್ವ ಲಭಿಸಿತು. ವಟವೃಕ್ಷ ಹಾಗೂ ವಟಪೂರ್ಣಿಮೆಯ ಮಹತ್ವವು ಸನಾತನ ಸಂಸ್ಥೆಯ ವತಿಯಿಂದ ಸಂಕಲನ ಮಾಡಿದ ಈ ಲೇಖನದಿಂದ ತಿಳಿದುಕೊಳ್ಳೋಣ. ಅದರೊಂದಿಗೆ ಸದ್ಯ ಕೊರೋನಾದಿಂದಾಗಿ ವಟಪೂರ್ಣಮೆ ವ್ರತ ಹೇಗೆ ಮಾಡಬೇಕು ಎಂಬುದರ ಬಗ್ಗೆಯೂ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.
1. ತಿಥಿ : ವಟಪೂರ್ಣಿಮೆಯ ವ್ರತವನ್ನು ಜ್ಯೇಷ್ಠ ಹುಣ್ಣಿಮೆಯಂದು ಮಾಡುತ್ತಾರೆ.
2. ಉದ್ದೇಶ : ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವೂ ವೃದ್ಧಿಯಾಗ ಬೇಕೆಂದು ಸ್ತ್ರೀಯರು ಈ ವ್ರತವನ್ನು ಪ್ರಾರಂಭಿಸಿದರು.
3. ಸಾವಿತ್ರಿಯ ಮಹತ್ವ : ಭರತಖಂಡದಲ್ಲಿ ಪ್ರಸಿದ್ಧಿ ಹೊಂದಿರುವ ಪತಿವ್ರತೆಯರಲ್ಲಿ ಸಾವಿತ್ರಿಯೂ ಆದರ್ಶಳಾಗಿದ್ದಾಳೆ; ಹಾಗೆಯೇ ಅವಳನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ.
4. ವ್ರತದ ದೇವತೆ : ಈ ವ್ರತದ ಪ್ರಧಾನ ದೇವತೆ ಸಾವಿತ್ರಿ ಸಹಿತ ಬ್ರಹ್ಮದೇವನಾಗಿದ್ದು ಸತ್ಯವಾನ, ನಾರದ ಮತ್ತು ಯಮಧರ್ಮ ಇವರು ಉಪ (ಗೌಣ) ದೇವತೆಗಳಾಗಿದ್ದಾರೆ.
5. ವಟವೃಕ್ಷದ ಮಹತ್ವ : ಯಮಧರ್ಮನು ಸತ್ಯವಾನನ ಪ್ರಾಣಹರಣ ಮಾಡಿದ ನಂತರ ಸಾವಿತ್ರಿಯು ಯಮಧರ್ಮನೊಂದಿಗೆ ಸತತವಾಗಿ ಮೂರು ದಿನ ಶಾಸ್ತ್ರಚರ್ಚೆಯನ್ನು ಮಾಡಿದಳು. ಆಗ ಯಮಧರ್ಮನು ಪ್ರಸನ್ನನಾಗಿ ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಶಾಸ್ತ್ರಚರ್ಚೆಯು ವಟವೃಕ್ಷದ ಕೆಳಗೆ ನಡೆಯಿತು. ಆದುದರಿಂದ ವಟವೃಕ್ಷದೊಂದಿಗೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು.
ಅ. ‘ಪ್ರಳಯವಾದರೂ ವಟವೃಕ್ಷವು (ಆಲದ ಮರ) ಇದ್ದೇ ಇರುತ್ತದೆ. ಅದು ಯುಗಾಂತ್ಯದ ಸಂಗಾತಿಯಾಗಿದೆ.
ಆ. ಬಾಲ ಮುಕುಂದನು ಪ್ರಳಯಕಾಲದಲ್ಲಿ ವಟದ ಎಲೆಯ ಮೇಲೆ ಮಲಗಿದ್ದನು.
ಇ. ಪ್ರಯಾಗದ ಅಕ್ಷಯ ವಟದ ಕೆಳಗೆ ರಾಮ, ಲಕ್ಷ್ಮಣ ಮತ್ತು ಸೀತೆಯರು ವಿಶ್ರಮಿಸಿದ್ದರು.
ಈ. ವಟವೃಕ್ಷವು ಬ್ರಹ್ಮ, ಶ್ರೀವಿಷ್ಣು, ಮಹೇಶ, ನೃಸಿಂಹ, ನೀಲ ಮತ್ತು ಮಾಧವರ ನಿವಾಸಸ್ಥಾನವಾಗಿದೆ.
