ಮಂಗಳೂರು : ಆ ಪುಟ್ಟ ಮಗುವನ್ನೂ ಬಿಡಲಿಲ್ಲ ಕೊರೋನಾ, ಮಗು ಹುಟ್ಟಿ ಕೇವಲ ಎರಡೇ ತಿಂಗಳು, ಇನ್ನಷ್ಟೇ ಪ್ರಪಂಚ ನೋಡಬೇಕಿತ್ತು. ಆದರೆ ಆ ಮಗುವಿಗೆ ದೈತ್ಯ ಕೊರೋನಾ ದ ಜೊತೆ ಹೋರಾಡಲು ಸಾಧ್ಯವಾಗಲೇ ಇಲ್ಲ. ಕೊರೋನಾ ತನ್ನ ಮನೆಯವರನ್ನು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಬಿಡಲಿಲ್ಲ ಕೊನೆಗೆ ಮಗುವಿನ ಅಂತ್ಯಸಂಸ್ಕಾರ ವನ್ನು ಬಜರಂಗದಳದ ಕಾರ್ಯಕರ್ತರು ನಡೆಸಬೇಕಾಯಿತು.
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಗಾಣದಕೊಟ್ಯದ ದಂಪತಿಯ ಎರಡು ತಿಂಗಳ ಈ ಮಗು ವಾಂತಿ, ಕಫದಿಂದ ಬಳಲುತ್ತಿತ್ತು. ಆದ್ದರಿಂದ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಸುದ್ದಿ ತಿಳಿದ ಬಜರಂಗದಳದ ಕಾರ್ಯಕರ್ತರು ಮೃತ ಮಗುವಿಗೆ ಕೋವಿಡ್ ನಿಯಮದಂತೆ ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಗುವಿಗೆ ಕೊರೊನಾ ಸೋಂಕು ಲಕ್ಷಣಗಳಿರುವ ಕಾರಣ ನಾಲ್ವರು ಬಜರಂಗದಳದ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಸಾಕಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ಅಂತ್ಯಸಂಸ್ಕಾರಕ್ಕಾಗಿ ಅವರು ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದಿದ್ದಾರೆ.
ಸೂಕ್ತ ವಿಧಿವಿಧಾನದ ಮೂಲಕ ಅಂತ್ಯಸಂಸ್ಕಾರ ನಡೆಸಲಾಯಿತು. ಈ ವೇಳೆ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಸಾಕಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ಅಂತ್ಯಸಂಸ್ಕಾರದ ದೃಶ್ಯ ಎಂತಹಾ ಕಲ್ಲು ಹೃದಯಿಗಳನ್ನೂ ಕರಗಿಸುವಂತಿತ್ತು.
Click this button or press Ctrl+G to toggle between Kannada and English