ಉ. ವಟ, ಅಶ್ವತ್ಥ, ಅತ್ತಿ ಮತ್ತು ಶಮಿ (ಬನ್ನಿ) ಇವು ಪವಿತ್ರ ಮತ್ತು ಯಜ್ಞ ವೃಕ್ಷಗಳಾಗಿವೆ ಎಂದು ಹೇಳಲಾಗಿದೆ. ಇವೆಲ್ಲ ವೃಕ್ಷಗಳಲ್ಲಿ ವಟವೃಕ್ಷದ ಆಯುಷ್ಯವು ಅತ್ಯಧಿಕವಾಗಿದ್ದು ಕೊಂಬೆಗಳಿಂದ ನೆಲದ ವರೆಗೆ ಬರುವ ಬೇರುಗಳಿಂದ ಇದು ತುಂಬಾ ವಿಸ್ತಾರವಾಗುತ್ತದೆ.
ಊ. ವಟದಲ್ಲಿನ ಬಿಳಿ ಹಾಲಿನಲ್ಲಿ ಕರ್ಪೂರವನ್ನು ಅರೆದು ಅದರ ಅಂಜನವನ್ನು ಕಣ್ಣಿನಲ್ಲಿ ಹಾಕಿದರೆ ಕಣ್ಣಿನ ಪೊರೆ (ಮೋತಿಬಿಂದು) ಗುಣವಾಗುತ್ತದೆ.
ಎ. ಅಕ್ಷಯವೆಂಬ ಪ್ರಾಣದ ಪ್ರತೀಕವಾಗಿರುವುದು : ವಟಸಾವಿತ್ರಿಯ ಪೂಜೆ ಎಂದರೆ ‘ಸಾವಿತ್ರಿಯ ಪಾತಿವ್ರತ್ಯದ ಸಾಮರ್ಥ್ಯದ ಪೂಜೆ’; ಆದ್ದರಿಂದ ಈ ದಿನ ವಟವೃಕ್ಷದ ಪೂಜೆ ಮಾಡಲಾಗುತ್ತದೆ. ವಟವೃಕ್ಷವು ಅಕ್ಷಯದಂತಹ ಪ್ರಾಣದ ಪ್ರತೀಕವಾಗಿದೆ.’ – ಪರಾತ್ಪರ ಗುರು ಪಾಂಡೆ ಮಹಾರಾಜರು.
6.ವಟ ಪೂರ್ಣಿಮೆಯ ಮಹತ್ವ
ವಟವು ಶಿವಸ್ವರೂಪವಾಗಿದೆ. ವಟವೃಕ್ಷದ ಪೂಜೆ ಮಾಡುವುದೆಂದರೆ ಒಂದು ರೀತಿಯಲ್ಲಿ ವಟದ ಮಾಧ್ಯಮದಿಂದ ಶಿವಸ್ವರೂಪಿ ಪತಿಯನ್ನು ಸ್ಮರಿಸಿ, ಅವನ ಆಯುಷ್ಯ ವೃದ್ಧಿಯಾಗಿ ಅವನ ಆಯುಷ್ಯದಲ್ಲಿನ ಪ್ರತಿಯೊಂದು ಕರ್ಮಕ್ಕೆ ಜೊತೆ ಸಿಗಲಿ ಎಂಬುದಕ್ಕಾಗಿ ಈಶ್ವರನ ಪೂಜೆ ಮಾಡುವುದು. ಕರ್ಮಕ್ಕೆ ಶಿವನ ಜೊತೆಯಿದ್ದರೆ, ಶಕ್ತಿ ಮತ್ತು ಶಿವ ಇವರ ಸಂಯುಕ್ತ ಕ್ರಿಯೆಯಿಂದ ವ್ಯವಹಾರದಲ್ಲಿನ ಕರ್ಮವು ಸಾಧನೆಯೆಂದಾಗಿ ಅದರಿಂದ ಜೀವಕ್ಕೆ ಲಾಭವಾಗುತ್ತದೆ.
7. ವಟಪೂರ್ಣಿಮೆ ಈ ವ್ರತದ ಪೂಜೆಯಲ್ಲಿ ಕೇವಲ ಐದು ಹಣ್ಣುಗಳನ್ನು ಅರ್ಪಿಸುವ ಹಿಂದಿನ ಶಾಸ್ತ್ರ
‘ಯಾವುದೇ ಪೂಜೆಯಲ್ಲಿ ಐದು ಹಣ್ಣುಗಳನ್ನು ಅರ್ಪಿಸುವುದು ಮಹತ್ವದ್ದಾಗಿದೆ. ಹಣ್ಣುಗಳು ಮಧುರ ರಸದ, ಅಂದರೆ ಆಪತತ್ತ್ವದ ಪ್ರತೀಕವಾಗಿರುವುದರಿಂದ ದೇವತೆಗಳ ಅಲೆಗಳು ಐದು ಹಣ್ಣುಗಳ ಗುಂಪಿನ ಕಡೆಗೆ ಆಕರ್ಷಿತವಾಗುತ್ತವೆ ಮತ್ತು ಪ್ರಕ್ಷೇಪಿಸಲ್ಪಡುತ್ತವೆ. ಅವು ಅಲ್ಪಾವಧಿಯಲ್ಲಿಯೇ ಜೀವದ ಕೋಶಗಳ ತನಕ ತಲುಪಬಹುದು. ಇದು ಜೀವಕ್ಕೆ ಆಳವಾಗಿ ಮತ್ತು ದೀರ್ಘಕಾಲದವರೆಗೆ ದೇವತೆಯ ಚೈತನ್ಯ ಲಹರಿಗಳಿಂದ ಲಾಭ ಪಡೆಯಲು ಸಹಾಯ ಮಾಡುತ್ತದೆ; ಏಕೆಂದರೆ ಜೀವದ ದೇಹವು ಪೃಥ್ವಿ ಮತ್ತು ಆಪತತ್ತ್ವಾತ್ಮಕವಾಗಿವೆ.’
8. ವ್ರತವನ್ನು ಆಚರಿಸುವ ಪದ್ಧತಿ
ಅ. ಸಂಕಲ್ಪ : ಪ್ರಾರಂಭದಲ್ಲಿ ಸೌಭಾಗ್ಯವತಿ ಸ್ತ್ರೀಯು ‘ನನಗೆ ಮತ್ತು ನನ್ನ ಪತಿಗೆ ಆರೋಗ್ಯಸಂಪನ್ನ ದೀರ್ಘಾಯುಷ್ಯ ದೊರೆಯಲಿ, ಎಂದು ಸಂಕಲ್ಪ ಮಾಡಬೇಕು.
ಆ. ಪೂಜೆ :ವಟಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಪೂಜೆಯಲ್ಲಿ ಅಭಿಷೇಕವಾದ ನಂತರ ವಟಕ್ಕೆ ದಾರವನ್ನು ಸುತ್ತಬೇಕು, ಅಂದರೆ ವಟದ ಕೊಂಬೆಯ ಸುತ್ತಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಹತ್ತಿಯ ದಾರದಿಂದ ಮೂರು ಸುತ್ತು ಸುತ್ತಬೇಕು. ಪೂಜೆಯ ಕೊನೆಯಲ್ಲಿ ‘ಅಖಂಡ ಸೌಭಾಗ್ಯ ಲಭಿಸಲಿ. ಜನ್ಮಜನ್ಮಾಂತರ ಇದೇ ಪತಿ ಲಭಿಸಲಿ ಹಾಗೆಯೇ ಧನಧಾನ್ಯ ಮತ್ತು ಕುಲದ ವೃದ್ಧಿಯಾಗಲಿ, ಎಂದು ಸಾವಿತ್ರೀಸಹಿತ ಬ್ರಹ್ಮದೇವನಿಗೆ ಪ್ರಾರ್ಥನೆಯನ್ನು ಮಾಡುತ್ತಾರೆ.
ಇ . ಉಪವಾಸ : ಸ್ತ್ರೀಯರು ಸಂಪೂರ್ಣ ದಿನ ಉಪವಾಸವನ್ನು ಮಾಡಬೇಕು. (ಬುದ್ಧಿಜೀವಿಗಳು ಹಾಗೆಯೇ ಅಂಧಶ್ರದ್ಧಾ ನಿರ್ಮೂಲನ ಸಮಿತಿಯು, ಅಂದರೆ ಅಂನಿಸದ ಕಾರ್ಯಕರ್ತರು ‘ವಟಪೂರ್ಣಿಮೆ ಎಂದರೆ ಕೇವಲ ‘ಸುಳ್ಳುಕತೆಯಾಗಿದೆ ಎಂದು ಅಪಪ್ರಚಾರ ಮಾಡುತ್ತಾರೆ. ಕಣಕಣಗಳಲ್ಲಿ ದೇವತೆಗಳ ಅಸ್ತಿತ್ವವನ್ನು ಮನ್ನಿಸಿ ವೃಕ್ಷದೇವತೆಯನ್ನು ಪೂಜಿಸಲು ಕಲಿಸುವ ಮಹಾನ್ ಹಿಂದೂ ಧರ್ಮವೆಲ್ಲಿ ಮತ್ತು ಹಿಂದೂ ಧರ್ಮವನ್ನು ಅಸತ್ಯವೆಂದು ನಿರ್ಧರಿಸುವ ಬುದ್ಧಿಪ್ರಾಮಾಣ್ಯವಾದಿ, ಧರ್ಮದ್ರೋಹಿ ಮತ್ತು ಸಾಮ್ಯವಾದಿಗಳೆಲ್ಲಿ !)
ಮುಖ್ಯ ವಿಷಯ
ಇದು ವರೆಗೆ ನಾವು ತಿಳಿದುಕೊಂಡ ವಟಪೂರ್ಣಿಮೆಯ ಶಾಸ್ತ್ರವು, ಸರ್ವಸಾಮಾನ್ಯ ಕಾಲದಲ್ಲಿ ಪಾಲಿಸಬೇಕಾದ ಧರ್ಮದಲ್ಲಿ ಹೇಳಲಾದ ಶಾಸ್ತ್ರವಾಗಿದೆ. ಎಲ್ಲವೂ ಅನುಕೂಲಕರವಾಗಿದ್ದು ಧರ್ಮದಲ್ಲಿ ಹೇಳಿದಂತೆ ವರ್ತಿಸಬಹುದು, ಇದಕ್ಕೆ ‘ಸಂಪತ್ಕಾಲ’ ಎನ್ನಬಹುದು.
ಇಲ್ಲಿ ಮಹತ್ವದ ಅಂಶವೆಂದರೆ, ಹಿಂದೂ ಧರ್ಮವು ಆಪತ್ಕಾಲಕ್ಕಾಗಿ ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಅದನ್ನು ‘ಆಪದ್ಧರ್ಮ’ ಎಂದು ಹೇಳುತ್ತಾರೆ. ಆಪದ್ಧರ್ಮ ಅಂದರೆ ‘ಆಪದಿ ಕರ್ತವ್ಯೋ ಧರ್ಮಃ |’ ಅಂದರೆ ‘ವಿಪತ್ತಿನಲ್ಲಿ ಆಚರಣೆಯಲ್ಲಿ ತರುವಂತಹ ಧರ್ಮ’. ಸದ್ಯ ಕೊರೋನಾದ ಹಾವಳಿಯಿಂದಾಗಿ ದೇಶದಾದ್ಯಂತ ಸಂಚಾರ ನಿಷೇಧ (ಲಾಕ್‌ಡೌನ್) ಇದೆ. ಈ ಕಾಲದಲ್ಲಿಯೇ ವಟಪೂರ್ಣಿಮೆ ಇರುವುದರಿಂದ ಸಂಪತ್ಕಾಲದಲ್ಲಿ ಹೇಳಿದಂತೆ ಕೆಲವು ಧಾರ್ಮಿಕ ಕೃತಿಗಳು ಈ ಸಮಯದಲ್ಲಿ ಮಾಡಲು ಆಗುವುದಿಲ್ಲ. ಈ ದೃಷ್ಟಿಯಿಂದ ಪ್ರಸ್ತುತ ಲೇಖನದಲ್ಲಿ ಸದ್ಯದ ದೃಷ್ಟಿಯಿಂದ ಧರ್ಮಾಚರಣೆ ಎಂದು ಏನೆಲ್ಲ ಮಾಡಬಹುದು, ಎಂಬುದರ ಬಗ್ಗೆ ವಿಚಾರವೂ ಮಾಡಲಾಗಿದೆ. ಇಲ್ಲಿ ಮಹತ್ವದ ಅಂಶವೆಂದರೆ, ಹಿಂದೂ ಧರ್ಮವು ಮನುಷ್ಯನ ಬಗ್ಗೆ ಎಷ್ಟು ಆಳವಾದ ವಿಚಾರ ಮಾಡಿದೆ, ಎಂಬುದು ಕಲಿಯಲು ಸಿಗುತ್ತದೆ. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆಯು ಗಮನಕ್ಕೆ ಬರುತ್ತದೆ.
ಕೊರೋನಾದ ಹಾವಳಿಯಿಂದ ಪ್ರಸ್ತುತ ನಾವು ಹೆಚ್ಚಾಗಿ ಮನೆ ಹೊರಗೆ ಹೋಗಲಾಗುವುದಿಲ್ಲ. ಆದುದರಿಂದ ಆಪತ್ಧರ್ಮದ ಭಾಗವೆಂದು ನಾವು ಮುಂದಿನ ಕೃತಿಗಳನ್ನು ಮಾಡಬಹುದು.
ಆಪತ್ಕಾಲದ ವಟಪೂರ್ಣಿಮೆ (ಆಲದ ಮರದ ಪೂಜೆ)!
5.06.2020 ರಂದು ವಟಪೂರ್ಣಿಮೆ ಇದೆ. ಭಾರತದಲ್ಲಿ ಲಾಕ್‌ಡೌನ್‌ದಿಂದಾಗಿ ಮಹಿಳೆಯರು ವಟವೃಕ್ಷದ ಹತ್ತಿರ ಒಟ್ಟಿಗೆ ಸೇರಿ ವಟವೃಕ್ಷವನ್ನು ಪೂಜಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವರು ವಟವೃಕ್ಷದ ಟೊಂಗೆಯನ್ನು ಮನೆಯೊಳಗೆ ತಂದು ಪೂಜಿಸುತ್ತಾರೆ; ಅದು ಸಹ ಸಂಪೂರ್ಣವಾಗಿ ಯೋಗ್ಯವಲ್ಲ ಮತ್ತು ವೃಕ್ಷದ ಪೂಜೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಸೌಭಾಗ್ಯವತಿ ಸ್ತ್ರೀಯು ಮನೆಯಿಂದ ಹೊರಗೆ ಹೋಗದೇ ಮನೆಯಲ್ಲಿ ಮುಂದಿನಂತೆ ಪೂಜೆ ಮಾಡಬೇಕು :
1. ಮಣೆ ಅಥವಾ ಚೌರಂಗಕ್ಕೆ ಪ್ರದಕ್ಷಿಣೆಯನ್ನು ಹಾಕಲು ಸಾಧ್ಯವಾಗುವ ರೀತಿಯಲ್ಲಿ ಮಣೆ ಅಥವಾ ಚೌರಂಗವನ್ನು ಪೂರ್ವ-ಪಶ್ಚಿಮವಾಗಿ ಇಡಬೇಕು.
2. ಮಣೆ ಅಥವಾ ಚೌರಂಗದ ಮೇಲೆ ಗಂಧದಿಂದ ಆಲದ ಮರದ ರೇಖಾಚಿತ್ರವನ್ನು ಬಿಡಿಸಬೇಕು.
3. ನಾವು ಪ್ರತ್ಯಕ್ಷ ವಟವೃಕ್ಷದ ಕೆಳಗೆ ಕುಳಿತಿದ್ದೇವೆ ಎನ್ನುವ ಭಾವವನ್ನು ಇಟ್ಟುಕೊಂಡು ಅದನ್ನು ವಿಧಿವತ್ತಾಗಿ ಪೂಜಿಸಬೇಕು.
4.ನಾವು ಪ್ರತ್ಯಕ್ಷ ವಟವೃಕ್ಷಕ್ಕೇ ಪ್ರದಕ್ಷಿಣೆಯನ್ನು ಹಾಕುತ್ತಿದ್ದೇವೆ ಎನ್ನುವ ಭಾವವನ್ನಿಟ್ಟುಕೊಂಡು ಮಣೆಗೆ ಪ್ರದಕ್ಷಿಣೆಯನ್ನು ಹಾಕುತ್ತ ದಾರವನ್ನು ಸುತ್ತಬೇಕು ಮತ್ತು ಪತಿಗೆ ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸಬೇಕು.
೫.ನಗರದಲ್ಲಿ ‘ಫ್ಲಾಟ್ನಲ್ಲಿ ವಾಸಿಸುವ ವ್ಯಕ್ತಿಗಳಿಗೆ ಮನೆಯಲ್ಲಿ ಸಾಕಷ್ಟು ಜಾಗವಿಲ್ಲದಿದ್ದರೆ, ಅವರು ಪೂಜೆಯ ಬಳಿಕ ಪ್ರಾರ್ಥಿಸಿ ಮಣೆಯನ್ನು ಪಕ್ಕಕ್ಕೆ ಇರಿಸಿದರೂ ಪರವಾಗಿಲ್ಲ.
– ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ರಾಮನಾಥಿ, ಗೋವಾ.
ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ’
ಸ್ಥಳೀಯ ಸಂಪರ್ಕ : 93425 99299
Click this button or press Ctrl+G to toggle between Kannada and English